ನವದೆಹಲಿ: ಸೋಮವಾರ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ಎಲ್ಲಾ 10 ತಂಡಗಳು ಒಟ್ಟು 182 ಆಟಗಾರರನ್ನು ಖರೀದಿಸಿವೆ. ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಐಪಿಎಲ್ ಹರಾಜಿನ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ರಿಷಭ್ ಪಂತ್ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡ 27 ಕೋಟಿ ರೂ. ಗಳನ್ನು ನೀಡುವ ಮೂಲಕ ಖರೀದಿಸಿತ್ತು. ಪಂಜಾಬ್ ಕಿಂಗ್ಸ್ಗೆ ಹೋದ ಶ್ರೇಯಸ್ ಅಯ್ಯರ್ 26.75 ಕೋಟಿ ರೂ. ಪಡೆಯುವ ಮೂಲಕ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
ಆದರೆ, ಐಪಿಎಲ್ ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಡೇವಿಡ್ ವಾರ್ನರ್ ಸೇರಿದಂತೆ ವಿಶ್ವದ ಕೆಲ ಸ್ಟಾರ್ ಬ್ಯಾಟ್ಸ್ಮನ್ಗಳನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಒಲವು ತೋರಲಿಲ್ಲ. ಕೆಲ ಆಟಗಾರರ ಮೂಲ ಬೆಲೆ ಅಧಿಕವಾಗಿದ್ದ ಕಾರಣ ಅವರನ್ನು ಅನ್ಸೋಲ್ಡ್ ಆಗಿ ಉಳಿಯಬೇಕಾಯಿತು. ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ವಿಶ್ವದ ಐವರು ಸ್ಟಾರ್ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
IPL Auction 2025: ʻಪಂತ್ ಅತ್ಯಂತ ದುಬಾರಿ ಆಟಗಾರʼ-ಮೆಗಾ ಹರಾಜಿನ ಬಳಿಕ 10 ತಂಡಗಳ ಆಟಗಾರರ ವಿವರ!
2025ರ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಐವರು ಸ್ಟಾರ್ ಆಟಗಾರರು
- ಡೇವಿಡ್ ವಾರ್ನರ್
ಐಪಿಎಲ್ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಢ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಡೇವಿಡ್ ವಾರ್ನರ್ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಇತ್ತೀಚೆಗೆ ವಾರ್ನರ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೂ ಅವರು ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ಐಪಿಎಲ್ನಲ್ಲಿ ಯಾವುದಾದರೂ ಒಂದು ತಂಡ ಖರೀದಿಸಬಹುದೆಂದು ನಿರೀಕ್ಷೆ ಮಾಡಿದ್ದ ವಾರ್ನರ್ಗೆ ಭಾರಿ ನಿರಾಶೆಯಾಯಿತು.
- ಶಾರ್ದುಲ್ ಠಾಕೂರ್
ಭಾರತ ತಂಡದ ಎಲ್ಲಾ ಸ್ವರೂಪದ ಆಟಗಾರನಾಗಿ ಹಲವು ವರ್ಷಗಳ ಕಾಲ ಆಡಿದ್ದ ಸೀಮ್ ಬೌಲಿಂಗ್ ಆಲ್ರೌಂಡರ್ ಶಾರ್ದುಲ್ ಠಾಕೂರ್ ಅವರು ಕೂಡ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಹಲವು ಸೀಸನ್ಗಳಲ್ಲಿ ನಿಯಮಿತವಾಗಿ ಆಡಿದ್ದ ಶಾರ್ದುಲ್, ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ, ಈ ಬಾರಿ ಅವರನ್ನು ಖರೀದಿಸಲು ಯಾವುದೇ ತಂಡ ಮನಸು ಮಾಡಲಿಲ್ಲ.
#TATAIPLAuction ✅
— IndianPremierLeague (@IPL) November 26, 2024
Here are the Top 🔟 Buys after the 2⃣-day Auction Extravaganza 🔽#TATAIPL pic.twitter.com/rOBAtJE0iZ
- ಮಯಾಂಕ್ ಅಗರ್ವಾಲ್
ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರನ್ನು ಕೂಡ ಮೆಗಾ ಹರಾಜಿನಲ್ಲಿ ಖರೀದಿಸಲು ಯಾವುದೇ ತಂಡ ಮುಂದೆ ಬರಲಿಲ್ಲ. ಆದೆರೆ, ಕಳೆದ ಹಲವು ಆವೃತ್ತಿಗಳಲ್ಲಿ ಮಯಾಂಕ್ ಅಗರ್ವಾಲ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಸ್ಪೋಟಕ ಬ್ಯಾಟ್ ಮಾಡುವ ಕೌಶಲವನ್ನು ಹೊಂದಿರುವ ಅವರು ಕಳೆದ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದರು.
Presenting the squads of all the 🔟 teams at the end of #TATAIPLAuction 🔥🔥
— IndianPremierLeague (@IPL) November 25, 2024
We can't wait for #TATAIPL 2025 to begin 🥳 pic.twitter.com/kQhm65UblK
- ಕೇನ್ ವಿಲಿಯಮ್ಸನ್
ಟೆಸ್ಟ್, ಒಡಿಐ ಹಾಗೂ ಟಿ20 ಮೂರೂ ಸ್ವರೂಪಗಳಲ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿರುವ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಅವರು ಕೂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಗುಜರಾತ್ ಟೈಟನ್ಸ್ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು. ಆದರೆ, ಗಾಯದ ಕಾರಣ ಅವರು ಮತ್ತೆ ಐಪಿಎಲ್ಗೆ ಮರಳಿರಲಿಲ್ಲ.
— IndianPremierLeague (@IPL) November 25, 2024
- ಜಾನಿ ಬೈರ್ಸ್ಟೋವ್
ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಜಾನ್ ಬೈರ್ಸ್ಟೋವ್ ಅವರು ಕೂಡ ಈ ಬಾರಿ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ತೆರಳಿದ್ದ ಅವರು ಅಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಪ್ರಸ್ತುತ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಇಂಗ್ಲೆಂಡ್ ಆಟಗಾರ ವಿಕೆಟ್ ಕೀಪಿಂಗ್ನಲ್ಲಿ ಅತ್ಯುತ್ತಮ ಕೌಶಲವನ್ನು ಹೊಂದಿದ್ದಾರೆ. ಇದರ ಹೊರತಾಗಿಯೂ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಮನಸು ಮಾಡಲಿಲ್ಲ.