ಕೆಲವೊಂದು ಮದುವೆ ಆಚರಣೆಯಲ್ಲಿ ಹಣದ ನೋಟುಗಳನ್ನು ಒಟ್ಟು ಸೇರಿಸಿ ಹಾರ ಮಾಡಿ ವರನ ಕುತ್ತಿಗೆಗೆ ಹಾಕುತ್ತಾರೆ. ಇಂತಹ ನಗದು ಹಾರದಿಂದ ಉತ್ತರ ಪ್ರದೇಶದ ಮೀರತ್ನಲ್ಲಿ ಒಂದು ಅವಾಂತರವಾಗಿದೆ. ನಗದು ಹಾರದಿಂದ ಕಳ್ಳನೊಬ್ಬ ನೋಟುಗಳನ್ನು ಕದ್ದಿದ್ದಾನೆ. ನಂತರ ವರನು ಕಳ್ಳನ ಬೆನ್ನಟ್ಟಿ ಆತನಿಗೆ ಹೊಡೆದಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವರನು ನಗದು ಹಾರವನ್ನು ಧರಿಸಿ ಕುದುರೆ ಸವಾರಿ ಮಾಡುತ್ತಾ ಮದುವೆಯ ಸ್ಥಳಕ್ಕೆ ಬರುತ್ತಿದ್ದಾಗ ಮಾರ್ಗಮಧ್ಯದಲ್ಲಿ ಕಳ್ಳನೊಬ್ಬ ಹಾರದಿಂದ ನೋಟುಗಳನ್ನು ಎಗರಿಸಿದ್ದಾನೆ. ಇದು ಮದುವೆ ಮೆರವಣಿಗೆಯಲ್ಲಿ ಗೊಂದಲಕ್ಕೆ ಕಾರಣವಾಯಿತು. ಇದರಿಂದ ಕೋಪಗೊಂಡ ವರನು ಕಳ್ಳನನ್ನು ಬೆನ್ನಟ್ಟಲು ತನ್ನ ಕುದುರೆಯಿಂದ ಕೆಳಗಿಳಿದ್ದಾನಂತೆ. ಕದ್ದ ವ್ಯಕ್ತಿ ಮಿನಿ ಟ್ರಕ್ ಡ್ರೈವರ್ ಆದ ಕಾರಣ ವರನು ಆತನ ಟ್ರಕ್ ಅನ್ನು ಹತ್ತಿ ಕಳ್ಳನನ್ನು ಟ್ರಕ್ನಿಂದ ಕೆಳಗಿಳಿಸಿ ಚೆನ್ನಾಗಿ ಹೊಡೆದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#मेरठ में दुल्हा घुड़चढ़ी पर था. उसकी नोटों की माला से एक चोर नोट खींचकर भागा
— Narendra Pratap (@hindipatrakar) November 24, 2024
शादी की रस्में छोड़कर दुल्हा चोर के पीछे भागा. चोर ने लोडर स्टार्ट किया और निकलने लगा. दौड़ते लोडर में खिड़की से दूल्हे ने एंट्री मारी तो चोर लोडर छोड़ भागने लगा
दूल्हे ने चोर पकड़ा और जमकर धुनाई की pic.twitter.com/7liYToncMP
ದಾರಿಹೋಕರೊಬ್ಬರು ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. “ನಮಸ್ತೆ ಮೀರತ್” ಎಂದು ಶೀರ್ಷಿಕೆ ಬರೆದ ಈ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಒಪ್ಪೊತ್ತಿನ ಊಟಕ್ಕಾಗಿ ಇಟ್ಟಿಗೆ ಹೊತ್ತು, ನೀಟ್ ಪರೀಕ್ಷೆ ಪಾಸ್ ಮಾಡಿದ ಯುವಕ… ಈತನ ಸಾಧನೆಗೆ ಬಹುಪರಾಕ್ ಎಂದ ಜನ!
ಟ್ರಕ್ ಸ್ಥಳೀಯ ಸಾರಿಗೆ ಕಂಪನಿಗೆ ಸೇರಿದ್ದು, ಅದರ ಮಾಲೀಕ ಮನೀಶ್ ಸೆಹಗಲ್ ಈ ಘಟನೆಯ ಬಗ್ಗೆ ವಿಚಿತ್ರ ಹೇಳಿಕೆ ಹಂಚಿಕೊಂಡಿದ್ದಾರೆ. ಸೆಹಗಲ್ ಅವರ ಪ್ರಕಾರ, ಅವರ ಚಾಲಕ ಜಗಪಾಲ್ ಅವರಿಗೆ ನೋಟಿನ ವಿಚಾರದ ಬಗ್ಗೆ ತಿಳಿದಿರಲಿಲ್ಲ. ಆದ್ರೆ ರಸ್ತೆಯಲ್ಲಿ ಟ್ರಕ್ ವರನಿಗೆ ತಗುಲಿದ ಕಾರಣ ವರ ಬೆನ್ನಟ್ಟಿ ಆತನಿಗೆ ಹೊಡೆದಿದ್ದಾನೆ ಎಂದು ಅವರು ಹೇಳಿದ್ದಾರೆ.ಚಾಲಕನಿಗೆ ಹಾಗೂ ಈ ಘಟನೆಗೆ ಯಾವುದೇ ಸಂಬಂಧವಿಲ್ಲದಿದ್ದರೂ ವರ ಮತ್ತು ಅತನ ಕಡೆಯವರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸೆಹಗಲ್ ಆರೋಪಿಸಿದ್ದಾರೆ. “ನಾವು ಘಟನೆಯನ್ನು ಪೊಲೀಸರಿಗೆ ವರದಿ ಮಾಡಿದ್ದೇವೆ ಮತ್ತು ವರ ಹಾಗೂ ವರನ ಕಡೆಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಯೋಜಿಸಿದ್ದೇವೆ” ಎಂದು ಸೆಹಗಲ್ ಹೇಳಿದ್ದಾರೆ.