Monday, 25th November 2024

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ(IND vs AUS) ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ 295 ರನ್‌ ಅಂತರದ ಗೆಲುವು ಸಾಧಿಸಿದ ಭಾರತ, ಈ ಗೆಲುವಿನೊಂದಿಗೆ ಹಕವು ದಾಖಲೆ ನಿರ್ಮಿಸಿದೆ. ದಾಖಲೆಯ ವಿವರ ಈ ಕೆಳಗಿನಂತಿದೆ.

ಇದು ಭಾರತ ತಂಡ ಪರ್ತ್‌ನಲ್ಲಿ ಸಾಧಿಸಿದ 2ನೇ ಗೆಲುವು. ಇದಕ್ಕೂ ಮುನ್ನ ಭಾರತ ಇಲ್ಲಿ 5 ಪಂದ್ಯಗಳನ್ನಾಡಿ ಒಂದನ್ನಷ್ಟೇ ಜಯಿಸಿತ್ತು. ಉಳಿದ ನಾಲ್ಕನ್ನು ಆಸ್ಟ್ರೇಲಿಯ ಗೆದ್ದಿತ್ತು. ಇದೀಗ ಭಾರತ ಮತ್ತೊಂದು ಗೆಲುವು ಕಂಡಿದೆ. ಭಾರತದ ಮೊದಲ ಗೆಲುವು ದಾಖಲಾಗಿದ್ದು 2008ರಲ್ಲಿ. ಧೋನಿ ಸಾರಥ್ಯದ ಟೀಮ್‌ ಇಂಡಿಯಾ 72 ರನ್‌ ಅಂತರದ ಗೆಲುವು ಸಾಧಿಸಿತ್ತು.

ಗರಿಷ್ಠ ಮೊತ್ತದ ಗೆಲುವು

47 ವರ್ಷದ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸಾಧಿಸಿದ ಗರಿಷ್ಠ ರನ್‌ ಅಂತರದ ಗೆಲುವು ಇದಾಗಿದೆ. 1977ರಲ್ಲಿ ನಡೆದಿದ್ದ ಮೆಲ್ಬೋರ್ನ್ ಟೆಸ್ಟ್‌ ಪಂದ್ಯದಲ್ಲಿ ಭಾರತ 222 ರನ್‌ ಗೆಲುವು ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಏಷ್ಯಾದ ಹೊರಗೆ ಭಾರತದ ದೊಡ್ಡ ಗೆಲುವು (ರನ್‌ ಅಂತರದಲ್ಲಿ)

2019: ವೆಸ್ಟ್‌ ಇಂಡೀಸ್‌ ವಿರುದ್ಧ- ನಾರ್ಥ್‌ಸೌಂಡ್‌ನಲ್ಲಿ 318 ರನ್‌ಗಳ ಜಯ

2024: ಆಸ್ಟ್ರೇಲಿಯಾ ವಿರುದ್ಧ- ಪರ್ತ್‌ನಲ್ಲಿ 295 ರನ್‌ಗಳ ಜಯ

1986: ಇಂಗ್ಲೆಂಡ್‌ ವಿರುದ್ಧ- ಹೆಡಿಂಗ್ಲೆಯಲ್ಲಿ 279 ರನ್‌ಗಳ ಜಯ

2019: ನ್ಯೂಜಿಲೆಂಡ್‌ ವಿರುದ್ಧ- ಆಕ್ಲೆಂಡ್‌ನಲ್ಲಿ 272 ರನ್‌ಗಳ ಜಯ

2019: ವೆಸ್ಟ್‌ ಇಂಡೀಸ್‌ ವಿರುದ್ಧ- ಕಿಂಗ್ಸ್‌ಟನ್‌ನಲ್ಲಿ 257 ರನ್‌ಗಳ ಜಯ

ಇದನ್ನೂ ಓದಿ IND vs AUS: ಪರ್ತ್‌ನಲ್ಲಿ ಆಸೀಸ್‌ ಪತನ; ಭಾರತಕ್ಕೆ ದಾಖಲೆಯ ಗೆಲುವು

ಭಾರತ ವಿರುದ್ಧ ಆಸೀಸ್‌ಗೆ ಅತಿದೊಡ್ಡ ಸೋಲು(ರನ್‌ ಅಂತರದಲ್ಲಿ)

2008: ಮೊಹಾಲಿಯಲ್ಲಿ 320 ರನ್‌ ಸೋಲು

2024: ಪರ್ತ್‌ನಲ್ಲಿ 295 ರನ್‌ ಸೋಲು

1977: ಮೆಲ್ಪರ್ನ್‌ನಲ್ಲಿ 222 ರನ್‌ ಸೋಲು

1998: ಚೆನ್ನೈನಲ್ಲಿ 179 ರನ್‌ ಸೋಲು

2008: ನಾಗ್ಪುರದಲ್ಲಿ 172 ರನ್‌ ಸೋಲು

ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗೆ ಕುಸಿದಿದ್ದ ಭಾರತ, ಸಂಘಟಿತ ಬೌಲಿಂಗ್‌ ದಾಳಿ ನಡೆಸಿ ಆಸೀಸ್‌ ತಂಡವನ್ನು 104 ರನ್‌ಗೆ ಕಟ್ಟಿ ಹಾಕಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ವಿರಾಟ್‌ ಕೊಹ್ಲಿಯ ಅಮೋಘ ಶತಕದ ನೆರವಿನಿಂದ 6 ವಿಕೆಟ್‌ಗೆ 487 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿ ಆತಿಥೇಯ ಆಸೀಸ್‌ಗೆ 534ರನ್‌ಗಳ ಬೃಹತ್‌ ಗೆಲುವಿನ ಗುರಿ ನೀಡಿತು. ಈ ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಆಸ್ಟ್ರೇಲಿಯಾ 238ರನ್‌ ಸರ್ವಪತನ ಕಂಡಿತು.