Tuesday, 19th November 2024

Vishweshwar Bhat Column: ದುಬೈನ ಕೆಲವು ವೈಶಿಷ್ಟ್ಯಗಳು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ ಅತಿದೊಡ್ಡ ನಗರವಾದ ದುಬೈನಲ್ಲಿ ಏನು ಬೇಕಾದರೂ ಸಾಧ್ಯ. ಅದನ್ನು ‘ಅಂತ್ಯವಿಲ್ಲದ ಸಾಧ್ಯತೆಗಳ ನಗರ’ ಎಂದು ಕರೆಯುತ್ತಾರೆ. ನೀವು ಊಹಿಸಿದ್ದೆಲ್ಲವೂ ದುಬೈನಲ್ಲಿ ಸಾಧ್ಯವಂತೆ. ಅಲ್ಲಿ ಯಾವುದೂ ಅಸಾಧ್ಯ ಎಂಬುದೇ ಇಲ್ಲ. ಹಲವಾರು ದಾಖಲೆ ಮುರಿಯುವ ಆಕರ್ಷಣೆಗಳು, ಐಷಾರಾಮಿ ಹೋಟೆಲ್‌ಗಳು, ಕುಟುಂಬ-ಸ್ನೇಹಿ ಥೀಮ್ ಪಾರ್ಕ್‌ಗಳು, ವಿಶ್ವ ದರ್ಜೆಯ ಶಾಪಿಂಗ್ ಮಾಲ್‌ಗಳು ಮತ್ತು ಮಾಡಬೇಕಾದ ಕೆಲಸಗಳೊಂದಿಗೆ, ದುಬೈ ಪ್ರಪಂಚದಾದ್ಯಂತದ ಜನರಿಗೆ ಹೆಚ್ಚು ಇಷ್ಟವಾದ ಸ್ಥಳಗಳಲ್ಲಿ ಒಂದಾಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಪ್ರವಾಸಿಗರ ಒಳಹರಿವಿನಿಂದಾಗಿ ದುಬೈ ಮಧ್ಯಪ್ರಾಚ್ಯ ಮತ್ತು ವಿಶ್ವದ ಜನಪ್ರಿಯ ಪ್ರವಾಸಿ ತಾಣವಾಗಿದೆ.

ವಾಸ್ತವವಾಗಿ, ಟ್ರಿಪ್ ಅಡ್ವೈಸರ್ಸ್, ಟ್ರಾವೆಲರ್ಸ್ ಚಾಯ್ಸ ಅವಾರ್ಡ್ಸ್, ದುಬೈಗೆ ‌2022 ಮತ್ತು 2023ರಲ್ಲಿ ವಿಶ್ವದ ಅತ್ಯುತ್ತಮ ತಾಣ ಎಂಬ ಬಿರುದನ್ನು ನೀಡಿರುವುದು ಗಮನಾರ್ಹ. ದುಬೈ ಒಂದು ಕಾಲದಲ್ಲಿ ಪ್ರಾಚೀನ ಬೆಡೋ ಯಿನ್‌ಗಳಿಂದ ಪೋಷಿತವಾದ ಕೃಷಿ ಗ್ರಾಮವಾಗಿತ್ತು. ಯುಎಇಯ ಕರಾವಳಿಯನ್ನು ನಕ್ಷೆ ಮಾಡಿದ 10ನೇ ಶತಮಾನದ ಕಾರ್ಟೋಗ್ರಾಫರ್ ಮುಹಮ್ಮದ್ ಅಲ್-ಇದ್ರಿಸಿಯಿಂದಾಗಿ ‘ದಿಬೈ’ ಎಂದು ಕರೆಯಲ್ಪಟ್ಟು ನಂತರ ‘ದುಬೈ’ ಆಯಿತು. ಯುಎಇಯ 7 ಎಮಿರೇಟ್‌ಗಳಲ್ಲಿ ದುಬೈ ವೇಗವಾಗಿ ಬೆಳೆಯು‌ತ್ತಿರುವ ನಗರಗಳಲ್ಲಿ ಒಂದಾಗಿದೆ.

1950ರ ದಶಕದಲ್ಲಿ ತೈಲವನ್ನು ಕಂಡು ಹಿಡಿಯುವ ಮೊದಲು, ದುಬೈನ ಆರ್ಥಿಕತೆಯು ಮೀನುಗಾರಿಕೆ ಹಾಗೂ ಮುತ್ತು ಉದ್ಯಮವನ್ನು ಅವಲಂಬಿಸಿತ್ತು. ದುಬೈ ಹೆಸರಿನಲ್ಲಿ ಸುಮಾರು 300 ವಿಶ್ವ ದಾಖಲೆಗಳಿವೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಿಂದ, ವಿಶ್ವದ ಅತಿದೊಡ್ಡ ಫ್ರೇಮ್ ದುಬೈ ಫ್ರೇಮ್, ಅತಿದೊಡ್ಡ ಶಾಪಿಂಗ್ ಮಾಲ್ ದುಬೈ ಮಾಲ್, ವಿಶ್ವದ ಅತಿ ಎತ್ತರದ ಇನ್-ಸೂಟ್ ಹೋಟೆಲ್ ಬುರ್ಜ್‌ ಅಲ್ ಅರಬ್ ಸೇರಿದಂತೆ ಇಂಥ 300ಕ್ಕೂ ಹೆಚ್ಚು ವಿಶ್ವ ದಾಖಲೆಗಳನ್ನು ದುಬೈ ಹೊಂದಿದೆ. ದುಬೈ ಪೊಲೀಸರ ಬಳಿ ಅತ್ಯಂತ ವೇಗದ ಮತ್ತು ಐಷಾರಾಮಿ ಬುಗಾಟಿ ವೆಯ್ರಾನ್, ಫೆರಾರಿ ಎಫ್‌ ಎಫ್ ಮತ್ತು ಲಂಬೋರ್ಗಿನಿ ಅವೆಂಟ‌ ಡೋರ್ ಮುಂತಾದ ಕಾರುಗಳಿವೆ. ದುಬೈನ ಜನಸಂಖ್ಯೆ ಯು ಸುಮಾರು 35 ಲಕ್ಷ ಜನರನ್ನು ಒಳಗೊಂಡಿದೆ. ಆದರೆ ಈ ಪೈಕಿ ಸ್ಥಳೀಯರಿಗಿಂತ ವಿದೇಶಿಯರೇ ಹೆಚ್ಚು. ದುಬೈ ಆರ್ಥಿಕತೆಯು ಭಾರತೀಯ, ಪಾಕಿಸ್ತಾನಿ, ಬಾಂಗ್ಲದೇಶಿ, ಬ್ರಿಟಿಷ್, ಅಮೆರಿಕನ್ ಮತ್ತು ಆಫ್ರಿಕನ್ ಸಮುದಾಯಗಳನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯ ವಿದೇಶಿ ವಲಸಿಗರಿಗೆ ನೆಲೆಯಾಗಿದೆ. ಇದು ವೈವಿಧ್ಯಮಯ ಮತ್ತು ಬಹುಸಂಸ್ಕೃತಿಯ ಕೇಂದ್ರವಾಗಿದೆ. ದುಬೈನ ವಿಶಿಷ್ಟ ಲಕ್ಷಣವೆಂದರೆ ತಾಳೆಗರಿ (ಪಾಮ) ಆಕಾರದ ಅದರ ಕೃತಕ ದ್ವೀಪಗಳ ಗುಂಪು.

ಇದನ್ನು ‘ದುಬೈ ಪಾಮ್ ಜುಮೇರಾ’ ಎಂದು ಕರೆಯುತ್ತಾರೆ. ಇದು ಪ್ರಪಂಚದ ಅತಿದೊಡ್ಡ ಕೃತಕ ದ್ವೀಪಸಮೂಹವಾಗಿದೆ. ಸಮುದ್ರವನ್ನು ಮುಚ್ಚಿ ಸಂಪೂರ್ಣವಾಗಿ ಮರಳು ಮತ್ತು ಬಂಡೆಗಳಿಂದ ಇದನ್ನು ರಚಿಸಲಾಗಿದೆ. ದುಬೈ ತನ್ನ ಕಟ್ಟುನಿಟ್ಟಾದ ನಿಯಮಗಳಿಗೆ ಹೆಸರುವಾಸಿ. ನೀವು
ವ್ಯಾಪಾರ ಅಥವಾ ವಿರಾಮಕ್ಕಾಗಿ ದುಬೈಗೆ ಆಗಮಿಸಿರಬಹುದು, ಆದರೆ ಸ್ಥಳೀಯ ನಿಯಮಗಳನ್ನು ಪಾಲಿಸಲೇಬೇಕು. ಪ್ರೀತಿಯ ಸಾರ್ವಜನಿಕ
ಪ್ರದರ್ಶನವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಲ್ಲಿ ಯಾರೂ ಸಾರ್ವಜನಿಕವಾಗಿ ಚುಂಬಿಸುವಂತಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಕೈ-ಕೈ ಹಿಡಿದು ಓಡಾಡಬಹುದು. ಆದರೆ ಬೀದಿಗಳಲ್ಲಿ ನಡೆಯುವಾಗ ಹಾಗೆ ಮಾಡುವಂತಿಲ್ಲ.

ದುಬೈ ವಿದೇಶಿ ನಾಗರಿಕರನ್ನು ಬರಮಾಡಿಕೊಳ್ಳುತ್ತದೆ, ಆದರೆ ಅವರಿಗೆ ಪೌರತ್ವವನ್ನು ನೀಡುವುದಿಲ್ಲ. ದುಬೈ ಆದಾಯ ತೆರಿಗೆ ಮುಕ್ತ
ವ್ಯವಸ್ಥೆಯನ್ನು ಹೊಂದಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ನೆಲೆಯಾಗಿದೆ.
ದುಬೈನಲ್ಲಿ 1991ರಲ್ಲಿ ಒಂದೇ ಒಂದು ಗಗನಚುಂಬಿ ಕಟ್ಟಡವಿತ್ತು. ಈಗ ಎಲ್ಲಿ ನೋಡಿದರೂ ಅಂಥ ಕಟ್ಟಡಗಳು ತಲೆಯೆತ್ತಿವೆ. ಪ್ರತಿ 4 ತಿಂಗಳಿಗೆ ಹೊಸ ಗಗನಚುಂಬಿ ಕಟ್ಟಡ ನಿರ್ಮಾಣವಾಗುತ್ತದೆ. ದುಬೈನ ಆರ್ಥಿಕ ಜಿ ‘ಬಿಸಿನೆಸ್ ಬೇ’ನಲ್ಲಿ ಹೊಸ ಗಗನಚುಂಬಿ ಕಟ್ಟಡವನ್ನು ನಿರ್ಮಿಸಲಾಗು ತ್ತಿದೆ. ವಿಶ್ವದ ಶೇ.25 ಕ್ರೇನ್‌ಗಳು ದುಬೈನಲ್ಲಿ ಕೆಲಸ ಮಾಡುವುದರಿಂದ ದುಬೈ ಅನ್ನು ಒಮ್ಮೆ ‘ವಿಶ್ವದ ಕ್ರೇನ್ ರಾಜಧಾನಿ’ ಎಂದೂ ಕರೆಯ ಲಾಗುತ್ತಿತ್ತು.

ಇದನ್ನೂ ಓದಿ: @vishweshwarbhat