Monday, 25th November 2024

Physical Abuse: 20 ವರ್ಷ..87 ಮಹಿಳೆಯರು… ಆಪರೇಷನ್‌ ವೇಳೆ ನಿರಂತರ ಅತ್ಯಾಚಾರ; ಬೆಚ್ಚಿಬೀಳಿಸಿದೆ ಸ್ತ್ರೀರೋಗ ತಜ್ಞನ ಹೀನ ಕೃತ್ಯ!

Physical Abuse

ನಾರ್ವೆ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ದಾಖಲಾಗುತ್ತಿದೆ. ಈ ನಡುವೆ ನಾರ್ವೆಯಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಈ ಲೈಂಗಿಕ ಕಿರುಕುಳ ಹಗರಣದಲ್ಲಿ ಮಾಜಿ ಸ್ತ್ರೀರೋಗ ತಜ್ಞರೊಬ್ಬ ಶಸ್ತ್ರಚಿಕಿತ್ಸೆಯ ಸಮಯದಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರ(Physical Abuse) ಎಸಗಿದ್ದಾರೆ ಮತ್ತು ಅದನ್ನು ವಿಡಿಯೊ ಮಾಡಿ  20 ವರ್ಷಗಳ ಕಾಲ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

55 ವರ್ಷದ ಅರ್ನೆ ಬೈ ಲೈಂಗಿಕ ದೌರ್ಜನ್ಯ ಎಸಗಿದ ಸ್ತ್ರೀರೋಗತಜ್ಞ. ವಿಚಾರಣೆಯ  ಸಮಯದಲ್ಲಿ 14 ಮತ್ತು 15 ವರ್ಷದ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ . ಹಾಗಾಗಿ ಆತ  21 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆಯಂತೆ.

ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಸ್ತ್ರೀರೋಗ ಪರೀಕ್ಷೆಗಳಿಗೆ ಸಂಬಂಧಿಸಿದ ದಾಖಲೆಗಳು  ಸೇರಿದಂತೆ 6,000 ಗಂಟೆಗಳ ಅತ್ಯಾಚಾರದ ವಿಡಿಯೊಗಳನ್ನು  ವಶಪಡಿಸಿಕೊಂಡಿದ್ದಾರೆ. ಹಾಗೇ ರೋಗಿಗಳಿಗೆ ತಿಳಿಯದೆ ಆತ ಇಂತಹ ನೀಚ ಕೆಲಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಬೈನ ಅಪರಾಧಗಳ ವಿವರಗಳು ಇಲ್ಲಿವೆ:
ದೋಷಾರೋಪ ಪಟ್ಟಿಯ ಪ್ರಕಾರ, ಬೈ ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಮಹಿಳೆಯರೊಳಗೆ ಡಿಯೋಡರೆಂಟ್-ತರಹದ, ಬಾಟಲಿಯಂತಹ ಮತ್ತು ಸಿಲಿಂಡರಾಕಾರದ ವಸ್ತುವನ್ನು ಸೇರಿಸಿದ್ದಾನೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯಕ್ಕೆ ನೀಡಿದ ಆಘಾತಕಾರಿ ಹೇಳಿಕೆಯಲ್ಲಿ, ಒಬ್ಬ ಮಹಿಳೆ ಈ ವೇಳೆ ತನಗೆ ತುಂಬಾ ನೋವಾಗಿದೆ. ಇದರಿಂದ ತಾನು ಸಾಯುತ್ತೇನೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾಳೆ.

ಹಾಗೇ ಇನ್ನೊಬ್ಬ ಮಹಿಳೆ  “ಗಂಟಲು ನೋವು ಇದ್ದ ಕಾರಣ ವೈದ್ಯರ ಬಳಿಗೆ ಹೋಗಿದ್ದೆ, ಆದರೆ ಅಲ್ಲಿ ನನ್ನ ಒಳ ಉಡುಪುಗಳನ್ನು ತೆಗೆದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. “ಅವರು ನನ್ನ ವೈದ್ಯರು ಎಂದು ನಾನು ಭಾವಿಸಿ, ಅವರು ಹೇಳಿದಂತೆ ನಾನು ಮಾಡಿದೆ” ಎಂದು ಆಕೆ ಹೇಳಿದ್ದಾಳೆ.

ಹೀಗೆ ಎಲ್ಲಾ ಮಹಿಳೆಯರು ತಮ್ಮ ಸ್ತ್ರೀರೋಗ ಪರೀಕ್ಷೆಗಳ ಸಮಯದಲ್ಲಿ ಆರೋಪಿಯಿಂದಾದ ಅಹಿತಕರ, ಆಕ್ರಮಣಕಾರಿ ಅನುಭವಗಳ ಬಗ್ಗೆ ವಿವರಿಸಿದ್ದಾರೆ. ಈ ಪ್ರಕರಣವು ಸಣ್ಣ ನಾರ್ವೇಜಿಯನ್ ಪಟ್ಟಣವಾದ ಫ್ರಾಸ್ಟಾವನ್ನು ಬೆಚ್ಚಿಬೀಳಿಸಿದೆ. ಏಕೆಂದರೆ ಬೈ ಹಲವಾರು ವರ್ಷಗಳಿಂದ ಅಲ್ಲಿನ ನೂರಾರು ನಿವಾಸಿಗಳಿಗೆ ವೈದ್ಯರಾಗಿದ್ದರು.

ನ್ಯಾಯಾಲಯಕ್ಕೆ ಗ್ರಾಫಿಕ್ ವಿಡಿಯೊ ಪುರಾವೆಗಳನ್ನು ತೋರಿಸಲಾಯಿತು, ಇವೆಲ್ಲವನ್ನೂ ಪರೀಕ್ಷೆಯ ಸಮಯದಲ್ಲಿ ಬೈ ರೆಕಾರ್ಡ್ ಮಾಡಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ.

ಇದನ್ನೂ ಓದಿ:ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಮುಂದೇನಾಯ್ತು? ವಿಡಿಯೊ ಇದೆ

ಬೈ ಅಪರಾಧ ಕೃತ್ಯಗಳ ಬಗ್ಗೆ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ ನಂತರ ಆಗಸ್ಟ್ 2022 ರಲ್ಲಿ ಬೈ  ಕೃತ್ಯಗಳ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 2023 ರಲ್ಲಿ ಅವರ ವಿರುದ್ಧ ಪೊಲೀಸ್ ಆರೋಪಗಳು ದಾಖಲಾಗುವವರೆಗೂ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿತ್ತು. ಅವರ ವಿರುದ್ಧದ ಗಂಭೀರ ಆರೋಪಗಳ ಹೊರತಾಗಿಯೂ, ಬೈ ಅವರನ್ನು ಕಸ್ಟಡಿಯಲ್ಲಿ ಇರಿಸಲಾಗಿಲ್ಲ ಎನ್ನಲಾಗಿತ್ತು.