-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹುಡುಗ-ಹುಡುಗಿಯರ ಕ್ವಿರ್ಕ್ ಫ್ಯಾಷನ್‌ನ (Quirk Dress Fashion) ಕಿಕ್ ಇತ್ತೀಚೆಗೆ ಹೆಚ್ಚಾಗಿದೆ. ಈ ಟ್ರೆಂಡ್ ಯಂಗ್‌ಸ್ಟರ್ಸ್‌ಗಳನ್ನು ಮೋಡಿ ಮಾಡತೊಡಗಿದೆ. ಇದು ಪ್ರಯೋಗಾತ್ಮಕ ಡಿಸೈನರ್‌ವೇರ್. ಈ ಫ್ಯಾಷನ್‌ಗೆ ಅದರಲ್ಲೂ ಈ ಶೈಲಿಯ ಉಡುಗೆಗಳಿಗೆ ಪಕ್ಕಾ ಕಾನ್ಸೆಪ್ಟ್ ಇಲ್ಲ! ನೋಡಲು ತಕ್ಷಣಕ್ಕೆ ಡ್ರೆಸ್ ತುಂಬೆಲ್ಲಾ ಪ್ರಿಂಟ್ಸ್ ಅನಿಸಿದರೂ ಅದಲ್ಲ. ಇಲ್ಲಿ ಯೂನಿವರ್ಸಲ್ ಲೋಗೋ ಚಿತ್ರವಿರಬಹುದು. ಕುದುರೆ, ಮಿಕ್ಕಿ, ಮೌಸ್, ಟಾಮ್ ಮತ್ತು ಜೆರ್ರಿ, ಮರ, ಗಿಡ, ವಸ್ತು ಹೀಗೆ ಒಂದಲ್ಲ ನಾನಾ ಬಗೆಯ ಜೀವಗಳ ಚಿತ್ತಾರ ಕಾಣಬಹುದು. ಎಮೋಜಿಯಿರಬಹುದು, ಲಿಪ್‌ಸ್ಟಿಕ್ ಇರಬಹುದು ಇಲ್ಲವೇ, ಟೆಕ್ನಾಲಜಿ ಕುರಿತಂತ ಕಾರ್ಟೂನ್ ಉಡುಗೆ ಮೇಲೆ ಮೂಡಿರಬಹುದು. ಒಟ್ಟಾರೆ ನಕ್ಕು ನಲಿಸುವ, ಹುಬ್ಬೇರಿಸುವ, ಹ್ಯುಮರಸ್ ಆಗಿರುವ ಫನ್ನಿ ಚಿತ್ರಗಳನ್ನೊಳಗೊಂಡ ಔಟ್‌ಫಿಟ್‌ಗಳೇ ಈ ಕ್ವಿರ್ಕ್ ಫ್ಯಾಷನ್!
ಸ್ಟ್ರೀಟ್ ಫ್ಯಾಷನ್‌ನಲ್ಲಿದ್ದ ಕ್ವಿರ್ಕ್ ಫ್ಯಾಷನ್
ಮೊದಮೊದಲು ಇಂಟರ್‌ನ್ಯಾಷನಲ್ ರ‍್ಯಾಂಪ್ ಹಾಗೂ ಅಮೆರಿಕಾ, ಯುಕೆಯ ಸ್ಟ್ರೀಟ್ ಫ್ಯಾಷನ್‌ನಲ್ಲಿ ಕಾಮನ್ ಆಗಿದ್ದ ಈ ಫ್ಯಾಷನ್ ಇದೀಗ, ಬಾಲಿವುಡ್ ಸಿನಿಮಾ ನಟನಟಿಯರನ್ನು ಸೆಳೆದಿದೆ. ಫಂಕಿ ಫ್ಯಾಷನ್‌ನೊಳಗೆ ನುಸುಳಿದೆ. ಇದರೊಂದಿಗೆ ಫಂಕಿ ಲೈಫ್‌ಸ್ಟೈಲ್ ಬಯಸುವ ಹುಡುಗ-ಹುಡುಗಿಯರ ಬಿಂದಾಸ್ ಸ್ಟೈಲ್ ಸ್ಟೇಟ್ಮೆಂಟ್‌ನಲ್ಲಿಒಂದಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್ ಗೌಡ.
ಕ್ವಿರ್ಕ್ ಫ್ಯಾಷನ್ ಡ್ರೆಸ್ ಮಿಕ್ಸ್ ಮ್ಯಾಚ್
ಅಂದಹಾಗೆ, ಕ್ವಿರ್ಕ್ ಫ್ಯಾಷನ್ ಎಲ್ಲರಿಗೂ ಸೂಟ್ ಆಗದು. ಸೆಲೆಬ್ರಿಟಿಗಳ ಸ್ಟೈಲ್ ಸ್ಟೇಟ್ಮೆಂಟ್ ಆಗಿರುವ ಇದನ್ನು ಸಾಕಷ್ಟು ಹುಡುಗ-ಹುಡುಗಿಯರು ಅನುಕರಿಸಲು ಹೋಗಿ ನಗೆಪಾಟಲಿಗೀಡಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಇವುಗಳ ಪ್ರಯೋಗ ಮಾಡುವಾಗ ಸಾಮಾನ್ಯರು ಆದಷ್ಟು ಮಿಕ್ಸ್ ಮ್ಯಾಚ್ ಬಗ್ಗೆ ಗಮನ ನೀಡಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಧನ್ಯಾ.
ಯಾರಿಗೆ ಯಾವುದು?
ಕಂಪ್ಲೀಟ್ ಕ್ವಿರ್ಕ್ ಔಟ್‌ಫಿಟ್ ಧರಿಸುವುದಾದಲ್ಲಿ, ಟೀ ಶರ್ಟ್, ಕ್ರಾಪ್ ಟಾಪ್, ಫ್ರಾಕ್ ಇಲ್ಲವೇ ಸ್ಕರ್ಟ್ ಆಯ್ಕೆ ಮಾಡಿ. ಹುಡುಗರಾದರೇ ರೌಂಡ್ ಟೀ ಶರ್ಟ್, ಸ್ಲಿವ್ಲೆಸ್ ಬನ್ಯಾಯನ್ ಸ್ಟೈಲ್ ಟೀ ಶರ್ಟ್ಸ್ ಸಿಕ್ಸ್ ಪಾಕೆಟ್ಸ್ ಪ್ಯಾಂಟ್ಸ್, ಶಾರ್ಟ್ಸ್, ಬರ್ಮಡಾ ಇಲ್ಲವೇ ತ್ರೀ ಫೋರ್ತ್ ಲೆಂಥ್‌ನವನ್ನು ಸೆಲೆಕ್ಟ್ ಮಾಡಿ. ಲೇಯರ್ ಲುಕ್ ನೀಡುವ ಬ್ಲ್ಯಾಕ್ ಕಾಂಬಿನೇಷನ್‌ಗೆ ಕ್ವಿರ್ಕ್ ಬ್ಲೇಜರ್ ಇಲ್ಲವೇ ಕೋಟ್ ಕೂಡ ಧರಿಸಬಹುದು. ಸಾದಾ ಉಡುಪುಗಳ ಮೇಲೆ ಕ್ವಿರ್ಕ್ ಡಿಸೈನ್‌ನ ಸ್ಟೋಲ್ ಕೂಡ ಧರಿಸಬಹುದು.
ಯಂಗ್‌ಸ್ಟರ್ಸ್ ಫ್ಯಾಷನ್
ಹುಡುಗ-ಹುಡುಗಿಯರ ಲಿಸ್ಟ್‌ಗೂ ಸೇರಿರುವ ಕ್ವಿರ್ಕ್ ಫ್ಯಾಷನ್, ಸದ್ಯ ವೀಕೆಂಡ್ ಡ್ರೆಸ್ ಲಿಸ್ಟ್‌ಗೆ ಸೇರಿದೆ. ಹಾಲಿಡೇ ಲಿಸ್ಟ್‌ನಲ್ಲಿ ಟಾಪ್‌ನಲ್ಲಿದೆ. ಟ್ರೆಂಡಿಯಾಗಿರುವ ಇದು ಸದ್ಯದ ಯಂಗ್‌ಸ್ಟರ್ಸ್ ಫ್ಯಾಷನ್ ಎಂದರೂ ಅತಿಶಯೋಕ್ತಿಯಾಗದು.
ಈ ಸುದ್ದಿಯನ್ನೂ ಓದಿ | Star Saree Fashion: ಭುಜದಿಂದ ಕೆಳಗಿಳಿದ ಆಫ್ ಶೋಲ್ಡರ್ ಬ್ಲೌಸ್ ಸೀರೆ; ಗ್ಲಾಮರಸ್ ಆಗಿ ಕಾಣಿಸಿಕೊಂಡ ತಾಪ್ಸಿ ಪನ್ನು
ಕ್ವಿರ್ಕ್ ಫ್ಯಾಷನ್‌ಗೆ 5 ಸಿಂಪಲ್ ಟಿಪ್ಸ್
- ಔಟಿಂಗ್, ಡೇಟಿಂಗ್ ಹಾಗೂ ವೀಕೆಂಡ್ ಪಾರ್ಟಿಗೆ ಈ ಉಡುಗೆ ಓಕೆ.
- ಕಚೇರಿಗೆ ಈ ಔಟ್‌ಫಿಟ್ ನಾಟ್ ಓಕೆ.
- ಕಂಪ್ಲೀಟ್ ಕ್ವಿರ್ಕ್ ಲುಕ್ ಹಾಲಿಡೇಗೆ ಇರಲಿ.
- ಈ ಔಟ್‌ಫಿಟ್‌ನಿಂದ ಯಂಗ್‌ಲುಕ್ ಗ್ಯಾರಂಟಿ.
- ಆಯ್ಕೆ ಮಾಡುವಾಗ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದುತ್ತದೆಯೇ ಎಂಬುದನ್ನು ನೋಡಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)