Tuesday, 19th November 2024

Celebrities Divorce: ಸೆಲೆಬ್ರಿಟಿಗಳ ವಿಚ್ಛೇದನಕ್ಕೆ ವಿಚಿತ್ರ ಕಾರಣ ಬಿಚ್ಚಿಟ್ಟ ವಕೀಲೆ; ಹೀಗೆಲ್ಲ ಇರುತ್ತಾ ಎಂದ ನೆಟ್ಟಿಗರು!

Celebrities Divorce

ಮುಂಬೈ: ಭಾರತೀಯ ಅಭಿಮಾನಿಗಳು ಯಾವಾಗಲೂ ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಯಾವಾಗಲೂ ಕುತೂಹಲದಿಂದ ಇರುತ್ತಾರೆ. ಡೇಟಿಂಗ್‌ನಿಂದ ಹಿಡಿದು ವಿಚ್ಛೇದನದವರೆಗೂ ಎಲ್ಲಾ ಅಪ್‌ಡೇಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಖ್ಯಾತ ವಿಚ್ಛೇದನ ವಕೀಲೆ ವಂದನಾ ಶಾ ಸೆಲೆಬ್ರಿಟಿಗಳ ವಿಚ್ಛೇದನದ (Celebrities Divorce) ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಸೆಲೆಬ್ರಿಟಿಗಳ ಮದುವೆಗಳು ಏಕೆ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ದಿ ಚಿಲ್ ಅವರ್ ಪಾಡ್‌ಕ್ಯಾಸ್ಟ್‌ನಲ್ಲಿ ಸೆಲೆಬ್ರಿಟಿಗಳ ವಿಚ್ಛೇದನದ ಬಗ್ಗೆ ಮಾತನಾಡುತ್ತಾ ಒಂದು ಪ್ರಕರಣದ ಬಗ್ಗೆ ಹೇಳಿದ್ದಾರೆ. ಇದು ದಕ್ಷಿಣ ಭಾರತದ (South Industry) ಕೇಸ್‌ ಆಗಿದ್ದು, ಮಾವನ ಕಂಟ್ರೋಲ್‌ನಲ್ಲಿ ಇಡೀ ಮನೆಯಿದೆ. ಪತಿ ಬೆಡ್‌ರೂಂನಲ್ಲಿ ಮಾತ್ರ ಹುಲಿ, ಅಪ್ಪನ ಎದರು ಹೋದರೆ ಬೆಕ್ಕಿನ ಹಾಗೆ ಆಡುತ್ತಾನೆ ಎಂದು ಪತ್ನಿಗೆ ಬೇಸರ. ಇದೇ ಮುಂದುವರಿದು ಅವರಿಬ್ಬರು ಇದೇ ವಿಷಯಕ್ಕೆ ವಿಚ್ಛೇದನ ಕೂಡ ಪಡೆದು ಕೊಂಡರು ಎಂದು ಹೇಳಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಯಾರು ಆ ಸೆಲೆಬ್ರಿಟಿ ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಬಾಲಿವುಡ್ (Bollywood) ಬಗ್ಗೆ ಮಾತನಾಡಿದ ವಂದನಾ, ಬಾಲಿವುಡ್ ಜೀವನವು ತುಂಬಾ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಬಾಲಿವುಡ್‌ ಮಂದಿ ಗಂಡ ಅಥವಾ ಹೆಂಡತಿ ತನಗೆ ಮೋಸ ಮಾಡಿ ಬೇರೆಯವರ ಜತೆ ಹೋಗಿದ್ದಾರೆ ಎಂದು ವಿಚ್ಛೇದನ ಪಡೆಯುವುದಿಲ್ಲ. ಅವರಿಗೇ ಅದೇ ಗಂಡ ಅದೇ ಹೆಂಡತಿ ಜತೆ ಇದ್ದು ಬೇಸರವಾಗಿರುತ್ತದೆ. ಅದಕ್ಕೆ ವಿಚ್ಛೇದನ ಪಡೆಯುತ್ತಾರೆ. ಬಾಲಿವುಡ್‌ ಶ್ರೀಮಂತ ಕುಟುಂಬಗಳಿಗೆ ಅದೇನು ದೊಡ್ಡ ವಿಷಯವಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಮಾತನ್ನು ಮುಂದುವರಿಸಿದ ಶಾ, ಬಾಲಿವುಡ್‌ ಮಂದಿ ವಿಭಿನ್ನ ವ್ಯಕ್ತಿಗಳ ಜತೆ ಲೈಂಗಿಕ ಜೀವನವನ್ನು ನಡೆಸುತ್ತಾರೆ. ಅವರು ಹೆಸರಿಗಷ್ಟೇ ಮದುವೆಯಾಗಿರುತ್ತಾರೆ. ಲೈಂಗಿಕ ಜೀವನ ಹಲವರ ಜತೆ ಇರುತ್ತದೆ ಎಂದು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ನಡೆಯುವ ವ್ಯಭಿಚಾರದ ಬಗ್ಗೆ ಮಾತನಾಡಿ ಒನ್‌ ನೈಟ್‌ ಸ್ಟಾಂಡ್‌ ಅಲ್ಲಿ ಸರ್ವೇ ಸಾಮಾನ್ಯ ಎಂದು ಹೇಳಿದ್ದಾರೆ. ನನಗೆ ಬರುವ ಬಾಲಿವುಡ್‌ನ ಅರ್ಧ ಕೇಸ್‌ಗಳು ಇಂತಹವೇ ಎಂದು ಹೇಳಿದ್ದಾರೆ.

ಇತ್ತೀಚೆಗೆ ವಿಚ್ಛೇದನ ಪಡೆದ ಸೆಲೆಬ್ರಿಟಿಗಳಿವರು…

ಜಯಂ ರವಿ – ಆರತಿ: ಇತ್ತೀಚೆಗೆ ಬಹಳ ಸುದ್ದಿಯಾದ ವಿಚ್ಛೇದನ ಪ್ರಕರಣವಿದು. ಕಾಲಿವುಡ್‌ನ ಜನಪ್ರಿಯ ನಟ ಜಯಂ ರವಿ ಹಾಗೂ ಆರತಿ ತಮ್ಮ15 ವರ್ಷಗಳ ದಾಂಪತ್ಯಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಕೆಲ ದಿನಗಳ ಹಿಂದೆ ತಾವು ಬೇರೆಯಾಗುವುದಾಗಿ ಈ ಜೋಡಿ ಘೋಷಿಸಿತ್ತು. ಜಯಂ ರವಿ ಕೋರ್ಟ್‌ನಲ್ಲಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರು ಮಕ್ಕಳನ್ನು ತನ್ನ ಬಳಿ ಕಳುಹಿಸುವಂತೆ ಹೇಳಿದ್ದಾರೆ.

ಹಾರ್ದಿಕ್‌ ಪಾಂಡ್ಯ – ನತಾಶಾ ಸ್ಟಾನ್‌ಕೋವಿಚ್‌ : ಭಾರತದ ಆಲ್‌ರೌಂಡ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಹಾಗೂ ಸೈಬೀರಿಯಾ ಮೂಲದ ಮಾಡೆಲ್‌ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಕೆಲ ತಿಂಗಳಿನಿಂದ ಈ ಜೋಡಿಯ ಮಧ್ಯೆ ಏನು ಸರಿ ಇಲ್ಲ ಎಂದು ಎಲ್ಲೆಡೆ ಕೇಳಿ ಬರುತ್ತಿತ್ತು. ಆದರೆ ಇತ್ತೀಚೆಗೆ ಸ್ವತಃ ಅವರೇ ತಾವು ಬೇರೆಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.

ಸಾನಿಯಾ ಮಿರ್ಜಾ – ಶೋಯೆಬ್‌ ಮಲಿಕ್‌ : ಭಾರತದ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಕಳೆದ ವರ್ಷ ದೂರವಾಗಿದ್ದರು.2010 ರಲ್ಲಿ ಮದುವೆಯಾಗಿದ್ದ ಜೋಡಿಗೆ ಇಶಾನ್‌ ಎಂಬ ಮಗನಿದ್ದಾನೆ. ಸದ್ಯ ಮಗನ ಜತೆ ದುಬೈನಲ್ಲಿ ಸಾನಿಯಾ ವಾಸ ಮಾಡುತ್ತಿದ್ದಾರೆ. ಮಲಿಕ್‌ ಈ ವರ್ಷ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪಾಕಿಸ್ತಾನಿ ನಟಿ ಸನಾ ಜಾವೇದ್‌ ಜತೆಗೆ ವಿವಾಹವಾಗಿದ್ದಾರೆ. ಸನಾ ಹಾಗೂ ಮಲಿಕ್‌ ಅವರ ನಡುವೆ ಇದ್ದ ಡೇಟಿಂಗ್‌ ವದಂತಿಗಳು ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗಿತ್ತು.

ಚಂದನ್‌ ಶೆಟ್ಟಿ- ನಿವೇದಿತಾ ಗೌಡ : ಪ್ರೀತಿಸಿ ಮದುವೆಯಾಗಿದ್ದ ಕನ್ನಡ ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗಿದ್ದಾರೆ. ಪತಿ ಪತ್ನಿ ನಡುವೆ ಹೊಂದಾಣಿಕೆ ಇಲ್ಲದಿರುವುದು ಇವರ ವಿಚ್ಚೇದನಕ್ಕೆ ಕಾರಣ ಎಂದು ಅವರೇ ಹೇಳಿದ್ದಾರೆ.

ಇದೇ ವರ್ಷ ರಾಜಕುಮಾರ ಮೊಮ್ಮಗ ಯುವರಾಜಕುಮಾರ್‌ ಹಾಗೂ ಪತ್ನಿ ಶ್ರೀದೇವಿ ದೂರವಾಗಿದ್ದಾರೆ. ನಟಿ ಹೇಮಾ ಮಾಲಿನಿ ಪುತ್ರಿ ಕೂಡ ವಿಚ್ಛೇದನ ಘೋಷಿಸಿದ್ದಾರೆ.

ಇದನ್ನೂ ಓದಿ : Actress Samantha: ಮಲಯಾಳಂ, ತಮಿಳು ನಂತರ ತೆಲುಗು ಚಿತ್ರರಂಗಕ್ಕೂ ತಟ್ಟಿತಾ MeToo ಶಾಪ? ನಟಿ ಸಮಂತಾ ಹೇಳಿದ್ದೇನು?