Sunday, 24th November 2024

CV Ananda Bose : ತಮ್ಮ ಪ್ರತಿಮೆಯನ್ನು ತಾವೇ ಅನಾವರಣಗೊಳಿಸಿದ ಬಂಗಾಳ ರಾಜ್ಯಪಾಲ! ವಿಪಕ್ಷಗಳಿಂದ ಟೀಕೆ

CV Ananda Bose

ಕೊಲ್ಕತ್ತಾ : ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ (Governor) ಸಿ.ವಿ.ಆನಂದ ಬೋಸ್ (CV Ananda Bose) ಅವರು ಅಧಿಕಾರಕ್ಕೆ ಎರಡು ವರ್ಷ ಪೂರೈಸಿದ್ದು, ಶನಿವಾರ ರಾಜಭವನದಲ್ಲಿ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅವರ ಈ ಕ್ರಮ ಬಾರೀ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿವೆ.

ಶನಿವಾರ  ರಾಜಭವನದ ಆವರಣದಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆ ಉದ್ಘಾಟನೆಗೂ ಮುನ್ನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ರಾಜ್ಯಪಾಲರು ಅಧಿಕಾರದಲ್ಲಿರುವಾಗಲೇ ಅವರ ಪ್ರತಿಮೆಯನ್ನು ಸ್ಥಾಪಿಸಿದ ಬಗ್ಗೆ ಸಾಕಷ್ಟು ಠೀಕೆಗಳು ಬರುತ್ತಿವೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೊಂದು ಪ್ರಚಾರದ ಸ್ಟಂಟ್ ಎಂದು ಕಿಡಿಕಾರಿದೆ.

ತೃಣಮೂಲ ವಕ್ತಾರ ಜಯಪ್ರಕಾಶ್ ಮಜುಂದಾರ್ ಮಾತನಾಡಿ “ನಮ್ಮ ರಾಜ್ಯಪಾಲರಾದ ಸಿ.ವಿ.ಆನಂದ ಬೋಸ್ ಅವರು ತಮ್ಮದೇ ಆದ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ, ಇದು ಎಲ್ಲಿಯೂ ಕೇಳಿರದ ಸಂಗತಿಯಾಗಿದೆ. ಅವರು ಪ್ರಚಾರಕ್ಕಾಗಿ ಇದನ್ನು ಮಾಡಿದ್ದಾರೆ. ಆದರೆ ಮುಂದಿನ ಹೆಜ್ಜೆ ಏನು? ಅವರು ತಮ್ಮದೇ ಪ್ರತಿಮೆಗೆ ಹಾರ ಹಾಕುತ್ತಾರೆಯೇ? ಇದು ಮೆಗಾಲೊಮೇನಿಯಾಕ್‌ನ ಸಂಕೇತ ಎಂದು ಹೇಳಿದ್ದಾರೆ. ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಇದನ್ನು “ನಾಚಿಕೆಗೇಡು” ಎಂದು ಕರೆದಿದ್ದಾರೆ.

ಮೂಲಗಳ ಪ್ರಕಾರ, ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದೊಂದಿಗೆ ಸಂಯೋಜಿತವಾಗಿರುವ ಕಲಾವಿದ ಪಾರ್ಥ ಸಹಾ ಅವರು ಈ ಪ್ರತಿಮೆಯನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಹಾ ಅವರು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗದೆ ಅವರ ಭಾವಚಿತ್ರವನ್ನು ಆಧರಿಸಿ ಫೈಬರ್ ಪ್ರತಿಮೆಯನ್ನು ರಚಿಸಿದ್ದಾರೆ.

ಇದನ್ನೂ ಓದಿ : Jashimuddin Rahmani: ಪಶ್ಚಿಮ ಬಂಗಾಳವನ್ನು ಮೋದಿ ಆಡಳಿತದಿಂದ ಮುಕ್ತಗೊಳಿಸಿ; ನಾಲಗೆ ಹರಿಬಿಟ್ಟ ಬಾಂಗ್ಲಾ ಭಯೋತ್ಪಾದಕ

ವಿವಾದದ ನಂತರ ಈ ವಿಷಯದ ಸ್ವಷ್ಟನೆ ನೀಡಿರುವ ರಾಜ್ಯಪಾಲರ ಕಚೇರಿ ಈ ಪ್ರತಿಮೆಯನ್ನು ಗವರ್ನರ್ ಬೋಸ್ ಅವರೇ ಸ್ಥಾಪಿಸಿಲ್ಲ, ಆದರೆ ಇದು ಕಲಾವಿದರು ಮತ್ತು ಭಾರತೀಯ ವಸ್ತುಸಂಗ್ರಹಾಲಯದಿಂದ ಉಡುಗೊರೆಯಾಗಿದೆ ಎಂದು ಹೇಳಿದೆ.