-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಫ್ ಶೋಲ್ಡರ್ ಕ್ರಾಪ್ ಟಾಪ್ ಅಥವಾ ಕ್ರಾಪ್ ಬ್ಲೌಸ್ ಜತೆ ಸೀರೆ ಮ್ಯಾಚಿಂಗಾ! ಖಂಡಿತಾ, ಹೌದು, ಬಾಲಿವುಡ್ ನಟಿ ತಾಪ್ಸಿ ಪನ್ನು, ಆಫ್ ಶೋಲ್ಡರ್ ಕ್ರಾಪ್ ಬ್ಲೌಸ್ (Star Saree Fashion) ಜತೆ ಸೀರೆ ಉಟ್ಟು, ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ, ಮಾತ್ರವಲ್ಲ, ನಯಾ ಇಂಡೋ-ವೆಸ್ಟರ್ನ್ ಸೀರೆ ಸ್ಟೈಲಿಂಗ್ ಟ್ರೆಂಡ್ ಸೆಟ್ ಮಾಡಿದ್ದಾರೆ.
ತಾಪ್ಸಿಯ ವೆಸ್ಟರ್ನ್ ಸೀರೆ ಬ್ಲೌಸ್ ಸ್ಟೈಲಿಂಗ್ ಕ್ರೇಝ್
ಅಂದಹಾಗೆ, ನಟಿ ತಾಪ್ಸಿ ಪನ್ನು, ಈ ರೀತಿಯ ಡಿಫರೆಂಟ್ ಶೈಲಿಯ ಸೀರೆ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಮಾಡಿರುವುದು ಇದೇ ಮೊದಲೇನಲ್ಲ! ಈ ಹಿಂದೆ ಪ್ಯಾರಿಸ್‌ನಲ್ಲಿ ನಡೆದ ಒಲಂಪಿಕ್‌ನಲ್ಲಿ ಪಾಲ್ಗೊಂಡಾಗಲು ಕೂಡ ತಾಪ್ಸಿ ಪನ್ನು, ಪ್ರತಿದಿನ ನಾನಾ ಬಗೆಯ ಸೀರೆಗಳಲ್ಲಿ, ವಿಭಿನ್ನ ಬಗೆಯ ಬ್ಲೌಸ್‌ಗಳನ್ನು ಧರಿಸಿ, ಪ್ರಯೋಗಾತ್ಮಕ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸೀರೆ ಪ್ರಿಯರ ಗಮನ ಸೆಳೆದಿದ್ದರು.
ತಾಪ್ಸಿಯ ಹಿಂದಿನ ಸೀರೆ ಸ್ಟೈಲಿಂಗ್ ಹೇಗಿತ್ತು?
ಅಂದಹಾಗೆ, ಪ್ಯಾರಿಸ್ ಒಲಂಪಿಕ್ಸ್‌ನ ಮೊದಲ ದಿನ ತಾಪ್ಸಿ, ಕಾಟನ್ ಸೀರೆಯನ್ನು, ಸ್ಕಾರ್ಫ್‌ನಂತೆ ಕುತ್ತಿಗೆ ಸುತ್ತಿ, ಸ್ಲಿವ್ಲೆಸ್ ವೇಸ್ಟ್‌ಕೋಟ್‌ನೊಳಗೆ ತೂರಿ, ಪ್ರಿಂಟೆಡ್ ಸೆರಗನ್ನು ವೇಸ್ಟ್‌ಲೈನ್‌ನ ಮುಂಬರುವಂತೆ ಡ್ರೇಪ್ ಮಾಡಿದ್ದರು. ಎರಡನೇ ದಿನ ಬ್ಲ್ಯಾಕ್ ಟ್ಯಾಂಕ್ ಟಾಪ್ ಜತೆಗೆ ಕಾಟನ್ ಸೀರೆಯನ್ನು ಧೋತಿ ಸ್ಟೈಲ್‌ನಲ್ಲಿ ಉಟ್ಟಿದ್ದರು. ಇನ್ನೊಂದು ದಿನ, ಡೆನಿಮ್ ಶರ್ಟ್ ಜತೆಗೆ ಕ್ವಿರ್ಕಿ ಪ್ರಿಂಟ್ಸ್‌ನ ಸೀರೆಯನ್ನು ಉಟ್ಟಿದ್ದರು. ಮತ್ತೊಂದು ದಿನ, ಕಾಲರ್ ನೆಕ್‌ನ ಫುಲ್ ಸ್ಲೀವ್‌ನ ಕಾರ್ಸೆಟ್ ಟಾಪ್ ಜತೆಗೆ ಕಾಟನ್ ಸೀರೆಯ ಸೆರಗನ್ನು ಬಲಕ್ಕೆ ತಿರುಗಿಸಿ, ಒಟ್ಟೊಟ್ಟಾಗಿ ಪಿನ್ ಮಾಡಿದ್ದರು.
ತಾಪ್ಸಿ ಯೂನಿಕ್ ಸೀರೆ ಸ್ಟೈಲಿಂಗ್
ಪ್ರತಿ ಬಾರಿಯೂ ಅವರು ಯೂನಿಕ್ ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸ್ಟೈಲಿಂಗ್ ಈ ಕಾಲದ ಹುಡುಗಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಕೂಡ. ಸೀರೆಯನ್ನು ಔಟ್‌ಫಿಟ್‌ನಂತೆ ಧರಿಸಬಹುದು ಎಂಬುದನ್ನು ಆಗಲೇ ತಾಪ್ಸಿ ತೋರಿಸಿಕೊಟ್ಟಿದ್ದರು. ಇದು ಸೀರೆಯ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿತ್ತು ಎಂದು ಅವರ ಸೀರೆ ಪ್ರೇಮ ಹಾಗೂ ಸ್ಟೈಲಿಂಗ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ಅಂಜಲಿ. ಅವರ ಪ್ರಕಾರ, ಈ ಜನರೇಷನ್ ಹೆಣ್ಣುಮಕ್ಕಳು, ಇಂತಹ ಸ್ಟೈಲಿಂಗ್ ನೋಡಿದಲ್ಲಿ ಅದನ್ನು ಫಾಲೋ ಮಾಡಲು ಟ್ರೈ ಮಾಡುತ್ತಾರೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Imitation Pearl Designerwear Fashion: ಸೆಲೆಬ್ರೆಟಿ ಲುಕ್ ನೀಡುವ ಇಮಿಟೇಷನ್ ಪರ್ಲ್ ಡಿಸೈನರ್‌ವೇರ್ಸ್
ತಾಪ್ಸಿಯಂತೆ ಆಫ್ ಶೋಲ್ಡರ್ ಬ್ಲೌಸ್ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸುವುದು ಹೇಗೆ?
- ಕಾಂಟ್ರಾಸ್ಟ್ ಕಲರ್ನ ಯಾವುದೇ ಆಫ್ ಶೋಲ್ಡರ್ ಕ್ರಾಪ್ ಟಾಪನ್ನು ಕೂಡ ಸೀರೆಗೆ ಮ್ಯಾಚ್ ಮಾಡಬಹುದು.
- ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹ ಆಫ್ ಶೋಲ್ಡರ್ ಬ್ಲೌಸ್ ಆಯ್ಕೆ ಮಾಡಬೇಕು.
- ಧರಿಸುವ ಆಫ್ ಶೋಲ್ಡರ್ ಬ್ಲೌಸ್ ಫಿಟ್ ಆಗಿ ಕೂರಬೇಕು. ಇಲ್ಲವಾದಲ್ಲಿ ಜಾರಿದಂತೆ ಕಾಣಬಹುದು.
- ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ಗೆ ಆದ್ಯತೆ ನೀಡಬೇಕು.
- ಸ್ಟೈಲಿಂಗ್ ನಂತರ ಅದನ್ನು ಸೂಕ್ತ ರೀತಿಯಲ್ಲಿ ಪ್ರೆಸೆಂಟ್ ಮಾಡಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)