ಪರ್ತ್: ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು (AUS vs IND) ಮಾಜಿ ಓಪನರ್ ಗೌತಮ್ ಗಂಭೀರ್ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಡಗೈ ಬ್ಯಾಟ್ಸ್‌ಮನ್ ಎಂಬ ನೂತನ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಬರೆದಿದ್ದಾರೆ. ಆ ಮೂಲಕ 2008ರಲ್ಲಿ ಗೌತಮ್ ಗಂಭೀರ್ ಬರೆದಿದ್ದ ದಾಖಲೆಯನ್ನು ಜೈಸ್ವಾಲ್ ಹಿಂದಿಕ್ಕಿದ್ದಾರೆ.
16 ವರ್ಷಗಳ ಹಿಂದೆ ಅಂದರೆ 2008ರಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರು 8 ಪಂದ್ಯಗಳಿಂದ 70.67ರ ಸರಾಸರಿಯಲ್ಲಿ 1134 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ಮೂರು ಶತಕಗಳು ಹಾಗೂ ಆರು ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ, ಪ್ರಸಕ್ತ ವರ್ಷದಲ್ಲಿ ಯಶಸ್ವಿ ಜೈಸ್ವಾಲ್ ಅವರು 55.28ರ ಸರಾಸರಿಯಲ್ಲಿ ಅಜೇಯ 1161 ರನ್‌ಗಳನ್ನು ಗಳಿಸಿದ್ದಾರೆ.
ಅಂದಹಾಗೆ ಆಸ್ಟ್ರೇಲಿಯಾದಲ್ಲಿ ತನ್ನ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಜೈಸ್ವಾಲ್ ಎಂಟು ಎಸೆತಗಳನ್ನು ಆಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರೆ, ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್ ಆಡಿದ್ದ ಆಸ್ಟ್ರೇಲಿಯಾ ತಂಡ, ಜಸ್‌ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ನಲುಗಿ ಕೇವಲ 104 ರನ್‌ಗಳಿಗೆ ಆಲ್‌ಔಟ್ ಆಗಿತ್ತು.
Yashasvi Jaiswal: ವಿಶ್ವ ದಾಖಲೆ ಸನಿಹ ಯಶಸ್ವಿ ಜೈಸ್ವಾಲ್
ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದೆ. ಅದರಲ್ಲಿಯೂ ವಿಶೇಷವಾಗಿ ಯಶಸ್ವಿ ಜೈಸ್ವಾಲ್ ಅವರು 193 ಎಸೆತಗಳಲ್ಲಿ ಅಜೇಯ 90 ರನ್‌ಗಳಿಸಿ ಶತಕದಂಚಿನಲ್ಲಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ 218 ರನ್‌ಗಳ ಮುನ್ನಡೆ ಪಡೆದಿದೆ.
ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಎಡಗೈ ಬ್ಯಾಟ್ಸ್‌ಮನ್‌ಗಳು
ಯಶಸ್ವಿ ಜೈಸ್ವಾಲ್: 2024ರಲ್ಲಿ 12 ಟೆಸ್ಟ್ ಪಂದ್ಯಗಳಿಂದ 1156* ರನ್‌ಗಳು
ಗೌತಮ್ ಗಂಭೀರ್: 2008ರಲ್ಲಿ 8 ಟೆಸ್ಟ್ ಪಂದ್ಯಗಳಿಂದ 1134 ರನ್‌ಗಳು
ಸೌರವ್ ಗಂಗೂಲಿ: 2007ರಲ್ಲಿ 10 ಟೆಸ್ಟ್ ಪಂದ್ಯಗಳಿಂದ 1106 ರನ್‌ಗಳು
ಸೌರವ್ ಗಂಗೂಲಿ: 2002ರಲ್ಲಿ 16 ಟೆಸ್ಟ್ ಪಂದ್ಯಗಳಿಂದ 945 ರನ್‌ಗಳು
ಸೌರವ್ ಗಂಗೂಲಿ: 1997ರಲ್ಲಿ 11 ಟೆಸ್ಟ್ ಪಂದ್ಯಗಳಿಂದ 848 ರನ್‌ಗಳು
IND vs AUS: ಕಪಿಲ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್ ಬುಮ್ರಾ
2024ರಲ್ಲಿನ ಯಶಸ್ವಿ ಜೈಸ್ವಾಲ್ ಅಂಕಿಅಂಶಗಳು
ಯಶಸ್ವಿ ಜೈಸ್ವಾಲ್ ಅವರು ಭಾರತ ತಂಡದ ಪರ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲಿ ಎಡಗೈ ಬ್ಯಾಟ್ಸ್‌ಮನ್ ಇಂಗ್ಲೆಂಡ್ ವಿರುದ್ಧ 700 ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದರು. ಈ ವರ್ಷದಲ್ಲಿ ಅವರು ಎರಡು ದ್ವಿಶತಕಗಳು ಹಾಗೂ 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಆಸ್ಟ್ರೇಲಿಯಾದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.
Stat Alert 🚨
— BCCI (@BCCI) November 23, 2024
Since 2004, this is the first time that #TeamIndia openers have put up a 100-run stand in Australia.
Keep going, Yashasvi🤝Rahul.#AUSvIND | @ybj_19 | @klrahul pic.twitter.com/EXrPrUeskZ
2024ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಅವರು 1338 ರನ್‌ಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್‌ಗೆ ಈ ವರ್ಷ ಇನ್ನೂ ಮೂರು ಪಂದ್ಯಗಳಿವೆ. ಈ ಮೂರರಲ್ಲಿ ಅವರು ಉತ್ತಮ ರನ್‌ಗಳನ್ನು ಕಲೆ ಹಾಕಿದರೆ ಜೋ ರೂಟ್ ಅವರನ್ನು ಹಿಂದಿಕ್ಕುವ ಸಾಧ್ಯತೆ ಇರುತ್ತದೆ.