ರಾಜ್ಯದಲ್ಲಿ ಮಾದಕ ದ್ರವ್ಯ ಮತ್ತು ಡ್ರಗ್ಸ್ ಅನ್ನು ಮಾತ್ರೆ, ಇಂಜೆಕ್ಷನ್ ಹಾಗೂ ಚಾಕಲೇಟ್ ರೂಪದಲ್ಲಿ ಮೆಡಿಕಲ್ ಸ್ಟೋರ್ಗಳಲ್ಲಿ ಮಾರಾಟ ಮಾಡಲಾಗುತ್ತಿರುವ ವಿಚಾರ ಆತಂಕಕಾರಿ. ಬೆಂಗಳೂರಿಗೆ ಸೀಮಿತ ವಾಗಿದ್ದ ಈ ಪ್ರಕರಣ ಈಗ ರಾಜ್ಯದ ಹಲವು ನಗರಗಳಿಂದಲೂ ವರದಿ ಯಾಗುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರೇ ಈ ವಿಷಯವನ್ನು ದೃಢಪಡಿಸಿದ್ದಾರೆ. ಬೆಂಗಳೂರಿನ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಏರಿಯಾದ ಸುತ್ತ ಮುತ್ತ ನಿಷೇಽತ ಡ್ರಗ್ಸ್ ಮೆಡಿಕಲ್ ಸ್ಟೋರ್ಗಳಲ್ಲಿ ಲಭ್ಯವಾಗುತ್ತಿರುವ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ಅಧಿಕಾರಿಗಳು ಮತ್ತು ಪೊಲೀಸರು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಮಾದಕ ದ್ರವ್ಯ ಸಂಗ್ರಹ, ಮಾರಾಟ, ಸಾಗಾಟ ಮತ್ತು ಸೇವನೆ ಸಂಬಂಧ 100ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನೂರಾರು ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆದರೆ ದಿನದಿಂದ ದಿನಕ್ಕೆ ಈ ಪ್ರಕರಣಗಳು ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಬೆಂಗಳೂರು ನಗರವೊಂದರಲ್ಲಿಯೇ ಸೆಪ್ಟೆಂಬರ್ ತಿಂಗಳಲ್ಲಿ ಮಾದಕದ್ರವ್ಯ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿಯರು ಸೇರಿದಂತೆ 67 ಮಂದಿಯನ್ನು ಬಂಧಿಸಲಾಗಿತ್ತು. ಇವರಿಂದ ನೂರಾರು ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಕಳೆದ ತಿಂಗಳು ಮಂಗಳೂರಿನಲ್ಲಿ ಬಂಧಿತ ನೈಜೀರಿಯಾ ಪ್ರಜೆಯಿಂದ ಆರು ಕೋಟಿಗೂ ಹೆಚ್ಚು ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಕಳೆದ ಏಳೆಂಟು ತಿಂಗಳಲ್ಲಿ ಸುಮಾರು 80 ವಿದೇಶಿಗರನ್ನು ಅವರ ದೇಶಗಳಿಗೆ ಗಡೀಪಾರು ಮಾಡಲಾಗಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ನಮ್ಮ ಜೈಲುಗಳೆಲ್ಲವೂ ಇವರಿಂದಲೇ ತುಂಬುವ ಸಾಧ್ಯತೆ ಇದೆ.
ಗುಜರಾತ್ ತೀರದಲ್ಲಿ ಕಳೆದ ವಾರ ಭಾರತೀಯ ನೌಕಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳವಾರ 600 ಕೋಟಿ ರುಪಾಯಿಗಳಿಗೂ ಅಧಿಕ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡು ಎಂಟು ಮಂದಿ ಇರಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು. ಖಲಿಸ್ತಾನಿ ಉಗ್ರರು ಸೇರಿದಂತೆ ವಿದೇಶಿ ಶಕ್ತಿಗಳು ಭಾರತದಲ್ಲಿ ಮಾದಕ ದ್ರವ್ಯ ಜಾಲ ಹರಡಲು ಸತತ ಪ್ರಯತ್ನ ನಡೆಸುತ್ತಿರುವ ಬಗ್ಗೆ ನಮ್ಮ ಗುಪ್ತಚರ ದಳ ಈ ಹಿಂದೆಯೇ ಮಾಹಿತಿ ನೀಡಿದೆ. ಈ ಖದೀಮರನ್ನು ಗುರುತಿಸಿ ಬಂಽಸುವ ಜತೆಗೆ ನಮ್ಮ ಯುವಕ/ ಯುವತಿಯರಲ್ಲಿ ಮಾದಕ ದ್ರವ್ಯ ಸೇವೆನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ