Monday, 25th November 2024

IPL 2025 auction: ತವರಿನಲ್ಲಿಯೇ ಉಳಿದ ಮನೋಜ್‌ ಭಾಂಡಗೆ, ಆರ್‌ಸಿಬಿ ಸೇರಿದ ಜಾಕೋಬ್‌ ಬೆಥೆಲ್‌!

IPL 2025 auction: Royla challengers Bengaluru buy Jacob Bethell for ₹2.6 crore

ನವದೆಹಲಿ: ಇಂಗ್ಲೆಂಡ್‌ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ (IPL 2025 auction) ಸೇರ್ಪಡೆಯಾಗಿದ್ದಾರೆ. ಅಲ್ಲದೆ ಕಳೆದ ಹಲವು ಆವೃತ್ತಿಗಳಲ್ಲಿ ತವರು ತಂಡ ಆರ್‌ಸಿಬಿ ತಂಡದಲ್ಲಿ ಬೆಂಚ್‌ ಕಾದಿದ್ದ ಕನ್ನಡಿಗ ಮನೋಜ್‌ ಭಾಂಡಗೆ ಅವರನ್ನು ಬೆಂಗಳೂರು ಫ್ರಾಂಚೈಸಿ ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಮರಳಿ ಕರೆದುಕೊಂಡಿದ್ದಾರೆ.

ಸೋಮವಾರ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿ ಮೆಗಾ ಹರಾಜಿನ ಎರಡನೇ ದಿನ ಬೆಂಗಳೂರು ಫ್ರಾಂಚೈಸಿಯು ವೆಸ್ಟ್‌ ಇಂಡೀಸ್‌ ಮೂಲದ ಇಂಗ್ಲೆಂಡ್‌ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ಅವರನ್ನು 2.6 ಕೋಟಿ ರೂ. ಗಳಿಗೆ ಖರೀದಿಸಿದೆ. ಅಂದ ಹಾಗೆ ಬೆಥೆಲ್‌ ಅವರನ್ನು ಖರೀದಿಸಲು ಆರ್‌ಸಿಬಿ ಜೊತೆಗೆ ಪಂಜಾಬ್‌ ಕಿಂಗ್ಸ್‌ ಕೂಡ ಆಸಕ್ತಿ ತೋರಿತ್ತು. ಆದರೆ, ಅಂತಿಮವಾಗಿ ಬೆಂಗಳೂರು ತಂಡದ ಪಾಲಾದರು. ಅಂದ ಹಾಗೆ ಇಂಗ್ಲೆಂಡ್‌ ಆಟಗಾರನ ಮೂಲ ಬೆಲೆ 1.25 ಕೋಟಿ ರೂ. ಗಳಾಗಿತ್ತು.

IPL 2025 Mega Auction: ಮೊದಲನೇ ದಿನ ಸೋಲ್ಡ್‌, ಅನ್‌ಸೋಲ್ಡ್‌ ಆದ ಆಟಗಾರರ ವಿವರ!

ಜಾಕೋಬ್‌ ಬೆಥೆಲ್‌ ಅವರು ಇಂಗ್ಲೆಂಡ್‌ ಪರ ಆಡಿದ್ದ 7 ಪಂದ್ಯಗಳಿಂದ 57.7ರ ಸರಾಸರಿಯಲ್ಲಿ 173 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದೀಗ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಮಧ್ಯಮ ಕ್ರಮಾಂಕಕ್ಕೆ ಬಲವನ್ನು ತುಂಬಿದ್ದಾರೆ ಹಾಗೂ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.

IPL Auction 2025: ಆರ್‌ಸಿಬಿ ಸೇರಿದ ಭುವನೇಶ್ವರ್‌, ಕೃಣಾಲ್‌

ಆರ್‌ಸಿಬಿಗೆ ಮರಳಿದ ಮನೋಜ್‌ ಭಾಂಡಗೆ

ಕರ್ನಾಟಕ ಆಲ್‌ರೌಂಡರ್‌ ಮನೋಜ್‌ ಭಾಂಡಗೆ ಅವರು ಕಳೆದ ಹಲವು ಆವೃತ್ತಿಗಳಿಂದ ಆರ್‌ಸಿಬಿ ತಂಡದಲ್ಲಿದ್ದರು. ಆದರೆ, ಒಂದೇ ಒಂದು ಪಂದ್ಯದಲ್ಲಿ ಆಡಿಸಲು ಆರ್‌ಸಿಬಿ ಮನಸು ಮಾಡಿರಲಿಲ್ಲ. ಅಂದ ಹಾಗೆ ಮಗೆ ಹರಾಜಿಗೆ ಕನ್ನಡಿಗನ್ನು ರಿಲೀಸ್‌ ಮಾಡಲಾಗಿತ್ತು. ಆದರೆ, ಮೆಗಾ ಹರಾಜಿನ ಎರಡನೇ ದಿನವಾದ ಸೋಮವಾರ ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಮನೋಜ್‌ ಭಾಂಡಗೆ ಹೆಸರು ಕೇಳಿ ಬರುತ್ತಿದ್ದಂತೆ ಯಾವುದೇ ಫ್ರಾಂಚೈಸಿ ಕನ್ನಡಿಗನನ್ನು ಖರೀದಿಲು ಮನಸು ಮಾಡಲಿಲ್ಲ. ಇದನ್ನು ಗಮನಿಸಿದ ಆರ್‌ಸಿಬಿ ಮನೋಜ್‌ ಭಾಂಡಗೆ ಅವರನ್ನು ಮೂಲ ಬೆಲೆಗೆ ಖರೀದಿಸಿತು.

ಆರ್‌ಟಿಎಂ ಮೂಲಕ ಆರ್‌ಸಿಬಿಯಲ್ಲಿಯೇ ಉಳಿದ ಸ್ವಪ್ನಿಲ್‌ ಸಿಂಗ್‌

2025ರ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಆರ್‌ಟಿಎಂ ನಿಯಮದ ಮೂಲಕ ಮೊಹಮ್ಮದ್‌ ಸಿರಾಜ್‌, ವಿಲ್‌ ಜ್ಯಾಕ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಫಾಫ್‌ ಡು ಪ್ಲೆಸಿಸ್‌ ಅವರನ್ನು ಉಳಿಸಿಕೊಳ್ಳಲು ನಿರಾಕರಿಸಿತ್ತು. ಆದರೆ, ಮೆಗಾ ಹರಾಜಿನ ಎರಡನೇ ದಿನ ಆರ್‌ಟಿಎಂ ನಿಯಮದ ಮೂಲಕ 50 ಲಕ್ಷ ರೂ. ಗಳಿಗೆ ಆರ್‌ಸಿಬಿ ತನ್ನಲ್ಲಿಯೇ ಉಳಿಸಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ಸ್ವಪ್ನಿಲ್‌ ಸಿಂಗ್‌ ಅವರನ್ನು ಖರೀದಿಸಲು ಪ್ರಯತ್ನಿಸಿತು. ಆದರೆ, ಆರ್‌ಸಿಬಿ ಆರ್‌ಟಿಎಂ ಮೂಲಕ ತನ್ನ ಆಟಗಾರನನ್ನು ಉಳಿಸಿಕೊಂಡಿತು.