Monday, 25th November 2024

Derogatory Comment: ಹಿಂದೂ ದೇವತೆಗಳ ಅವಹೇಳನ; ಅಂಜುಮ್‌ ಶೇಖ್‌ ಎಂಬಾತನ ಮೇಲೆ ದೂರು

Derogatory Remarks

ಬೆಂಗಳೂರು: ಹಿಂದೂ ಧರ್ಮದ ದೇವರುಗಳ (Hindu Gods) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಅವಹೇಳನಕಾರಿಯಾಗಿ ಕಾಮೆಂಟ್​ (Derogatory comment) ಹಾಕಿದ ವ್ಯಕ್ತಿಯ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಾಲಕ್ಷ್ಮಿ ಲೇಔಟ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆ.

ಅಂಜುಮ್ ಶೇಖ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಂಬೆ, ಕೊಲ್ಲೂರು ಮೂಕಾಂಬಿಕೆ ದೇವಿಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.

ಈ ವಿಚಾರವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಅಂಜುಮ್ ಶೇಖ್ ಎಂಬಾತ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಕೊಲ್ಲೂರು ಮೂಕಾಂಬಿಕೆ, ತಿರುಪತಿ ತಿಮ್ಮಪ್ಪ ಮತ್ತು ಗಣೇಶ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಈ ಕಾಮೆಂಟ್​ನಿಂದ ನಮಗೆ ಅತ್ಯಂತ ನೋವುಂಟಾಗಿದೆ. ಇಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.

ಅವರ ಧರ್ಮದ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸ್ ಠಾಣೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. ನಾವು ಅವರ ತರಹ ಬೆಂಕಿ ಹಚ್ಚುವ ಕೆಲಸ ಮಾಡಲ್ಲ. ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದೇವೆ. ನಾವು ರಾಮನ ತರಹ ಇದ್ದೀವಿ, ಆದರೆ ಹೀಗೇ ಮುಂದುವರಿದರೆ ಪರಶುರಾಮ ಆಗಬೇಕಾಗುತ್ತದೆ ಎಂದರು.

ಇದನ್ನೂ ಓದಿ: Donald Trump: ಹಿಂದೂಗಳ ಬೆಂಬಲದಿಂದ ಗೆದ್ದ ಟ್ರಂಪ್!‌