Tuesday, 26th November 2024

BBK 11: ಬಿಗ್ ಬಾಸ್ ಸಾಮ್ರಾಜ್ಯ ಅಲ್ಲೋಲ-ಕಲ್ಲೋಲ: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್

BBK 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ದೊಡ್ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದು, ಉಗ್ರಂ ಮಂಜು ರಾಜನಾಗಿ ಮೆರೆಯುತ್ತಿದ್ದಾರೆ. ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ ಭರ್ಜರಿ ಆಗಿ ನಡೆಯುತ್ತಿದೆ. ಇವರ ಆರ್ಭಟಕ್ಕೆ ಮನೆಮಂದಿ ಕಂಗಾಲಾಗಿದ್ದಾರೆ. ಇದರ ನಡುವೆ ನಾಮಿನೇಷನ್ ಕೂಡ ಪ್ರಕ್ರಿಯೆ ನಡೆಯುತ್ತಿದೆ.

ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಹಿಂದೆ ಆಡಿದ ಮಾತುಗಳೆಲ್ಲ ಒಂದೊಂದಾಗಿ ಹೊರಬಂದಿದೆ. ಬಿಲ್ಲು-ಬಾಣ ಕಲೆಗಾರಿಕೆ ಮೂಲಕ ನಾಮಿನೇಟ್ ಮಾಡಲು ಬಿಗ್​ಬಾಸ್ ಸೂಚಿಸಿದ್ದಾರೆ. ನಾಮಿನೇಟ್ ಮಾಡುವ ಸದಸ್ಯರು, ಎದುರಾಳಿಯ ಸ್ಪರ್ಧಿಯ ಭಾವಚಿತ್ರವನ್ನು ಬಾಣಕ್ಕೆ ಚುಚ್ಚಿಕೊಳ್ಳಬೇಕು. ನಂತರ ಅದನ್ನು ಮನೆಯ ಮುಖ್ಯದ್ವಾರಕ್ಕೆ ಹೊಡೆಯಬೇಕು. ಅದು ಮನೆಯ ದ್ವಾರವನ್ನು ಛೇದಿಸಿಕೊಂಡು ಹೋಗಬೇಕಾಗಿರುತ್ತದೆ.

ಈ ನಾಮಿನೇಷನ್ ಪ್ರಕ್ರಿಯೆ ವೇಳೆ ತ್ರಿವಿಕ್ರಮ್​​ ಹೆಸರು ತೆಗೆದುಕೊಂಡ ಮೋಕ್ಷಿತಾ, ಮಂಜಣ್ಣ ಬಿಲ್ಡ್​ ಅಪ್​​ ಕೊಡ್ತಾನೆ ಬಿಟ್ರೆ ಆಚೆ ಅವನೇನೂ ಅಲ್ಲಾ ಎಂದು ತ್ರಿವಿಕ್ರಮ್​ ಹಿಂದೆಯಿಂದ ಮಾತಾಡ್ತಾರೆ ಅಂತಾ ತಮ್ಮ ಕಾರಣ ಒದಗಿಸಿದ್ದಾರೆ. ಅದಕ್ಕೆ ಮಂಜು, ಇದು ನಿಜಕ್ಕೂ ನಂಬಿಕೆ ದ್ರೋಹವೇ ಆಗಿದೆ. ಇದು ಸರಿ ಅಲ್ವೇ ಅಲ್ಲ. ತ್ರಿವಿಕ್ರಮ್ ಮಾಡಿರೋದು ತಪ್ಪು ಅನ್ನೋದನ್ನ ಸಿಟ್ಟಿನಿಂದಲೇ ಹೇಳಿದ್ದಾರೆ.

ನಂತರ, ತ್ರಿವಿಕ್ರಮ್​​ ಅವರ ಸರದಿ ಬಂದಾಗ ಮೋಕ್ಷಿತಾ ಅವರ ಹೆಸರನ್ನು ಎಲಿಮಿನೇಷನ್​ಗೆ ನಾಮಿನೇಟ್​​ ಮಾಡಿದ್ದಾರೆ. ನಾನು ಮ್ಯಾನಿಪುಲೇಟ್​ ಮಾಡ್ತಾರೆ ಅಂತಾರೆ. ಆದ್ರೆ ನಿಜವಾಗಿಯೂ ಮ್ಯಾನುಪುಲೇಟ್​​ ಮಾಡುವವರು ಮೋಕ್ಷಿತಾ. ಗೌತಮಿ ಅವರು ನಾವಂದುಕೊಂಡಷ್ಟು ಪಾಸಿಟಿವಿಟಿ ಏನಿಲ್ಲ, ಅದು ಇದು ಅಂತಾ ಅವ್ರು ಹಿಂದಿನಿಂದ ಮಾತಾಡ್ತಾರೆ. ನನ್ನ ಗೋಮುಖ ವ್ಯಾಘ್ರ ಅಂತಾರೆ, ಆದ್ರೆ ಇವರು ಎರಡು ತಲೆ ನಾಗರಹಾವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮೋಕ್ಷಿತಾ ಪೈ ಬೆನ್ನ ಹಿಂದೆ ಆಡಿದ ಮಾತುಗಳನ್ನ ಕೇಳಿದ ಗೌತಮಿ ಜಾದವ್ ಸಿಟ್ಟಾಗಿದ್ದಾರೆ. ಪಾಸಿಟಿವಿಟಿ ಅನ್ನೋದು ಬೇರೆಯವರಿಗೆ ತೋರಿಸೋಕೆ ಅಲ್ವೇ ಅಲ್ಲ. ಅದು ನನಗಾಗಿಯೇ ಇರೋದು ಅಂತಲೇ ಗೌತಮಿ ಜಾದವ್ ರೊಚ್ಚಿಗೆದ್ದಿದ್ದಾರೆ. ಒಟ್ಟಾರೆ ಉಗ್ರಂ ಮಂಜು ಸಾಮ್ರಾಜ್ಯದಲ್ಲಿ ಪ್ರಜೆಗಳು ಪರಸ್ಪರ ದೂರುತ್ತಿದ್ದಾರೆ. ಈ ದೂರುಗಳ ಮಧ್ಯೆನೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎಂಬುದು ನೋಡಬೇಕಿದೆ.

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?