ಉತ್ತರಪ್ರದೇಶ: ಅಂಗಡಿಯೊಂದರ ಹೊರಗೆ ಸರಕುಗಳನ್ನು ಇಡುವ ವಿಚಾರವಾಗಿ ವ್ಯಾಪಾರಿಗಳು ಜಗಳವಾಡಿಕೊಂಡ ಘಟನೆ ಉತ್ತರ ಪ್ರದೇಶದ ಔರೈಯಾದ ಸದರ್ ಕೊಟ್ವಾಲಿ ಪ್ರದೇಶದ ಭೋಲೆ ಮಂದಿರದ ಬಳಿ ನಡೆದಿದ್ದು, ಪರಿಸ್ಥಿತಿ ಬಹಳ ಉಲ್ಬಣಗೊಂಡಿತ್ತು. ಅಂಗಡಿಯವರು ರಸ್ತೆಯ ಮಧ್ಯದಲ್ಲಿ ಪರಸ್ಪರರ ಹಲ್ಲೆ ಮಾಡಿದ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.
#औरैया:-औरैया के सदर कोतवाली क्षेत्र में सामान दुकान के बाहर रखने को लेकर व्यापारियों के बीच जमकर विवाद हुआ। यह विवाद इतना बढ़ गया कि सड़क पर मारपीट शुरू हो गई, जिसमें कपड़े तक फाड़ डाले गए। #viral #viralvideo pic.twitter.com/90tjSJqoBg
— Yug (@mittal68218) November 24, 2024
ಈ ವೈರಲ್ ವಿಡಿಯೊದಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಪುರುಷರೆಲ್ಲರೂ ಸೇರಿಕೊಂಡು ಕೋಲುಗಳನ್ನು ಹಿಡಿದುಕೊಂಡು ಒಬ್ಬರ ಮೇಲೆ ಮತ್ತೊಬ್ಬರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.ಸ್ಥಳೀಯರು ಮಧ್ಯಪ್ರವೇಶಿಸಿ ಅವರನ್ನು ಬಿಡಿಸಲು ಪ್ರಯತ್ನಿಸಿದರೂ ಅವರು ಜಗಳವಾಡುತ್ತಾ ಒಬ್ಬರ ಕಪಾಳಕ್ಕೆ ಮತ್ತೊಬ್ಬರು ಬಾರಿಸಿದ್ದಾರೆ.
ಪೊಲೀಸ್ ವರದಿ ಪ್ರಕಾರ, ಅನಿಲ್ ಕುಮಾರ್ ಮತ್ತು ಆತನ ನೆರೆಹೊರೆಯವರಾದ ಪವನ್ ಕುಮಾರ್, ಸನ್ನಿ ಮತ್ತು ಲಕ್ಕಿ ಅಂಗಡಿಯ ಹೊರಗೆ ಸರಕುಗಳನ್ನು ಇಡುವ ಬಗ್ಗೆ ವಾಗ್ವಾದ ನಡೆಸಿದಾಗ ಇಡೀ ಘಟನೆ ನಡೆದಿದೆ. ಈ ಭಿನ್ನಾಭಿಪ್ರಾಯವು ಶೀಘ್ರದಲ್ಲೇ ಹಿಂಸಾತ್ಮಕವಾಗಿ ಮಾರ್ಪಟ್ಟಿತು, ಎರಡೂ ಕಡೆಯವರು ಕೋಲುಗಳನ್ನು ಹಿಡಿದು ನಡುರಸ್ತೆಯಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅನಿಲ್ ಕುಮಾರ್ ದೂರು ದಾಖಲಿಸಿದ್ದಾರೆ. ಬಿಎನ್ಎಸ್ (ಭಾರತೀಯ ನಾಗರಿಕ ಸುರಕ್ಷಾ) ಸೆಕ್ಷನ್ 170 ರ ಅಡಿಯಲ್ಲಿ ಪವನ್ ಕುಮಾರ್, ಸನ್ನಿ ಮತ್ತು ಲಕ್ಕಿ ಎಂಬ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಕನಾಗಿರುವ ಲಕ್ಕಿಗೆ ಸಂಬಂಧಿಸಿದಂತೆ, ಬಾಲಾಪರಾಧಿ ಕಾನೂನಿನ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಮುಂದೇನಾಯ್ತು? ವಿಡಿಯೊ ಇದೆ
ಈ ಘಟನೆ 2021 ರಲ್ಲಿ ಯುಪಿ ಅಂಗಡಿ ವ್ಯಾಪಾರಿಗಳ ನಡುವಿನ ಜಗಳವನ್ನು ನೆನಪಿಸುತ್ತದೆ. ಮೂರು ವರ್ಷಗಳ ಹಿಂದೆ, ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಚಾಟ್ ಮಾರಾಟಗಾರರ ನಡುವೆ ತೀವ್ರವಾದ ಜಗಳ ಶುರುವಾಗಿತ್ತು. ಇದು ಅಂತಿಮವಾಗಿ ಎಂಟು ಜನರನ್ನು ಬಂಧಿಸಲು ಕಾರಣವಾಯಿತು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.