ಒಂಬತ್ತನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಖತ್ ಕುತೂಹಲ ಕೆರಳಿಸಿದೆ. ಸದ್ಯ ಮನೆಯೊಳಗೆ 13 ಮಂದಿ ಇದ್ದು, ಆಟ ರೋಚಕತೆ ಸೃಷ್ಟಿಸಿದೆ. ಕಳೆದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಇನ್ಮುಂದೆ ಟಾಸ್ಕ್ಗಳು ಕಠಿಣವಾಗುತ್ತಾ ಸಾಗುತ್ತದೆ ಎಂಬ ಮಾತನ್ನು ಹೇಳಿದ್ದರು. ಅದರಂತೆ ಇದೀಗ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದು, ಈ ವಾರದ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದಾರೆ.
ಹೌದು, ಬಿಗ್ ಬಾಸ್ ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ ಭರ್ಜರಿ ಆಗಿ ನಡೆಯುತ್ತಿದೆ. ಇವರ ಆರ್ಭಟಕ್ಕೆ ಮನೆಮಂದಿ ಕಂಗಾಲಾಗಿದ್ದಾರೆ. ಆದರೆ, ಹನುಮಂತ ಮತ್ತು ಧನರಾಜ್ ಆಚಾರ್ ರಾಜನ ಆರ್ಭಟಕ್ಕೆ ಕ್ಯಾರೇ ಎನ್ನುತ್ತಿಲ್ಲ. ಧನರಾಜ್ ಅವರು ರಾಜನ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆಪ್ತ ಗೆಳೆಯ ಹನುಮಂತನ ಬಳಿ ಗಾರ್ಡನ್ ಏರಿಯಾಗೆ ಬಂದು ರಾಜನ ವಿರುದ್ಧ ಮಸಲತ್ತು ಮಾಡಿದ್ದಾರೆ. ಏನ್ ಅನ್ಕೊಂಡಿದ್ದಾರೆ? ಅವರು ಹೇಳಿದ್ದೆಲ್ಲ ಅನಿಸಿಕೊಳ್ಳೋಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ನಂತರ ಹನುಮಂತ ರಾಜ ಮಂಜುವಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಧನರಾಜ್ ಹಾಗೂ ಹನುಮಂತ ಗಾರ್ಡರ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಾ ಇರುತ್ತಾರೆ. ಆಗ ಅಲ್ಲಿಗೆ ಶಿಶಿರ್ ಬಂದು, ಬನ್ನಿ ರಾಜ ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಹನುಮಂತ ಅವರು ರಾಜರಿಗೆ ಹೇಳಿ ಇಲ್ಲಿ ನಾವೂ ಕರೆಯುತ್ತಾ ಇದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಂಜು, ಮೂರ್ಖ ಸೊಕ್ಕೆ ನಿನಗೆ ಎಂದು ಗುಡುಗಿದ್ದಾರೆ. ಆಗ ತಕ್ಷಣ ಇಬ್ಬರೂ ಗಾರ್ಡರ್ ಏರಿಯಾದಿಂದ ಓಡಿಕೊಂಡು ಬಂದಿದ್ದಾರೆ.
ಇನ್ನು ಸಾಮ್ರಾಜ್ಯದಲ್ಲೂ ಹೋರಾಟ ಎಂದ ಚೈತ್ರಾ ಕುಂದಾಪುರ ಬಾಯಿಗೆ ಮಂಜು ಅವರು ಆಲೂಗೆಡ್ಡೆ ತುರುಕಿಸಿದ್ದಾರೆ. ಉಸಿರು ಆಚೆ ಬರಬಾರ್ದು ಅಂತ ಮಹಾರಾಜರ ಕಟ್ಟಪ್ಪಣೆ ಆಗಿದೆ. ಮಾತು ಮೀರಿದವರಿಗೆ 50 ಬಸ್ಕಿ ಹೊಡೆಸಿದ್ದಾರೆ ಮಂಜು. ಇವೆಲ್ಲದರ ಮಧ್ಯೆ ಯಾರಿಗೂ ಮಧ್ಯಾಹ್ನದ ಉಪಹಾರ ಇಲ್ಲ ಎಂದು ರಾಜ ಮಂಜು ಆಜ್ಞೆ ಮಾಡಿದ್ದಾರೆ. ಆದರೆ, ಅತ್ತ ಹನುಮಂತ ತಮ್ಮದೇ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ.
BBK 11: ಉಗ್ರಂ ಮಂಜು ಹೇಳಿಕೆಗೆ ಸಿಡಿದೆದ್ದ ಸುದೀಪ್: ಗೌತಮಿ-ಮಂಜು ಫ್ರೆಂಡ್ಶಿಪ್ ಕಟ್?