ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ವಧು ಹುಡುಕುವುದು ಬಹಳ ಕಷ್ಟದ ಕೆಲಸವಾಗಿದೆ. ಹುಡುಗಿಯರಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಸಿಕ್ಕಾಪಟ್ಟೆ ಷರತ್ತುಗಳನ್ನೇ ವಿಧಿಸುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ ಪತ್ರಿಕೆಯಲ್ಲಿ ಕಂಡುಬಂದ ಮದುವೆಯ ಬಗೆಗಿನ ಜಾಹೀರಾತೊಂದು ಎಲ್ಲರ ಗಮನ ಸೆಳೆದಿದೆಯಂತೆ. ಈ ಜಾಹೀರಾತು ಪೋಸ್ಟ್ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
ಇತ್ತೀಚೆಗೆ, ಪತ್ರಿಕೆಯೊಂದರಲ್ಲಿ, 20 ಎಕರೆ ತೋಟದ ಮನೆ ಹೊಂದಿರುವ ಸುಂದರವಾದ ಹುಡುಗನನ್ನು ಹುಡುಕುವ ವಿಚಿತ್ರವಾದ ಮದುವೆಯ ಜಾಹೀರಾತೊಂದು ಕಂಡುಬಂದಿದೆ. ಅದನ್ನು ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಯುವತಿಯೊಬ್ಬರಿಗೆ ಮದುವೆಯಾಗಲು 25-28 ವರ್ಷ ವಯಸ್ಸಿನ ಸುಂದರವಾದ ಯುವಕ ಬೇಕಾಗಿದ್ದಾನಂತೆ. ಜೊತೆಗೆ ಆಸ್ತಿಪಾಸ್ತಿ ಹೊಂದಿರಬೇಕು ಹಾಗೇ ಅಡುಗೆ ಮಾಡುವುದಕ್ಕೂ ತಿಳಿದಿರಬೇಕು ಎಂದು ಇದರಲ್ಲಿ ತಿಳಿಸಲಾಗಿದೆಯಂತೆ.
30-year-old feminist woman, working against capitalism requires a 25-year-old wealthy boy with a well-established business.
— Rishi Bagree (@rishibagree) November 24, 2024
Koi Ho tou batana 😀 pic.twitter.com/7YVPnmMMfT
30 ವರ್ಷದ ಯುವತಿಗೆ ಲಾಭದಾಯಕ ವ್ಯವಹಾರವನ್ನು ಹೊಂದಿರುವ 25 ವರ್ಷದ ಶ್ರೀಮಂತ ಯುವಕ ಬೇಕಾಗಿದೆಯಂತೆ” ಎಂದು ಜಾಹೀರಾತಿನ ಸ್ಕ್ರೀನ್‌ಶಾರ್ಟ್‌ನೊಂದಿಗೆ ಟ್ವೀಟ್‍ಗೆ ಶೀರ್ಷಿಕೆ ಬರೆಯಲಾಗಿದೆ. ಈ ಜಾಹೀರಾತು ಸೋಶಿಯಲ್ ಮೀಡಿಯಾದ ನೆಟ್ಟಿಗರಲ್ಲಿ ಕೆಲವರಿಗೆ ತಮಾಷೆಯಾಗಿ ಕಂಡರೆ ಇನ್ನ್ನೂ ಕೆಲವರು ಈ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ:ರೀಲ್ಸ್ ಕ್ರೇಜ್… ಆಸ್ಪತ್ರೆಯ ಹೊರಗೆ ಎಮ್ಮೆ ಸವಾರಿ ಮಾಡಿದ ಯೂಟ್ಯೂಬರ್! ಮುಂದೆ ಆಗಿದ್ದೇನು? ವಿಡಿಯೊ ನೋಡಿ
ವರದಿ ಪ್ರಕಾರ, ಈ ಜಾಹೀರಾತನ್ನು 2021 ರಲ್ಲಿ ಪತ್ರಿಕೆಯಲ್ಲಿ ಪೋಸ್ಟ್ ಮಾಡಲಾಗಿತ್ತಂತೆ ಮತ್ತು ಈ ಪತ್ರಿಕೆ ಉತ್ತರ ಭಾರತದ ಹಲವಾರು ನಗರಗಳಲ್ಲಿ ಕಾಣಿಸಿಕೊಂಡಿದೆಯಂತೆ. ಬಳಕೆದಾರರೊಬ್ಬರು ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ಇದು ಮತ್ತೆ ವೈರಲ್ ಆಗಿದೆ.
ಇದೊಂದು ಪ್ರ್ಯಾಂಕ್ ಜಾಹೀರಾತು
ಈ ಜಾಹೀರಾತಿನ ಅಸಲಿಯತ್ತು ಇದೀಗ ಬಯಲಾಗಿದೆ. ಮಹಿಳೆಯ ಸಹೋದರ ಮತ್ತು ಸ್ನೇಹಿತ ಸೇರಿಕೊಂಡು ಈ ರೀತಿ ಸುಳ್ಳು ಜಾಹೀರಾತು ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಮಹಿಳೆ 30ನೇ ಹುಟ್ಟುಹಬ್ಬ ಆಚರಿಸಿಕೊಂಡರು ಇನ್ನೂ ಮದುವೆ ಆಗಿಲ್ಲ ಎಂದು ತಮಾಷೆ ಮಾಡಲು ತೋರಿಸಲು ಈ ರೀತಿ ಮಾಡಿದ್ದಾರಂತೆ. ಇನ್ನು ಮದುವೆಯ ಸಂದರ್ಭದಲ್ಲಿ ಪುರುಷರು ಮಹಿಳೆಯ ಬಗ್ಗೆ ಇಟ್ಟುಕೊಳ್ಳುವ ನಿರೀಕ್ಷೆಗಳನ್ನು ಮಹಿಳೆಯರೂ ವ್ಯಕ್ತಪಡಿಸಿದರೆ ಹೇಗಿರುತ್ತದೆ ಎಂಬುದನ್ನು ವಿಡಂಬನಾತ್ಮಕವಾಗಿ ತಿಳಿಸುವ ಪ್ರಯತ್ನ ಇದಂತೆ.