ನವದೆಹಲಿ: ಕಳೆದ ಎರಡು ದಿನಗಳಿಂದ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜು ಮುಕ್ತಾಯವಾಗಿದ್ದು, ಎಲ್ಲಾ ತಂಡಗಳು ಬಹುತೇಕ ಭರ್ತಿಯಾಗಿವೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿನಲ್ಲಿ ತನಗೆ ಅಗತ್ಯವಿರುವ ಆಟಗಾರರನ್ನು ಖರೀದಿಸಿದೆ. ಆದರೆ, ಮೊದಲನೇ ದಿನ ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ಎಡವಿದ್ದ ಬೆಂಗಳೂರು ಫ್ರಾಂಚೈಸಿ, ಎರಡನೇ ದಿನದಲ್ಲಿ ಕೆಲ ಕೀ ಆಟಗಾರರ ಖರೀದಿ ಆರ್ಸಿಬಿ ಅಭಿಮಾನಿಗಳಲ್ಲಿ ಸ್ವಲ್ಪ ಸಮಾಧಾನವನ್ನು ತಂದಿದೆ.
ಮೆಗಾ ಹರಾಜಿನ ಮೊದಲನೇ ದಿನ ಬೆಂಗಳೂರು ಫ್ರಾಂಚೈಸಿ, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಾಶ್ ಹೇಝಲ್ವುಡ್, ಜಿತೇಶ್ ಶರ್ಮಾ, ರಾಸಿಖ್ ದಾರ್, ಸುಯಸ್ ಶರ್ಮಾ ಅವರನ್ನು ಖರೀದಿಸಿತ್ತು. ಆದರೆ, ಎರಡನೇ ದಿನವಾದ ಸೋಮವಾರ ಆಲ್ರೌಂಡರ್ ಕೃಣಾಲ್ ಪಾಂಡ್ಯ, ಹಿರಿಯ ವೇಗಿ ಭುವನೇಶ್ವರ್ ಕುಮಾರ್, ಆಲ್ರೌಂಡರ್ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ದೇವದತ್ ಪಡಿಕ್ಕಲ್, ಲುಂಗಿ ಎನ್ಗಿಡಿ ಸೇರಿದಂತೆ ಒಟ್ಟು 13 ಆಟಗಾರರನ್ನು ಖರೀದಿಸಿತು. ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿಯು 80.65 ಕೋಟಿ ರೂ. ಗಳನ್ನು ಖರ್ಚು ಮಾಡಿ ಒಟ್ಟು 9 ಆಟಗಾರರನ್ನು ಖರೀದಿಸಿತು. ಇನ್ನು ಆರ್ಸಿಬಿ ಖಾತೆಯಲ್ಲಿ ಕೇವಲ 75ಲಕ್ಷ ರೂ. ಗಳು ಮಾತ್ರ ಉಳಿದಿದೆ.
IPL 2025 Mega Auction: ಆರ್ಸಿಬಿಗೆ ಎಂಟ್ರಿ ಕೊಟ್ಟ ಸ್ಪೋಟಕ ಓಪನರ್ ಫಿಲ್ ಸಾಲ್ಟ್!
ಎರಡನೇ ದಿನವಾದ ಸೋಮವಾರ ಬೆಂಗಳೂರು ಫ್ರಾಂಚೈಸಿಯು 30.65 ಕೋಟಿ ರೂ. ಗಳ ಮೂಲಕ ಮೆಗಾ ಹರಾಜಿನ ಕಣಕ್ಕೆ ಇಳಿದಿತ್ತು. ಎರಡನೇ ದಿನ ಕೃಣಾಲ್ ಪಾಂಡ್ಯ ಮೂಲಕ ಮೊದಲನೇ ಆಟಗಾರನಿಗೆ ಆರ್ಸಿಬಿ 5.75 ಕೋಟಿ ರೂ. ಗಳನ್ನು ನೀಡಿತು. ನಂತರ ಹಿರಿಯ ವೇಗಿ ಭುವನೇಶ್ವರ್ ಕುಮಾರ್ಗೆ 10.75 ಕೋಟಿ ರೂ. ಗಳನ್ನು ನೀಡಿತು. ಇದಕ್ಕೂ ಮುನ್ನ ಮೊದಲನೇ ದಿನ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ಗೆ 8.75 ಕೋಟಿ ರೂ. ಗಳನ್ನು ನೀಡಿ ಮೊದಲ ಖರೀದಿ ಮಾಡಿತ್ತು. ನಂತರ, ಫಿಲ್ ಸಾಲ್ಟ್ 11.50 ಕೋಟಿ ರೂ. , ಜಿತೇಶ್ ಶರ್ಮಾ 11 ಕೋಟಿ ರೂ., ಜಾಶ್ ಹೇಝಲ್ವುಡ್ಗೆ 12.5 ಕೋಟಿ ರೂ. ಗಳನ್ನು ನೀಡಿತ್ತು.
IPL 2025 Mega Auction: ಆರ್ಸಿಬಿ ಸೇರಿದ ಲಿವಿಂಗ್ಸ್ಟೋನ್, ಗುಜರಾತ್ಗೆ ಸಿರಾಜ್!
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದ ಆಟಗಾರರ ವಿವರ
- ಲಿಯಾಮ್ ಲಿವಿಂಗ್ಸ್ಟೋನ್: 8.75 ಕೋಟಿ ರೂ
- ಫಿಲ್ ಸಾಲ್ಟ್ -11.50 ಕೋಟಿ ರೂ
- ಜಿತೇಶ್ ಶರ್ಮಾ – 11 ಕೋಟಿ ರೂ
- ಜಾಶ್ ಹೇಝಲ್ವುಡ್ – 12.5 ಕೋಟಿ ರೂ
- ರಾಸಿಖ್ ದರ್-6 ಕೋಟಿ ರೂ
- ಸುಯಶ್ ಶರ್ಮಾ-2.6 ಕೋಟಿ ರೂ
- ಕೃಣಾಲ್ ಪಾಂಡ್ಯ -5.75 ಕೋಟಿ ರೂ
- ಭುವನೇಶ್ವರ್ ಕುಮಾರ್-10.75 ಕೋಟಿ ರೂ
- ಸ್ವಪ್ನಿಲ್ ಸಿಂಗ್ – 50 ಲಕ್ಷ ರೂ
- ಟಿಮ್ ಡೇವಿಡ್ – 3 ಕೋಟಿ ರೂ
- ರೊಮಾರಿಯೊ ಶೆಫರ್ಡ್ – 1.5 ಕೋಟಿ ರೂ
- ನುವಾನ್ ತುಷಾರ – 1.6 ಕೋಟಿ ರೂ
- ಮನೋಜ್ ಭಾಂಡಗೆ – 30 ಲಕ್ಷ ರೂ
- ಜಾಕೋಬ್ ಬೆಥೆಲ್ – 2.6 ಕೋಟಿ ರೂ
- ದೇವದತ್ ಪಡಿಕ್ಕಲ್ – 2 ಕೋಟಿ ರೂ
- ಸ್ವಸ್ತಿಕ್ ಚಿಕಾರ – 30 ಲಕ್ಷ ರೂ
- ಲುಂಗಿ ಎನ್ಗಿಡಿ – 1 ಕೋಟಿ ರೂ
- ಅಭಿನಂದನ್ ಸಿಂಗ್ – 30 ಲಕ್ಷ ರೂ
- ಮೋಹಿತ್ ರಾಥಿ – 30 ಲಕ್ಷ ರೂ
ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ (21 ಕೋಟಿ ರೂ.), ರಜತ್ ಪಾಟಿದಾರ್ (ರೂ. 11 ಕೋಟಿ ರೂ), ಯಶ್ ದಯಾಳ್ (ರೂ. 5 ಕೋಟಿ ರೂ)