ಲಂಡನ್: ಹಣಕಾಸು ಅಕ್ರಮದ ಆರೋಪದಲ್ಲಿ ಸಿಲುಕಿ 2010ರಲ್ಲಿ ದೇಶ ಬಿಟ್ಟು ಇಂಗ್ಲೆಂಡ್ಗೆ ಪರಾರಿಯಾಗಿರುವ ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಇದೀಗ ತಾವು ಪಲಾಯನ ಮಾಡಿರುವ ಕಾರಣವನ್ನು ವಿವರಿಸಿದ್ದಾರೆ. ಕಾನೂನಿಗೆ ಹೆದರಿಯಲ್ಲ, ಬದಲಾಗಿ ಭೂಗತ ದೊರೆ ದಾವೂದ್ ಇಬ್ರಾಹಿಂ (Dawood Ibrahim)ನಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಭಾರತದಿಂದ ಹೊರ ಹೋಗಿದ್ದಾಗಿ ತಿಳಿಸಿದ್ದಾರೆ. ರಾಜ್ ಶಮಾನಿ (Raj Shamani) ಅವರ ಪೋಡ್ಕಾಸ್ಟ್ ʼಫಿಗರಿಂಗ್ ಔಟ್ʼ (Figuring Out) ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ʼʼಕೊಲೆ ಬೆದರಿಕೆ ಬಂದ ಕಾರಣ ದೇಶ ತೊರೆದಿದ್ದೇನೆʼʼ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ʼʼಯಾವುದೇ ಕಾನೂನು ಕ್ರಮಕ್ಕೆ ಹೆದರಿ ನಾನು ಪಲಾಯನ ಮಾಡಿದ್ದಲ್ಲ. ದಾವೂದ್ ಇಬ್ರಾಹಿಂನಿಂದ ಕೊಲೆ ಬೆದರಿಕೆ ಬಂದಿತ್ತು. ಈ ಕಾರಣಕ್ಕೆ ದೇಶ ತೊರೆದಿದ್ದೇನೆ. ಐಪಿಎಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ದಾವೂದ್ ಕೇಳಿಕೊಂಡಿದ್ದ. ಆದರೆ ನಾನು ಇದನ್ನು ನಿರಾಕರಿಸಿದ್ದೆ. ನನ್ನ ಪ್ರಕಾರ ಆಟದಲ್ಲಿ ನೈತಿಕತೆ ಕಾಪಾಡುವುದು ಬಹಳ ಮುಖ್ಯ. ಕ್ರೀಡಾ ಕ್ಷೇತ್ರಕ್ಕೆ ಭಷ್ಟಾಚಾರದ ಕಳಂಕ ಮೆತ್ತಬಾರದು ಎನ್ನುವುದು ನನ್ನ ನಿಲುವಾಗಿತ್ತುʼʼ ಎಂದು ಲಲಿತ್ ಮೋದಿ ಹೇಳಿದ್ದಾರೆ.
One of the boldest podcasts we did on the reality of Indian Cricket, Politics, Mafia and IPL from the point of view of the man who created IPL. @LalitKModi
— Raj Shamani (@rajshamani) November 24, 2024
If you had an opportunity to ask anything, what would you ask @LalitKModi ? pic.twitter.com/9cedGN1J2Q
ಸುರಕ್ಷತೆಗಾಗಿ ವಿಮಾನ ನಿಲ್ದಾಣದ ವಿಐಪಿ ನಿರ್ಗಮನ ಮಾರ್ಗವನ್ನು ಬಳಸುವಂತೆ ಬಾಡಿಗಾರ್ಡ್ ಸೂಚಿಸಿದ್ದರು. ಎಂದು ಲಲಿತ್ ಮೋದಿ ತಿಳಿಸಿದ್ದಾರೆ. ʼʼದಾವೂದ್ನ ಹಿಟ್ ಲಿಸ್ಟ್ನಲ್ಲಿದ್ದರೂ 12 ಗಂಟೆ ಮಾತ್ರ ರಕ್ಷಣೆಯನ್ನು ಖಾತರಿಪಡಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದರಿಂದ ನನಗೆ ದೇಶ ಬಿಡುವುದು ಅನಿವಾರ್ಯವಾಗಿತ್ತುʼʼ ಎಂದು ಅವರು ವಿವರಿಸಿದ್ದಾರೆ.
“ಉಪ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ವಿಮಾನ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿದ್ದರು” ಎಂದು ಲಲಿತ್ ಮೋದಿ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ʼʼಇನ್ನು ಮುಂದೆ ನಿಮ್ಮ ರಕ್ಷಣೆ ಸಾಧ್ಯವಿಲ್ಲ. ಮುಂದಿನ 12 ಗಂಟೆಗಳವರೆಗೆ ಮಾತ್ರ ನಿಮ್ಮ ಸುರಕ್ಷತೆಯನ್ನು ನಾವು ಖಚಿತಪಡಿಸಬಹುದು ಎಂದ ಅವರು ಅಲ್ಲಿಂದ ನನ್ನನ್ನು ಮುಂಬೈನ ಫೋರ್ ಸೀಸನ್ಸ್ ಹೋಟೆಲ್ಗೆ ಕರೆದೊಯ್ದರುʼʼ ಎಂದಿದ್ದಾರೆ.
ಭಾರತಕ್ಕೆ ಮರಳುವೆ
ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಯಾವಾಗ ಬೇಕಾದರೂ ಭಾರತಕ್ಕೆ ಮರಳುವುದಾಗಿ ತಿಳಿಸಿದ್ದಾರೆ. “ನಾನು ನಾಳೆ ಬೆಳಗ್ಗೆ ಬೇಕಾದರೆ ಭಾರತಕ್ಕೆ ಮರಳಬಹುದು. ಕಾನೂನಾತ್ಮಕವಾಗಿ ನಾನು ದೇಶಭ್ರಷ್ಟನಲ್ಲ. ಯಾವುದೇ ನ್ಯಾಯಾಲಯದಲ್ಲಿ ಒಂದೇ ಒಂದು ಪ್ರಕರಣವಿಲ್ಲ. ಇದ್ದರೆ ದಯವಿಟ್ಟು ಅದನ್ನು ಹಾಜರುಪಡಿಸಿ” ಎಂದು ಅವರು ಹೇಳಿದ್ದಾರೆ. ಹತ್ಯೆ ಮಾಡಲು ಛೋಟಾ ಶಕೀಲ್ ತಾವು ತಂಗಿದ್ದ ಹೋಟೆಲ್ಗೆ ಬಂದಿದ್ದ. ಆದರೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಗಿ ಲಲಿತ್ ಮೋದಿ ವಿವರಿಸಿದ್ದಾರೆ.
2010ರ ಐಪಿಎಲ್ ಬಳಿಕ ಲಲಿತ್ ಮೋದಿ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯಿಂದ ಅಮಾನತುಗೊಳಿಸಲಾಗಿತ್ತು. ದುರ್ನಡತೆ ಮತ್ತು ವ್ಯವಹಾರಗಳಲ್ಲಿ ಹಣಕಾಸು ಅಕ್ರಮಗಳ ಆರೋಪದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು. ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಿಶ್ವ ಕ್ರೀಡಾ ಗುಂಪಿನ (World Sports Group) ಅಧಿಕಾರಿಗಳೊಂದಿಗೆ ಶಾಮೀಲಾಗಿ 753 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಬಿಸಿಸಿಐ ಆರೋಪಿಸಿದೆ.
ಈ ಸುದ್ದಿಯನ್ನೂ ಓದಿ: Airport Rules: ಬದಲಾಗಲಿದೆ ವಿಮಾನ ನಿಲ್ದಾಣದ ನಿಯಮಗಳು; ಪ್ರಯಾಣಿಸುವ ಮೊದಲು ತಿಳಿದುಕೊಂಡಿರಿ