ಬೆಂಗಳೂರು: ಅಗತ್ಯ ನಿರ್ವಹಣಾ ಕಾರ್ಯದ ಕಾರಣ ನವೆಂಬರ್ 26ರಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ನಿವಾಸಿಗಳು ವಿದ್ಯುತ್ ವ್ಯತ್ಯಯವನ್ನು (Bengaluru Power Cut) ಎದುರಿಸಬೇಕಾಗಲಿದೆ. ಬೆಂಗಳೂರಿನ (Bengaluru news) ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಬಾಧಿಸಲಿದೆ.
ಬೆಳಿಗ್ಗೆ 10 ಗಂಟೆಯಿಂದ ವಿದ್ಯುತ್ ಕಡಿತ ಪ್ರಾರಂಭವಾಗಲಿದ್ದು, ಕೆಲವು ಸ್ಥಳಗಳಲ್ಲಿ ಏಳು ಗಂಟೆಗಳವರೆಗೆ ವಿದ್ಯುತ್ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ, ಸುದಾಮನಗರ, ಕೆ.ಎಚ್. ರಸ್ತೆ, ಶಾಂತಿನಗರ, ಡಬಲ್ ರೋಡ್, ಸುಬ್ಬಯ್ಯ ಸರ್ಕಲ್, ಸಿದ್ದಯ್ಯ ರಸ್ತೆ, ಲಾಲ್ ಬಾಗ್ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
1) ಮೇಂಟೇನೆನ್ಸ್ ಹಾಗೂ ಮರದ ಟ್ರಿಮ್ಮಿಂಗ್‌ನಿಂದಾಗಿ ಆರ್‌ಪಿಸಿ ಲೇಔಟ್, 7ನೇ ಮುಖ್ಯ ಅಂಚೆ ಕಛೇರಿ ರಸ್ತೆ, ವಿಜಯ ಮ್ಯಾನ್ಷನ್, ಹೊಸಹಳ್ಳಿ ಮತ್ತು ವಿಜಯನಗರ ಪ್ರದೇಶಗಳಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ಕರೆಂಟ್ ಇರುವುದಿಲ್ಲ.
2) ಗ್ರಿಡ್ ಆಪರೇಟಿಂಗ್ ಸಿಸ್ಟಮ್ (GOS) ನಲ್ಲಿ ಜಂಗಲ್ ಕ್ಲಿಯರಿಂಗ್ ಮತ್ತು ನಿರ್ವಹಣಾ ಕೆಲಸಕ್ಕಾಗಿ ತಡಿಕವಾಗಿಲು, ಕುರುಬಹಳ್ಳಿ, ಮತ್ತು ಜಾಲಮಂಗಲಗಳಲ್ಲಿ 10:00 AMನಿಂದ 12:00 PMವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ.
3) ಹೊಸ ಗೃಹಬಳಕೆಯ ಸಂಪರ್ಕಗಳಿಗಾಗಿ ಸೇವಾ ಸಂಪರ್ಕದ ಕೆಲಸದಿಂದಾಗಿ ಪುಲಿಗಲ್, ಸೀತಾರೆಡ್ಡಿಪಲ್ಲಿ, ವೆಂಕಟೇಶಪಲ್ಲಿ, ರಾಮನಪಡಿ, ಸಜ್ಜಲಪಲ್ಲಿ ಮತ್ತು ಬೂದಲವಾರಿಪಲ್ಲಿಗಳಲ್ಲಿ 12:30 PMನಿಂದ 2:30 PMವರೆಗೆ ಪವರ್ ಕಟ ಇರಲಿದೆ.
ನವೆಂಬರ್ 27ರಂದು ವಿದ್ಯುತ್ ಕಡಿತ
1) ಮರದ ಟ್ರಿಮ್ಮಿಂಗ್ ಮತ್ತಿತರ ನಿರ್ವಹಣಾ ಕೆಲಸಕ್ಕಾಗಿ ಎಂಸಿ ಲೇಔಟ್ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ.
2) ಜಂಗಲ್ ತೆರವು ಮತ್ತು ನಿರ್ವಹಣೆ ಕೆಲಸಕ್ಕಾಗಿ ತಿರುಮಲೇಗೌಡನದೊಡ್ಡಿ, ಕಂಚಿದೊಡ್ಡಿ, ನಿಜಪ್ಪನದೊಡ್ಡಿ, ಆದಿಶಕ್ತಿಹಳ್ಳಿ, ಚನ್ನೇಗೌಡನದೊಡ್ಡಿ ಸೇರಿದಂತೆ ಹಲವೆಡೆ ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ.
3) ಸೇವಾ ಸಂಪರ್ಕದ ಕೆಲಸದ ಕಾರಣದಿಂದಾಗಿ ಮಡ್ಲಾಖಾನ, ಮರಸನಪಲ್ಲಿ, ದೋರನಾಳಪಲ್ಲಿ, ಬ್ರಾಹ್ಮಣಹಳ್ಳಿ, ತಿಮ್ಮಂಪಲ್ಲಿ, ಗುಂಡ್ಲಪಲ್ಲಿ, ಕೊತ್ತೂರು, ಮಡಕವಾರಿಪಲ್ಲಿ, ಮತ್ತು ಕಮರಪಲ್ಲಿ ಪ್ರದೇಶಗಳಲ್ಲಿ 9:00 AMನಿಂದ 11:00 AMವರೆಗೆ ವಿದ್ಯುತ್ ಇರುವುದಿಲ್ಲ.