ಚಿಕ್ಕಬಳ್ಳಾಪುರ : ಉಪ ಚುನಾವಣೆಯಲ್ಲಿ ಚೆನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಕೈಪಕ್ಷದ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ ಪರಿಣಾಮ ಜಿಲ್ಲೆಯಲ್ಲಿ ಕೈಪಕ್ಷದ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.
ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿ ಎದುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್ ಪ್ರಧಾನ ಕಾರ್ಯದರ್ಶಿ ಪ್ರೆಸ್ ಸೂರಿ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷವನ್ನು ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್ ಮಾತಾಡಿ ಉಪಚುನಾವಣೆಯ ಗೆಲುವು ಪಕ್ಷದ ಪರ ಜನಮತವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ವಿರೋಧ ಪಕ್ಷಗಳು ಜಮೀರ್ ಅಹಮದ್ ಕರಿಯ ಎಂದು ಕರೆದ ಪ್ರಕರಣ ವಕ್ಫ್ ಪ್ರಕರಣ ಮುಂದಿಟ್ಟುಕೊ0ಡು ರಾಜ್ಯದಲ್ಲಿ ಶಾಂತಿ ಭಂಗಕ್ಕೆ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದನ್ನು ಮನಗಂಡಿರುವ ಮತದಾರರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸಿದ್ದಾರೆ. ಈ ಜಯ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಜನಪರ ಆಡಳಿತಕ್ಕೆ ನೀಡಿರುವ ಜನ ಆಶೀರ್ವಾದವಾಗಿದೆ ಎಂದರು.
ಕಾAಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್ ಮಾತನಾಡಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿರುವ ಮತದಾರರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುವಂತೆ ಮಾಡಿದ್ದಾರೆ. ಬಿಜೆಪಿ ಕೇವಲ ಕೋಮು ದ್ವೇಷ ಬಿತ್ತುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿತ್ತು. ಇದಕ್ಕೆ ಮತದಾರರು ಬ್ರೇಕ್ ಹಾಕಿದ್ದು ಕಾಂಗ್ರೆಸ್ ಪಕ್ಷದ ಆಡಳಿತ ಜನ ಪರವಾಗಿದೆ ಎಂದು ಆಶೀರ್ವಾದ ಮಾಡಿರುವುದೇ ಸಾಕ್ಷಿ ಸಾಕ್ಷಿಯಾಗಿದೆ ಎಂದರು.
೧೫೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ದೀನ ದಲಿತರ ಬಹು ಜನರ ಒಳಿತಿಗಾಗಿ ಅನೇಕ ಜನಪರ ಕಾರ್ಯಕ್ರಮ ಗಳನ್ನು ನೀಡಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಪಕ್ಷ ಮತ್ತು ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಜನರ ಕಷ್ಟಗಳಿಗೆ ನೆರವಾಗುತ್ತಿದೆ ಉಪಚುನಾವಣೆಯಲ್ಲಿ ಮತದಾರರು ಇದನ್ನು ಗಮನಿಸಿ ನಮ್ಮ ಅಭ್ಯರ್ಥಿಗಳಿಗೆ ಜಯವಾಗುವಂತೆ ನೋಡಿಕೊಂಡಿದ್ದಾರೆ ಇದನ್ನು ಅರಗಿಸಿಕೊಳ್ಳಲಾಗದ ವಿರೋಧ ಪಕ್ಷಗಳು ವಿನಾಕಾರಣ ಟೀಕೆಗಳನ್ನು ಮಾಡುತ್ತಿದ್ದಾರೆ ಯಾವ ಹಣದ ಹೊಳೆಯು ಹರಿದಿಲ್ಲ ಅಧಿಕಾರದ ದುರ್ಬಳಕೆಯು ಆಗಿಲ್ಲ ಜನ ಆಶೀರ್ವಾದವನ್ನು ಗೌರವಿಸುವ ಸೌಜನ್ಯವನ್ನು ವಿರೋಧ ಪಕ್ಷಗಳು ಇನ್ನಾದರೂ ಅರಿಯಲಿ ಎಂದು ತಿರುಗೇಟು ನೀಡಿದರು.
ಚಿಂತಾಮಣಿಯಲ್ಲಿ ಕೂಡ ಬೈಕ್ ರ‍್ಯಾಲಿ ನಡೆಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ವಕೀಲ ಮುನೇಗೌಡ, ಮಮತಾಮೂರ್ತಿ, ಡ್ಯಾನ್ಸ್ ಶ್ರೀನಿವಾಸ್, ಶಾಹಿದ್ ಸೇರಿ ನೂರಾರು ಕಾರ್ಯಕರ್ತರು ಇದ್ದರು.