Tuesday, 26th November 2024

Constitutional Day : ಸಂಸತ್‌ನಲ್ಲಿ 75ನೇ ವರ್ಷದ ಸಂವಿಧಾನ ದಿನಾಚರಣೆ; ಸಂಸ್ಕೃತ ಭಾಷೆಯಲ್ಲಿ ಸಂವಿಧಾನ ಪ್ರತಿ ರಿಲೀಸ್‌ ಮಾಡಿದ ರಾಷ್ಟ್ರಪತಿ

Constitutional Day

ನವದೆಹಲಿ : ಭಾರತೀಯ ಸಂವಿಧಾನದ 75 ವರ್ಷಗಳನ್ನು ಪೂರೈಸಿದ ಅಂಗವಾಗಿ ವರ್ಷಪೂರ್ತಿ ಸಂವಿಧಾನ ದಿನಾಚರಣೆಯನ್ನು (Constitutional Day) ಆಚರಿಸಲು “ಹಮಾರಾ ಸಂವಿಧಾನ್, ಹಮಾರಾ ಸ್ವಾಭಿಮಾನ್” (ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ ) ಎಂಬ ಬರಹದ ಅಡಿಯಲ್ಲಿ ಮಂಗಳವಾರ ಸಂಸತ್ತಿನಲ್ಲಿ ಚಾಲನೆ ನೀಡಲಾಗಿದೆ ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು (President Droupadi Murmu ) ಸಂಸ್ಕೃತದಲ್ಲಿ ಸಂವಿಧಾನದ ಮೊದಲ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಹಮಾರಾ ಸಂವಿಧಾನ್, ಹಮಾರಾ ಸ್ವಾಭಿಮಾನ್ ಎಂಬ ಅಭಿಯಾನವನ್ನು ಸಂವಿಧಾನದ ರಚನಾಕಾರರ ಕೊಡುಗೆಗಳನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶುರು ಮಾಡಿದೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉಪಾಧ್ಯಕ್ಷ ಜಗದೀಪ್ ಧನ್‌ಖರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, (Narendra Modi) ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಉಭಯ ಸದನಗಳ ಸದಸ್ಯರು ಉಪಸ್ಥಿತರಿದ್ದರು. ಗಣ್ಯರು ಸಂವಿಧಾನದ ಮುನ್ನಡಿ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಹಳೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಅವರನ್ನು ನೆನಪಿಸಿಕೊಂಡರು. ಇಂದು ನಾವು ಐತಿಹಾಸಿಕ ಕ್ಷಣದ ಭಾಗವಾಗಿದ್ದೇವೆ. 75 ವರ್ಷಗಳ ಹಿಂದೆ ಇಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು ಸಂವಿಧಾನ ರಚನೆ ಮಾಡಿದವರಿಗೆ ನಾವು ಆಭಾರಿಯಾಗಿರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಭಾರತದ ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ರಾಷ್ಟ್ರಪತಿ

ಸರ್ಕಾರವು ಸಮಾಜದ ಎಲ್ಲಾ ವರ್ಗದವರಿಗೆ ಅವಕಾಶಗಳನ್ನು ನೀಡಿದೆ. ವಿಶೇಷವಾಗಿ ದುರ್ಬಲ ವರ್ಗಗಳು, ಬಡವರು ಶಾಶ್ವತ ಮನೆಗಳನ್ನು ಪಡೆಯುತ್ತಿದ್ದಾರೆ, ವಿದ್ಯುತ್ ಸೌಲಭ್ಯಗಳನ್ನು ಒದಗಿಸುತ್ತಿದೆ. ಎಲ್ಲಾ ಸಮುದಾಯಗಳು ಮೂಲಭೂತ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ಸಂವಿಧಾನದ ಆಶಯ ಪೂರ್ಣಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಭಾರತೀಯ ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದ್ದು, ಅದರ ಮೂಲಕ ದೇಶವು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದೆ ಎಂದು ಅವರು ಹೇಳಿದರು.

ನಮ್ಮ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ್ದೇವೆ. “ಮಹಿಳಾ ಮೀಸಲಾತಿಯ ಕಾನೂನು ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಸಬಲೀಕರಣದ ಹೊಸ ಯುಗವನ್ನು ಪ್ರಾರಂಭಿಸಿದೆ ಎಂದು ಮುರ್ಮು ಹೇಳಿದರು.

ಇದನ್ನೂ ಓದಿ : Droupadi Murmu : ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಬೇಸ್‌ಕ್ಯಾಂಪ್‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು