ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂಬತ್ತನೆ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 13 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಧರ್ಮಾ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದರು. ಚೈತ್ರಾ ಕುಂದಾಪುರ ಹಾಗೂ ಧರ್ಮಾ ಕೊನೆಯದಾಗಿ ಡೇಂಜರ್ ಝೋನ್ಗೆ ಬಂದಿದ್ದರು. ಇದರಲ್ಲಿ ಧರ್ಮಾ ಎಲಿಮಿನೇಟ್ ಎಂದು ಸುದೀಪ್ ಘೋಷಣೆ ಮಾಡಿದರು.
ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್ ಹಾಗೂ ಹನುಮಂತ ಲಮಾಣಿ ನಾಮಿನೇಟ್ ಆಗಿದ್ದರು. ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ..
ಇದರಲ್ಲಿ ಮೊದಲ ಹೆಸರು ತ್ರಿವಿಕ್ರಮ್ ಇರುವುದು ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಕಳೆದ ವೀಕೆಂಡ್ನಲ್ಲಿ ಕೂಡ ಇವರಿಗೆ ಗಾದೆ ಸರಿಹೊಂದುವ ಚಟುವಟಿಯಲ್ಲಿ ಎಲ್ಲ ಮಹಿಳೆಯರು ಇವರಿಗೆ ನೆಗಟಿವ್ ಕೊಟ್ಟಿದ್ದರು. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ರಜತ್ ಕೂಡ ನಾಮಿನೇಟ್ ಆಗಬಹುದು.
ಕಳೆದ ವಾರ ರಜತ್ ಆಡಿದ ಮಾತು ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಟಾಸ್ಕ್ನಲ್ಲಿ ಬಲಿಷ್ಠ ಇರುವ ಕಾರಣ ಇವರನ್ನು ನಾಮಿನೇಟ್ ಮಾಡಬಹುದು. ಇವರ ಜೊತೆಗೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಇವರ ಹೆಸರು ತೆಗೆದುಕೊಳ್ಳಬಹುದು.
ಉಳಿದಂತೆ ಶಿಶಿರ್ ಶಾಸ್ತ್ರೀ ಕಳೆದ ವಾರ ಮನೆಯಲ್ಲಿ ಅಷ್ಟೊಂದು ಕಾಣಿಸಿಕೊಂಡಿಲ್ಲ. ಹೀಗಾಗಿ ಇವರು ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಧನರಾಜ್ ಆಚಾರ್ ಹಾಗೂ ಹನುಮಂತ ಜೋಡಿ ಮನೆಗೆ ಇಷ್ಟವಾಗುತ್ತಿದೆ. ಇವರು ಸೇಫ್ ಆಗಬಹುದು, ಹಾಗೆಯೆ ಕಳೆದ ವಾರ ಅದ್ಭುತ ಆಟವಾಡಿದ ಮೋಕ್ಷಿತಾ ಪೈಗೆ ಉತ್ತಮ ಬಂದಿತ್ತು. ಇವರು ಕೂಡ ಈ ವಾರ ನಾಮಿನೇಷನ್ನಿಂದ ಸೇಫ್ ಆಗಬಹುದು. ಆದರೆ, ಕ್ಯಾಪ್ಟನ್ ಮಂಜು ಅವರಿಗೆ ನೇರ ನಾಮಿನೇಷನ್ ಅಧಿಕಾರ ಇರುವ ಕಾರಣ ಇವರು ಯಾರನ್ನು ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.
BBK 11: ಬಿಗ್ ಬಾಸ್ನಿಂದ ಹೊರಬಂದ ಹೃದಯವಂತ ಧರ್ಮನಿಗೆ ಸಿಕ್ಕಿತು ಅದ್ಧೂರಿ ಸ್ವಾಗತ: ನೀವೇ ನೋಡಿ