Monday, 25th November 2024

Temple Lokarpane: ಶ್ರೀ ಮಾರಮ್ಮ ದೇವಿ ದೇವಾಲಯ ಲೋಕಾರ್ಪಣೆ, ವಿಶೇಷ ಪೂಜೆ

ಬಾಗೇಪಲ್ಲಿ: ಹಣ, ಆಸ್ತಿ ಸಂಪಾಧನೆಯಿ0ದ ಶ್ರೀಮಂತಿಕೆ ಬರುತ್ತೆ ಆದರೇ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದುಕೊಂಡರೆ ಮನುಷ್ಯನಿಗೆ ನೆಮ್ಮದಿ ಸಿಗುತ್ತೆ ಅದ್ದರಿಂದ ಪ್ರತಿಯೊಬ್ಬರು ಭಕ್ತಿ ಭಾವನೆಗಳನ್ನು ಮೈಗೂಡಿಸಿಕೊಂಡು ನೆಮ್ಮದಿ ಜೀವನ ಸಾಗಿಸಿ ಎಂದು ಜಿಲ್ಲಾ ಮಾಜಿ ಸದಸ್ಯ ಹರಿನಾಥರೆಡ್ಡಿ ತಿಳಿಸಿದರು.

ಬಾಗೇಪಲ್ಲಿ ತಾಲೂಕಿನ ಚನ್ನರಾಯನಪಲ್ಲಿ ಗ್ರಾಮದಲ್ಲಿ ಗ್ರಾಮಸ್ಥರು ನೂತನವಾಗಿ ನಿರ್ಮಿಸಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಲೋಕಾರ್ಪಣೆ ಹಾಗೂ ದೇವಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಚನ್ನರಾಯನಪಲ್ಲಿ ಗ್ರಾಮದ ಎಲ್ಲಾ ಕುಟುಂಬಗಳು ಒಗ್ಗಟ್ಟು ಪ್ರದರ್ಶಿಸಿ ಗ್ರಾಮದಲ್ಲಿ ಮಾರಮ್ಮ ದೇವಿ ದೇಗುಲ ನಿರ್ಮಿಸಿರುವುದು ಸಂತಸದ ವಿಚಾರವಾಗಿದೆ. ಗ್ರಾಮದಲ್ಲಿರುವ ಒಗ್ಗಟ್ಟು ಎಲ್ಲರೂ ಮೆಚ್ಚುವಂತೆ ಇದ್ದು ಇತರರು ಈ ಗ್ರಾಮವನ್ನು ಮಾದರಿಯಾಗಿ ತೆಗೆದುಕೊಳ್ಳ ಬೇಕು. ದೇಗುಲ ಲೋಕಾರ್ಪಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೇರವೇರಿಸುವ ಶಕ್ತಿ ಗ್ರಾಮದ ಗ್ರಾಮಸ್ಥರಿಗೆ ಭಗವಂತ ನೀಡಿದ್ದಾನೆ. ದೇಗುಲ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿರುವ ಸಮಸ್ತ ನಾಗರೀಕರಿಗೆ, ಎಲ್ಲಾ ವರ್ಗದವರಿಗೆ ಭಗವಂತನ ಅರ್ಶೀವಾದದಿಂದ ಒಳ್ಳೆಯದಾಗಬೇಕು, ಈ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಒಳ್ಳೆಯದಾಗಲಿ ಎಂದು ಗ್ರಾಮ ದೇವತೆ ಮಾರಮ್ಮ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.

ಎರಡು ದಿನಗಳ ವಿಶೇಷ ಪೂಜೆ:
ಕಾರ್ತೀಕ ಮಾಸದ ಸೋಮವಾರದಂದು ಚನ್ನರಾಯನಪಲ್ಲಿ ಗ್ರಾಮದಲ್ಲಿ ನಡೆದ ದೇಗುಲ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ಗ್ರಾಮದಲಿ ಸಡಗರದ ವಾತಾವರಣ ನಿರ್ಮಾಣಗೊಂಡಿದ್ದು, ದೇಗುಲ ಪ್ರಾಂಗಣದಲ್ಲಿ ಎರಡು ದಿನಗಳಿಂದ ಧೀಪಾರಾಧನೆ, ಗಂಗೆ ಪೂಜೆ, ಕಳಶ ಸ್ಥಾಪನೆ, ಗಣಪತಿ ಹಾಗೂ ನವಗ್ರಹ ಹೋಮ, ನವಗ್ರಹ ಆರಾಧನೆ, ಗೋ ಪೂಜೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು, ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಗ್ರಾಮಸ್ಥರವತಿಯಿಂದ ತೀರ್ಥ ಪ್ರಸಾದ ವಿನಿಯೋಗ, ಅನ್ನದಾನ ಕಾರ್ಯವನ್ನು ಅಯೋಜಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಕೆ.ವಿ.ಶ್ರೀನಿವಾಸ್, ನಾಗರಾಜು, ಪೋಲಿಸ್ ಸೀನಪ್ಪ, ಜಿ.ರಂಗಸ್ವಾಮಿ, ಆರ್.ವಿ.ದೇವರಾಜು, ವಿ.ಶ್ರೀನಿವಾಸ, ಜೆಸಿಬಿ ಶಿವಪ್ಪ, ಕಾರ್ತಿಕ್, ರಾಮಾಂಜಿನಪ್ಪ, ಜಯಕುಮಾರ್, ಶಿವ, ಎನ್.ಅಶ್ವತ್ಥನಾರಾಯಣ, ವಿ.ಮಂಜುನಾಥ, ಶ್ರೀನಾಥ, ದೇವೆಂಧ್ರ, ನಾರಾಯಣಸ್ವಾಮಿ, ರಂಗಪ್ಪ, ಶಂಕರಪ್ಪ, ಸನವರ್ಧನ ಮತ್ತಿತರರು ಇದ್ದರು.