Tuesday, 26th November 2024

UPI Payment: ಯುಪಿಐ ಮೂಲಕವೇ ಇನ್ನು ಬ್ಯಾಂಕ್‌‌ಗಳಲ್ಲಿ ಫಿಕ್ಸ್ಡ್ ಡಿಪಾಸಿಟ್‌‌ ಇಡಬಹುದು!

UPI Payment

ದೇಶಾದ್ಯಂತ ಈಗ ಕೋಟ್ಯಂತರ ಜನರು ಡಿಜಿಟಲೀಕರಣದತ್ತ ಸಾಗಿದ್ದಾರೆ. ಬಹುತೇಕ ಬ್ಯಾಂಕಿಂಗ್ ವಹಿವಾಟಿಗಳನ್ನು ಮೊಬೈಲ್, ಆನ್ ಲೈನ್ ಮೂಲಕವೇ ಮಾಡಲಾಗುತ್ತಿದೆ. ಸ್ಥಿರ ಠೇವಣಿ (FD) ಹೊಂದಿರುವವರಿಗೆ ಇಲ್ಲೊಂದು ಶುಭ ಸುದ್ದಿ. ಇನ್ನು ಮುಂದೆ ಯುಪಿಐ ಮೂಲಕ (UPI Payment) ಸ್ಥಿರ ಠೇವಣಿಗೆ ತ್ವರಿತವಾಗಿ ಪಾವತಿಗಳನ್ನು ಮಾಡಬಹುದಾಗಿದೆ.

ಉಳಿತಾಯದ ಹಣವನ್ನು ಸಂಗ್ರಹಿಸಲು ಈಗ ಬ್ಯಾಂಕಿಂಗ್‌ ಮೂಲಕ ಹಲವಾರು ಮಾರ್ಗಗಳಿವೆ. ದೇಶವು ಡಿಜಿಟಲೀಕರಣದತ್ತ ಸಾಗುತ್ತಿರುವಾಗ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ಜನರ ಎಲ್ಲಾ ವಹಿವಾಟಿನ ಕೆಲಸಗಳನ್ನು ಡಿಜಿಟಲೀಕರಣಗೊಳಿಸುತ್ತಿವೆ.

ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ಕಳುಹಿಸುವುದು, ರೀಚಾರ್ಜ್ ಮಾಡುವುದು ಅಥವಾ ಎಫ್‌ಡಿ ಪಾವತಿಸುವುದು ಎಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ಯುಪಿಐ ಮೂಲಕ ಸುಲಭವಾಗಿ ಮಾಡಲಾಗುತ್ತದೆ. ಈ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ವಿಸ್ತರಿಸಲು ಫ್ಲಿಪ್‌ಕಾರ್ಟ್ ಬೆಂಬಲಿತ ಫಿನ್‌ಟೆಕ್ ಕಂಪನಿ ಸೂಪರ್ ಮನಿ ಇಂದು ಸೂಪರ್ ಎಫ್‌ಡಿ ಎಂಬ ಹೊಸ ಸ್ಥಿರ ಠೇವಣಿ ಬಿಡುಗಡೆಯನ್ನು ಘೋಷಿಸಿದೆ. ಇದು ಯುಪಿಐ ಮೂಲಕ ಮಾಡಬಹುದಾದ ಮೊದಲ ಎಫ್‌ಡಿ ಆಗಿದೆ.

ಇದನ್ನು ಪ್ರಾರಂಭಿಸುವ ಹಿಂದೆ ಕಂಪನಿಯ ಉದ್ದೇಶವು ಎಫ್‌ಡಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವುದಾಗಿದೆ. ಹೊಸ ತಲೆಮಾರಿನ ಭಾರತೀಯ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ಸೂಪರ್ ಎಫ್‌ಡಿಯೊಂದಿಗೆ ಬಳಕೆದಾರರು ಕನಿಷ್ಠ 1,000 ರೂಪಾಯಿಗಳೊಂದಿಗೆ ಎಫ್‌ಡಿಗಳನ್ನು ಬುಕ್ ಮಾಡಲು ಮತ್ತು ಶೇ. 9.5ರವರೆಗೆ ಬಡ್ಡಿಯನ್ನು ಗಳಿಸಲು ಸಾಧ್ಯವಾಗುತ್ತದೆ.

UPI Payment

ಸೂಪರ್ ಎಫ್‌ಡಿಗಾಗಿ ಐದು ಬ್ಯಾಂಕ್‌

ಸೂಪರ್ ಮನಿಯಲ್ಲಿ ಬಳಕೆದಾರರು ಎಫ್‌ಡಿಗಳಿಗಾಗಿ ಐದು ಆರ್ ಬಿಐ ಪ್ರಮಾಣೀಕೃತ ಸಣ್ಣ ಹಣಕಾಸು ಬ್ಯಾಂಕ್‌ಗಳನ್ನು ಆಯ್ಕೆ ಮಾಡಬಹುದು.

ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ನಿಂದ (ಡಿಐಸಿಜಿಸಿ) ಪ್ರತಿ ಎಫ್‌ಡಿ 5,00,000 ರೂ. ವರೆಗೆ ವಿಮೆ ಮಾಡಲ್ಪಡುತ್ತದೆ. ಸೂಪರ್ ಎಫ್‌ಡಿಯೊಂದಿಗೆ ಸೂಪರ್ ಮನಿ ತನ್ನ ಎಲ್ಲಾ 70 ಲಕ್ಷ ಬಳಕೆದಾರರಿಗೆ ಮೊದಲ ಹೂಡಿಕೆಯ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಇದನ್ನು ಪಡೆಯುವುದು ತುಂಬಾ ಸರಳವಾಗಿದೆ. ಇದರ ಸಹಾಯದಿಂದ ಬಳಕೆದಾರರು ಕೆಲವು ಟ್ಯಾಪ್‌ಗಳಲ್ಲಿ ಇಕೆವೈಸಿ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.

ಉಳಿತಾಯ ಮತ್ತು ಹೂಡಿಕೆಯ ವಿಧಾನ

ಸೂಪರ್ ಮನಿ ಸಂಸ್ಥಾಪಕ ಮತ್ತು ಸಿಇಒ ಪ್ರಕಾಶ್ ಸಿಕಾರಿಯಾ ಈ ಕುರಿತು ಮಾಹಿತಿ ನೀಡಿದ್ದು, ಇದು ಯುವ ಭಾರತೀಯರು ಉಳಿಸುವ ಮತ್ತು ಹೂಡಿಕೆ ಮಾಡುವ ವಿಧಾನವನ್ನು ಬದಲಾಯಿಸುತ್ತದೆ. ಹೂಡಿಕೆದಾರರಿಗೆ ಠೇವಣಿಗಳನ್ನು ಆಕರ್ಷಕವಾಗಿ ಮಾಡುವ ಭಾರತೀಯ ರಿಸರ್ವ್ ಬ್ಯಾಂಕ್‌ನ ದೃಷ್ಟಿಕೋನಕ್ಕೆ ಇದು ಪೂರಕವಾಗಿದೆ.

ಆಕರ್ಷಕ ಬಡ್ಡಿದರಗಳು, ನಮ್ಯತೆ ಮತ್ತು ಸುಲಭ ಪ್ರವೇಶದೊಂದಿಗೆ ಸೂಪರ್ ಎಫ್‌ಡಿಗಳು ಕಡಿಮೆ ಅಪಾಯವನ್ನು ನೀಡುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸುತ್ತವೆ. ಹೆಚ್ಚಿನ ಆದಾಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಇದರಲ್ಲಿ ಹೂಡಿಕೆ ಮಾಡುವುದು ತುಂಬಾ ಸರಳ. ಇದರ ಸಹಾಯದಿಂದ ಬಳಕೆದಾರರು ಕೆಲವೇ ಹಂತಗಳಲ್ಲಿ ಇಕೆವೈಸಿ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಸೂಪರ್‌ ಎಫ್‌ಡಿ ಖಾತೆಯನ್ನು ತೆರೆಯಲು ಕಂಪೆನಿಯು ಉಲ್ಲೇಖಿಸಿರುವ ಈ ನಾಲ್ಕು ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ಅದನ್ನು ಸುಲಭವಾಗಿ ತೆರೆಯಬಹುದು.

PAN 2.0: ದೇಶದಲ್ಲಿ ಪ್ಯಾನ್‌ 2.0 ಜಾರಿಗೆ ಕೇಂದ್ರದ ಸಿದ್ಧತೆ; ಏನಿದು ಯೋಜನೆ? ಹಳೆಯ ಪ್ಯಾನ್ ಕಾರ್ಡ್ ಏನಾಗುತ್ತೆ?

ಮೊದಲು ಸೂಪರ್ ಮನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅಪ್ಲಿಕೇಶನ್‌ಗೆ ಪ್ರವೇಶ ಪಡೆಯಿರಿ. ಬಳಿಕ ಆಯ್ಕೆಯ ಬ್ಯಾಂಕ್ ಎಫ್‌ಡಿ ಕೊಡುಗೆಯನ್ನು ಆಯ್ಕೆ ಮಾಡಿ. ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಠೇವಣಿ ಮೊತ್ತವನ್ನು ಹೊಂದಿಸಿದ ಬಳಿಕ ಇದರಲ್ಲಿ ನಿರಂತರ ಹೂಡಿಕೆಯನ್ನು ಮಾಡಬಹುದು