ಬೆಂಗಳೂರು: ಈ ಬಾರಿಯ ಐಪಿಎಲ್ ಮೆಗಾ ಹಾರಾಜಿನಲ್ಲಿ ಕರ್ನಾಟಕದ ಪಟ್ಟು 27 ಕ್ರಿಕೆಟಿಗರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಈ ಪೈಕಿ ಖರೀದಿಯಾದದ್ದು ಕೇವಲ 13 ಮಂದಿ ಮಾತ್ರ. ಉಳಿದ 14 ಮಂದಿ ನಿರಾಸೆ ಮೂಡಿಸಿದರು. ಅದರಲ್ಲೂ ಅಚ್ಚರಿಗೆ ಕಾರಣವಾದದ್ದು ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅನ್ಸೋಲ್ಡ್ ಆಗಿರುವುದು.
ಖರೀದಿಯಾದ ಆಟಗಾರರು
ಆಟಗಾರ | ತಂಡ | ಪಡೆದ ಮೊತ್ತ |
ಕೆ.ಎಲ್ ರಾಹುಲ್ | ಡೆಲ್ಲಿ ಕ್ಯಾಪಿಟಲ್ಸ್ | 14 ಕೋಟಿ |
ಪ್ರಸಿದ್ಧ್ ಕೃಷ್ಣ | ಗುಜರಾತ್ ಟೈಟಾನ್ಸ್ | 9.5 ಕೋಟಿ |
ಅಭಿನವ್ ಮನೋಹರ್ | ಹೈದರಾಬಾದ್ | 3.2 ಕೋಟಿ |
ವೈಶಾಕ್ ವಿಜಯ್ ಕುಮಾರ್ | ಪಂಜಾಬ್ ಕಿಂಗ್ಸ್ | 1.8 ಕೋಟಿ |
ಮನೋಜ್ ಭಾಂಡಗೆ | ಆರ್ಸಿಬಿ | 30 ಲಕ್ಷ |
ದೇವದತ್ತ ಪಡಿಕ್ಕಲ್ | ಆರ್ಸಿಬಿ | 2 ಕೋಟಿ |
ಮನೀಷ್ ಪಾಂಡೆ | ಕೆಕೆಆರ್ | 75 ಲಕ್ಷ |
ಕೆ.ಎಲ್ ಶ್ರೀಜೇಶ್ | ಮುಂಬೈ ಇಂಡಿಯನ್ಸ್ | 30 ಲಕ್ಷ |
ಶ್ರೇಯಸ್ ಗೋಪಾಲ್ | ಚೆನ್ನೈ ಸೂಪರ್ ಕಿಂಗ್ಸ್ | 30 ಲಕ್ಷ |
ಪ್ರವೀಣ್ ದುಬೆ | ಪಂಜಾಬ್ ಕಿಂಗ್ಸ್ | 30 ಲಕ್ಷ |
ಲವನೀತ್ | ಕೆಕೆಆರ್ | 30 ಲಕ್ಷ |
ಮನ್ವಂತ್ ಕುಮಾರ್ | ಡೆಲ್ಲಿ | 30 ಲಕ್ಷ |
ಕರುಣ್ ನಾಯರ್ | ಡೆಲ್ಲಿ | 50 ಲಕ್ಷ |
ಅನ್ಸೋಲ್ಡ್ ಆದ ಆಟಗಾರರು
ಮಯಾಂಕ್ ಅಗರ್ವಾಲ್, ಎಲ್. ಆರ್ ಚೇತನ್, ಸ್ಮರಣ್ ಆರ್, ಬಿ.ಆರ್ ಶರತ್, ಕೆ ಗೌತಮ್, ಹಾರ್ದಿಕ್ ರಾಜ್, ಶುಭಾಂಗ ಹೆಗಡೆ, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ದೀಪಕ್ ದೇವಾಡಿಗ, ವಿದ್ಯಾಧರ ಪಾಟೀಲ, ಸಮರ್ಥ ನಾಗರಾಜ್.
ಇದನ್ನೂ ಓದಿ IPL 2025: ವಿರಾಟ್ ಕೊಹ್ಲಿಗೆ ನಾಯಕತ್ವ?, ಆರ್ಸಿಬಿಯ ಬಲಿಷ್ಠ ಪ್ಲೇಯಿಂಗ್ XI ಹೀಗಿದೆ!
ಅನ್ಸೋಲ್ಡ್ ಆದರೂ ಇನ್ನೂ ಇದೆ ಅವಕಾಶ
ಅನ್ಸೋಲ್ಡ್ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್ಸೋಲ್ಡ್ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ.