Monday, 25th November 2024

Farmers Protest: ನ. 27ರಂದು ಸಿದ್ಧಸಿರಿ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಮುಂದುವರೆ ಭಾಗವಾಗಿ ರೈತರ ಉಗ್ರ ಪ್ರತಿಭಟನೆಗೆ ಕರೆ

ಕಣ್ಣು ತೆರೆದು ನೋಡದ, ಕಿವಿಕೊಡದೇವಿರುವ ಕಿವುಡು ಸರಕಾರ ವಿರುದ್ಧ ರೈತರ ಪ್ರತಿಭಟನೆಗೆ ಸಚಿವರುಗಳೇ ಗುರಿ
ಭಾಗಿ ಆಗಲಿದ್ದಾರೆ ಶಾಸಕರು, ಮಾಜಿ ಸಂಸದರು

ಚಿಂಚೋಳಿ : ಸಿದ್ಧಸಿರಿ ಎಥಿನಾಲ್ ಕಾರ್ಖಾನೆ ಪುನಃ ಪ್ರಾರಂಭಕ್ಕಾಗಿ ರೈತರು ಚಳಿಯನ್ನು ಲೆಕ್ಕಿಸದೆ ಕಳೆದ 20 ದಿನಗಳಿಂದ ಪಟ್ಟಣದ ಬಸವೇಶ್ವ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯ ಸಚಿವರು ಬಂದು ರೈತರ ಅಳಲನ್ನು ಆಲಿಸದೆ ಇರುವುದು ಸಚಿವರುಗಳ ನಡೆ ಖಂಡನೀಯವಾಗಿದೆ ಎಂದು ಸೇಡಂ ಮಾಜಿ ಶಾಸಕರು ಹಾಗೂ ರಾಜ್ಯ ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದ್ದಾರೆ.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಕಲಬುರಗಿ ಜಿಲ್ಲೆಯ ಸಚಿವರು ಚಿಂಚೋಳಿಯಲ್ಲಿ ನಡೆಯುತ್ತಿರುವ ರೈತರ ಸಮಸ್ಯೆಗೆ ಸ್ಪಂದಿಸದೆ, ನಡೆಯುತ್ತಿರುವ ಹೋರಾಟಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ಜಿಲ್ಲೆಯ ಇಬ್ಬರು ಸಚಿವರು ಕುತ್ತಿದ್ದಾರೆ. ಸತ್ಯಾಗ್ರಹ ಸ್ಥಳಕ್ಕೆ ಕೆವಲ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ. ಅಧಿಕಾರಿಗಳಿಂದ ಸರಕಾರ ನಡೆಸುತ್ತೇವೆ ಎಂದಾದರೆ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿ ನೀವು ಇರುವುದೇಕೆ ? ಎಂದು ಪ್ರಶ್ನೆಸಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ಜಿಲ್ಲೆಯ ಸಚಿವರು, ಸಂಸದರು ಎಚ್ಚೆತುಕೊಂಡು ರೈತರ ಬೇಡಿಕೆಗೆ ಕಿವಿಯಾಗಿ, ಧ್ವನಿಯಾಗಿ, ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದರು.

ಕಳೆದ 20 ದಿನಗಳಿಂದ ರೈತರು ಶಾಮತಿಯುತ ಹೋರಾಟ ನಡೆಸುತ್ತಿದ್ದಾರೆ. ಆದರೆ ಚಿಂಚೋಳಿಯಲ್ಲಿನ ಕಾಂಗ್ರೆಸ್ ನಾಯಕರು ಹಿಡಬಿಡಂಗಿ ವಿಚಾರದ ರೀತಿಯಲ್ಲಿ, ತಳ ಬುಡ ಇಲ್ಲದ ರೀತಿನಲ್ಲಿ ಮಾತನಾಡುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ಕಿಂಚಿತ್ತು ಕಳ ಕಳಿ, ಕಾಳಜಿ ಇದಿದ್ದರೇ, ಜಿಲ್ಲೆಯ ಸಚಿವರನ್ನು ಕರೆಸಿ ರೈತರ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗುತ್ತಿತು. ಅನ್ಯಾಯವಾದಾಗ ಈ ದೇಶದಲ್ಲಿ ಯಾವ ಸ್ಥಳದಲ್ಲಿದಾರೂ ಪ್ರತಿಭಟನೆ ಮಾಡಲು, ಯಾರಪ್ಪನ್ನ ಅನುಮತಿ ಪಡೆಯುವುದು ಬೇಕಾಗಿಲ್ಲ. ರೈತರನ್ನು ಹತ್ತಿಕಲು ಈ ರೀತಿಯ ರೈತ ವೀರೋಧಿ ಧೋರಣೆ ಮಾಡುತ್ತೀದ್ದೀರಾ. ಇದು ಕಾಂಗ್ರೇಸಿಗೆ ದೊಡ್ಡ ಹೊಡೆತ ಬಿಳಲಿದೆ ಎಂದರು. ಹೀಗಾಗಿ ಕಣ್ಣು ತೆರೆದು ನೋಡದೆ ಇರುವ ಸರಕಾರ. ಕಿವಿಕೊಡದೇ ಇರುವಂತಹ ಸರಕಾರದ ವಿರುದ್ಧ ಮುಂದುವರೆದ ಹಂತವಾಗಿ ಇದೇ ನ.27 ರಂದು ಶಾಸಕ, ಮಾಜಿ ಸಂಸದರ, ಮಾಜಿ ಶಾಸಕರ ಹಾಗೂ ನೂರಾರು ಮಠಾಧೀಶರ ಮತ್ತು ಸಾವಿರಾರು ರೈತರ, ಕಬ್ಬುಬೆಳೆಗಾರರ ಮಧ್ಯೆಯಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಮಾಡಲಿದ್ದೇವೆ. ಇದನ್ನು ಯಾರು ತಡೆಯುತ್ತಾರೇ ನೋಡೋಣ ಎಂದು ಕಾಂಗ್ರೇಸ್ ಸರಕಾರಕ್ಕೆ ಸವಾಲ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಅಖೀಲ ಭಾರತ ರೈತಹೀತರಕ್ಷಣೆ ಸಂಘದ ಅಧ್ಯಕ್ಷ ವಕೀಲ ಶಿವಶರಣಪ್ಪ ಜಾಪಟಿ, ಪ್ರಧಾನ ಕಾರ್ಯದರ್ಶಿ ನಂದಿಕುಮಾರ ಪಾಟೀಲ ನಂಪಾ, ಗೌರಿಶಂಕರ ಉಪ್ಪಿನ್, ಡಾ. ಪವಾರ, ಅತೀಶ ಪವಾರ, ಶಿವಶರಣಪ್ಪ ಪಾಟೀಲ ನಿಡಗುಂದಾ ಸೇರಿದಂತೆ ಅನೇಕ ರೈತರು ಇದ್ದರು.

ಇದನ್ನೂ ಓದಿ: #KalaburagiBreaking