ಗೌರಿಬಿದನೂರು : ನಗರದ ವಿವಿಧ ವಾರ್ಡುಗಳಲ್ಲಿ ಸಂಸದರ ಅನುದಾನದಲ್ಲಿ ಸುಮಾರು ೧ ಕೋಟಿ ೨೬ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಂಸದ ಡಾ.ಕೆ.ಸುಧಾಕರ್ ಮತ್ತು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ನೇರವೇರಿಸಿದರು.
ನಂತರ ಮಾತನಾಡಿದ ಚಿಕ್ಕಬಳ್ಳಾಪುರ ಸಂಸದ ಡಾ ಕೆ.ಸುಧಾಕರ್ ಅಭಿವೃದ್ದಿ ವಿಷಯದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಜನ ಸಾಮಾನ್ಯರಿಗೆ ಮೂಲ ಭೂತ ಸೌಕರ್ಯ ಒದಗಿಸುವುದೇ ನನ್ನ ಕರ್ತವ್ಯ. ಇಂದು ನಗರದ ಹಲವು ವಾರ್ಡುಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.ಅಭಿವೃದ್ದಿ ವಿಷಯದಲ್ಲಿ ಗೌರಿಬಿದನೂರು ಸೇರಿದಂತೆ ಜಿಲ್ಲೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದ ಅವರು ಕಾಮಗಾರಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಗುತ್ತಿಗೆದಾರು ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಉಪಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಿದೆ. ಇದು ಅಡಳಿತ ಪಕ್ಷವಾದ್ದರಿಂದ ಬಹುತೇಕ ಕಡೆ ಅಳುವ ಪಕ್ಷಕ್ಕೆ ಗೆಲುವು ಸಹಜ.ಚೆನ್ನಪಟ್ಟಣದ ಗೆಲವು ನಮ್ಮದು ಅಗಬೇಕಿತ್ತು .ಅಭ್ಯರ್ಥಿ ಅಯ್ಕೆಯಲ್ಲಿ ಗೊಂದಲವಾಗಿ ಮತ್ತು ನಿಖಿಲ್ ಕುಮಾರ್ಸ್ವಾಮಿ ಅಚ್ಚರಿ ಅಭ್ಯರ್ಥಿ ಅಗಿದ್ದು ಅವರು ಮಾನಸಿಕವಾಗಿ ಸಿದ್ದತೆ ಇಲ್ಲದೆ ಇರುವುದರಿಂದ ಮತ್ತು ಪಕ್ಷದಲ್ಲಿ ಗೊಂದಲ ವಾತಾವಾರಣ,ಒಗ್ಗಟಿನ ಕೊರತೆ ನಾನು ಎಂಬ ವರ್ತನೆ, ಸಾಮೂಹಿಕ ನಾಯಕತ್ವದ ಕೊರತೆಯಿಂದ ಸೋಲಾಗಿದೆ.ಮತದಾರರ ತೀರ್ಪನ್ನು ಸ್ವಾಗತಿಸುತ್ತೇನೆ ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಗ್ಗೆ ಮೆಚ್ಚುಗೆ : ಚೆನ್ನಪಟ್ಟಣ್ಣದಲ್ಲಿ ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಸಮರ್ಥ ನಾಯಕತ್ವದಿಂದ ಅ ಪಕ್ಷ ಗೆಲುವು ಸಾಧಿಸಿದೆ ಅವರನ್ನು ಅಭಿನಂದಿಸುತ್ತೇನೆ ಎಂದ ಅವರು ಇದನ್ನು ನಮ್ಮ ನಾಯಕರು ಕಲಿಯಬೇಕು ಎಂದು ಒಳಜಗಳದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪತ್ರಿ,ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ,ಉಪಾಧ್ಯಕ್ಷ ಪರೀದ್,ಪೌರಾಯುಕ್ತೆ ಡಿಎಂ, ಗೀತಾ, ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ಮುಖಂಡರಾದ ಡಾ,ಶಶಿಧರ್,ಜಿ.ಪಂ ಮಾಜಿ ಅಧ್ಯಕ್ಷ ಸಿಆರ್. ನರಸಿಂಹ ಮೂರ್ತಿ, ನಗರಸಭೆ ಸದಸ್ಯರಾದ ಮಾರ್ಕೆಟ್ ಮೋಹನ್, ರೂಪ ಅನಂತರಾಜು, ಬಿಜೆಪಿ ಪಕ್ಷದ ವಕ್ತಾರ ಜಯಣ್ಣ, ನಗರಸಭೆ ಸದಸ್ಯೆ ಪುಣ್ಯವತಿ ಜಯಣ್ಣ, ವೆಂಕಟರೆಡ್ಡಿ, ಮುಖಂಡರಾದ ರಾಜಣ್ಣ,ಕಿರಣ್, ಬಿ,ಜಿ,ವೇಣುಗೋಪಾಲರೆಡ್ಡಿ, ಮುನಿಲಕ್ಷ್ಮಮ್ಮ, ಮಾರುತಿ, ವೇಣುಮಾದವ, ಹರೀಷ್ ಮುಂತಾದವರು ಹಾಜರಿದ್ದರು.