ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಧರ್ಮಾ ಕೀರ್ತಿರಾಜ್ ಅವರು ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಷನ್ನಲ್ಲಿ ಕಡಿಮೆ ವೋಟಿನಿಂದಾಗಿ ಧರ್ಮ ಅರ್ಧಕ್ಕೆ ಮನೆ ಬಿಡಬೇಕಾಯಿತು. ಇವರು ದೊಡ್ಮನೆಯಲ್ಲಿ ಒಟ್ಟು 55 ದಿನ ಇದ್ದರು. ಇದೀಗ ತಮ್ಮ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಧರ್ಮನಿಗೆ ಅದ್ಭುತವಾದ ಸ್ವಾಗತ ಸಿಕ್ಕಿದೆ. ಇವರ ತಂದೆ ಕೀರ್ತಿರಾಜ್ ಸ್ಪೆಷಲ್ ಆಗಿಯೆ ಮಗನನ್ನ ಸ್ವಾಗತ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಕೂಡ ಆಗುತ್ತಿದೆ.
ಬಿಗ್ ಬಾಸ್ನಿಂದ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರಿಂದ ಪ್ರೀತಿಯ ಸ್ವಾಗತ ಸಿಕ್ಕಿದೆ. ಅವರ ಹಿಂಭಾಗದಲ್ಲಿ ಬಲೂನ್ಗಳನ್ನು ಹಾಕಲಾಗಿದೆ. ಧರ್ಮ ಕೀರ್ತಿರಾಜ್ ತಂದೆ ಮಗನ ಆಟ ಹಾಗೂ ಸ್ವಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗನಿಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ. ಧರ್ಮ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ನಿನ್ನ ಮನೆಗೆ ಬಂದ ಅನುಭವ ಹೇಗಿದೆ ಎಂದು ಕೀರ್ತಿರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧರ್ಮ, ಬಿಗ್ ಬಾಸ್ ಜರ್ನಿ ತುಂಬಾ ಅದ್ಭುತವಾಗಿತ್ತು. 55 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದಿದ್ದು ಖುಷಿ ವಿಷ್ಯ. ಅಲ್ಲಿನ ಸ್ಪರ್ಧಿಗಳನ್ನು ಮಿಸ್ ಮಾಡ್ತಿದ್ದೇನೆ. ಬಿಗ್ ಬಾಸ್ ನಲ್ಲಿ ಇನ್ನೂ ಆಟವಿತ್ತು. ಹೊರಗೆ ಬಂದಿದ್ದು ಸ್ವಲ್ಪ ಬೇಸರವಾಗಿದೆ. ಅದ್ರ ಜೊತೆ ಮನೆಗೆ ಬಂದ ಖುಷಿ ಇದೆ. ಅಪ್ಪ, ಅಪ್ಪ, ಅಕ್ಕ- ಭಾವನನ್ನು ನೋಡಿದ ಸಂತೋಷವಿದೆ ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.
ಇನ್ನು ಕೀರ್ತಿರಾಜ್ ಮಾತನಾಡಿ, ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟವಾಡಿದ್ದು, ಎಲ್ಲರ ಮನಸ್ಸನ್ನು, ಹೃದಯವನ್ನು ಗೆದ್ದಿದ್ದೀರಿ. ನಿಮ್ಮನ್ನು ವಿನ್ನರ್ ಅಂತ ನಾವು ತಿಳಿದಿದ್ದೇವೆ. ಹೊರಬಂದಿದ್ದಕ್ಕೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ನೀವು ಲೂಸರ್ ಅಲ್ಲ. ನಾವೆಲ್ಲರೂ ನಿಮ್ಮನ್ನು ಪ್ರೀತಿ ಮಾಡ್ತೇವೆ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಮಗನಿಗೆ ಹರಸಿದ್ದಾರೆ.
ದೊಡ್ಮನೆಯಲ್ಲಿ ಇರಬೇಕು ಎಂದರೆ ರಫ್ ಆ್ಯಂಡ್ ಟಫ್ ಆಗಿರಬೇಕು. ಆದರೆ, ಧರ್ಮ ಅವರಲ್ಲಿ ಈ ಅಂಶ ಕೊಂಚ ಕಮ್ಮಿ ಇತ್ತು. ಅವರು ಸದಾ ಕೂಲ್ ಆಗಿಯೇ ಇರುತ್ತಿದ್ದರು. ಎಂಥದ್ದೇ ಪರಿಸ್ಥಿತಿ ಬಂದರೂ ಅವರು ಕಿತ್ತಾಟಕ್ಕೆ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇದೆಲ್ಲವೂ ಅವರ ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ. ಆದರೆ, ಇಂದು ಇದೇ ಅವರಿಗೆ ಮುಳುವಾಗಿ ಬಿಗ್ ಬಾಸ್ನಿಂದ ಹೊರಗೆ ಬರುವಂತೆ ಮಾಡಿದೆ.
BBK 11: ಬಿಗ್ ಬಾಸ್ ಸಾಮ್ರಾಜ್ಯದ ರಾಜನಿಗೇ ಕಾಟ ಕೊಟ್ಟ ಹನುಮಂತ: ಉಗ್ರಂ ಮಂಜು ಫುಲ್ ಸುಸ್ತು