ಹೈದರಾಬಾದ್: ಪ್ಯಾಕ್ ಮಾಡಿರುವ ಆಹಾರ ಮತ್ತು ಪಾನೀಯಗಳಲ್ಲಿ ಸತ್ತ ಪ್ರಾಣಿಗಳ ದೇಹ ಕಂಡು ಬರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಈ ಘಟನೆಗಳಿಂದ ಗುಣಮಟ್ಟ ನಿಯಂತ್ರಣದ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಹಾರ ಪದಾರ್ಥಗಳಲ್ಲಿ ಮಾನವರು, ಪ್ರಾಣಿಗಳು ಅವಶೇಷಗಳು ಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.. ಕಳೆದ ಕೆಲವು ದಿನಗಳ ಹಿಂದೆ ಐಸ್ ಕ್ರೀಂನಲ್ಲಿ ಬೆರಳು ಕಂಡು ಬಂದರೆ ಇಂದು ಬಿರಿಯಾನಿಯಲ್ಲಿ ಸಿಗರೇಟ್ ತುಂಡುಗಳು ಕಾಣಿಸಿಕೊಂಡಿದೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Video).
ಹೋಟೆಲ್ನವರು ಬದಲಾಗುತ್ತಿಲ್ಲ. ಶುಚಿತ್ವ ಇಲ್ಲದ ಅಡುಗೆ ಮಾಡಿ ಬಡಿಸುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಆಹಾರ ಸೇವಿಸಿ ಜನ ಅಸ್ವಸ್ಥರಾಗುತ್ತಿರುವ ಘಟನೆಗಳು ದೇಶದಲ್ಲಿ ನಿತ್ಯ ನಡೆಯುತ್ತಿವೆ. ಕೆಲವೆಡೆ ಜೀವಹಾನಿಯಾಗುತ್ತಿದೆ. ಆದರೆ, ಹೋಟೆಲ್ ನಿರ್ವಾಹಕರು ತಮಗೇನೂ ನಷ್ಟವಿಲ್ಲ ಎಂಬಂತೆ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಸದ್ಯ ಬಿರಿಯಾನಿಯಲ್ಲಿ ಸಿಗರೇಟ್ ತುಂಡುಗಳು ಕಾಣಿಸಿಕೊಂಡಿದ್ದು, ಆರ್ಡರ್ ಮಾಡಿ ಫುಡ್ ತಿನ್ನುವವರನ್ನು ಚಿಂತಿಸುವಂತೆ ಮಾಡಿದೆ.
ತೆಲಂಗಾಣದ ಹೈದರಾಬಾದ್ನಲ್ಲಿ ಈ ಘಟನೆ ನಡೆದಿದ್ದು, ಆರ್ಟಿಸಿ ಕ್ರಾಸ್ ರಸ್ತೆಯಲ್ಲಿರುವ ಜನಪ್ರಿಯ ಬಾವರ್ಚಿ ರೆಸ್ಟೋರೆಂಟ್ನ ಬಿರಿಯಾನಿಯಲ್ಲಿ ಸಿಗರೇಟ್ ತುಂಡುಗಳು(Cigarette Biryani) ಸಿಕ್ಕಿದೆ. ಹೌದು ಹೈದರಾಬಾದ್ನಲ್ಲಿ (Hyderabad) ಬಿರಿಯಾನಿಗೆ ಹೆಸರಾದ ಬಾವರ್ಚಿ (Bawarchi chicken Biryani) ರೆಸ್ಟೋರೆಂಟ್ ಗೆಹತ್ತು ಜನರ ಯುವಕರ ಗುಂಪೊಂದು ಬಿರಿಯಾನಿ ತಿನ್ನಲು ಬಂದಿದ್ದು, ಆರ್ಡರ್ ನೀಡಿದ್ದಾರೆ. ಆದರೆ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಸಿಗರೇಟ್ ಕಾಣಿಸಿಕೊಂಡಿದ್ದು, ಬಿರಿಯಾನಿ ತಿನ್ನಲು ಪ್ರಾರಂಭಿಸಿದ ಆ ಯುವಕರ ಪೈಕಿ ಒರ್ವನ ತಟ್ಟೆಯ ಬಿರಿಯಾನಿಯಲ್ಲಿ ಸಿಗರೇಟ್ ತುಂಡು ಕಂಡು ಆಘಾತಕ್ಕೊಳಗಾಗಿದ್ದಾರೆ.
ಈ ಘಟನೆಗೆ ರೆಸ್ಟೊರೆಂಟ್ನ ಆಡಳಿತ ಮಂಡಳಿ ಗ್ರಾಹಕರಲ್ಲಿ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ. ಬಿರಿಯಾನಿಯಲ್ಲಿ ಸಿಗರೇಟ್ ತುಂಡು ನೋಡಿ ರೆಸ್ಟೋರೆಂಟ್ನಲ್ಲಿದ್ದ ಇತರ ಜನರು ಸಹ ಆಘಾತಕ್ಕೊಳಗಾಗಿದ್ದಾರೆ.
ಇನ್ನೂ ಈ ಹಿಂದೆ ಕೂಡ ಬಾವರ್ಚಿ ರೆಸ್ಟೋರೆಂಟ್ನಿಂದ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿತ್ತು. ತೆಲುಗು ಸ್ಕ್ರೈಬ್ ಎಂಬ ಟ್ವಿಟ್ಟರ್ ಪೇಜ್ ಫೋಟೋ ವೀಡಿಯೋ ಸಮೇತ ಈ ಪೋಸ್ಟ್ ಮಾಡಿದ್ದರು. . ಝೋಮ್ಯಾಟೋ ಮೂಲಕ ಈ ಚಿಕನ್ ಬಿರಿಯಾನಿ ಆರ್ಡರ್ (Chicken Biriyani) ಮಾಡಲಾಗಿತ್ತು. ಆಗಲ್ಲೂ ಹೊಟೇಲ್ ಸಿಬ್ಬಂದಿ ಇದಕ್ಕೆ ನಿರ್ಲಕ್ಷ್ಯದ ಉತ್ತರ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇನ್ನು ಬಾವರ್ಚಿ(Bawarchi Biriyani) ಹೈದರಾಬಾದ್ನ ನಗರದ ಜೀವನಾಡಿಯಾಗಿದ್ದು, ಬಹುತೇಕ ಹೈದರಾಬಾದಿಗರು ಹಾಗೂ ದೂರದಿಂದ ಮುತ್ತಿನನಗರಿಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಈ ಬಿರಿಯಾನಿಯ ರುಚಿ ನೋಡದೇ ಹೋಗುವುದು ತೀರಾ ವಿರಳ, ಹೀಗಿರುವಾಗ ಇಂತಹ ರೆಸ್ಟೋರೆಂಟ್ನಿಂದ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿದ್ದು, ಇದು ಬಾವರ್ಚಿ ಬಿರಿಯಾನಿ ಪ್ರಿಯರನ್ನು ಆತಂಕಕ್ಕೆ ಇಡುಮಾಡಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬಾವಾರ್ಚಿಯನ್ನು ಇನ್ನು ಮುಚ್ಚಿಲ್ವಾ ಇಲ್ಲಿ ಎಷ್ಟು ಸರಿ ಈ ರೀತಿ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅಯ್ಯೋ ದೇವರೆ ಈಗಷ್ಟೇ ಬಾವರ್ಚಿ ಬಿರಿಯಾನಿ ತಿಂದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 11: ಬಿಗ್ ಬಾಸ್ ಸಾಮ್ರಾಜ್ಯ ಅಲ್ಲೋಲ-ಕಲ್ಲೋಲ: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್