Tuesday, 26th November 2024

BBK 11: ಅಳಿಸಬೇಕು-ನಗಿಸಬೇಕು: ಸೀಕ್ರೆಟ್ ಟಾಸ್ಕ್​ನಲ್ಲಿ ಗೆದ್ದು ಬೀಗಿದ ಮಂಜಣ್ಣ

Ugramm Manju

ಒಂಬತ್ತನೇ ವಾರ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಖತ್ ಕುತೂಹಲ ಕೆರಳಿಸಿದೆ. ಸದ್ಯ ಮನೆಯೊಳಗೆ 13 ಮಂದಿ ಇದ್ದು, ಆಟ ರೋಚಕತೆ ಸೃಷ್ಟಿಸಿದೆ. ಕಳೆದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಕೂಡ ಇನ್ಮುಂದೆ ಟಾಸ್ಕ್​ಗಳು ಕಠಿಣವಾಗುತ್ತಾ ಸಾಗುತ್ತದೆ ಎಂಬ ಮಾತನ್ನು ಹೇಳಿದ್ದರು. ಅದರಂತೆ ಇದೀಗ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದು, ಈ ವಾರದ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದಾರೆ.

ಹೌದು, ಬಿಗ್​​​ ಬಾಸ್ ಮನೆ ಇದೀಗ ಬಿಗ್ ​ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ ಭರ್ಜರಿ ಆಗಿ ನಡೆಯುತ್ತಿದೆ. ಇವರ ಆರ್ಭಟಕ್ಕೆ ಮನೆಮಂದಿ ಕಂಗಾಲಾಗಿದ್ದಾರೆ. ಇದರ ನಡುವೆ ಮಂಜು ಅವರಿಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರಲ್ಲಿ ಗೆದ್ದರೆ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆ ಆಗುತ್ತಾರೆ. ಕಠಿಣವಾದ ಈ ಟಾಸ್ಕ್ ಅನ್ನು ಮಂಜು ಅವರು ನೀರು ಕುಡಿದಂತೆ ಸುಲಭವಾಗಿ ಮಾಡಿಮುಗಿಸಿದ್ದಾರೆ.

ಮನೆಯಲ್ಲಿರುವ ಪ್ರಜೆಗಳ ಪೈಕಿ ನಿಮ್ಮ ಆಯ್ಕೆಯ 4 ಪ್ರಜೆಗಳಿಗೆ 2 ಪ್ರಜೆಗಳು ಜೋರಾಗಿ ನಗುವಂತೆ ಹಾಗೂ 2 ಪ್ರಜೆಗಳು ಕಣ್ಣೀರಿಟ್ಟು ನೈಜವಾಗಿ ಅಳುವಂತೆ ಮಾಡಬೇಕು. ನೀವು ಯಾವುದೇ ರೀತಿಯ ಆದೇಶವನ್ನ ನೀಡಿ ನಗಿಸುವಂತಿಲ್ಲ, ಅಳಿಸುವಂತಿಲ್ಲ. ಭಾವನೆ ನೈಜವಾಗಿರಬೇಕು. ನಿಮ್ಮೆಯ ಆಯ್ಕೆ 4 ಪ್ರಜೆಗಳ ಪೈಕಿ 3 ಪ್ರಜೆಗಳು ಯಶಸ್ವಿಯಾಗಿ ಟಾಸ್ಕ್ ಪೂರ್ಣಗೊಳಿಸುವಂತೆ ನೀವು ಮಾಡಿದರೂ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗುತ್ತೀರಿ ಎಂದು ಮಂಜುಗೆ ಬಿಗ್ ಬಾಸ್ ಹೇಳಿದ್ದಾರೆ.

ಈ ಸೀಕ್ರೆಟ್ ಟಾಸ್ಕ್​ನಲ್ಲಿ ಮಂಜು ಅವರು, ತ್ರಿವಿಕ್ರಮ್‌ ಹಾಗೂ ರಜತ್‌ ಅವರನ್ನ ನಗಿಸಿದ್ದಾರೆ. ಹಾಗೆಯೆ ಗೋಲ್ಡ್‌ ಸುರೇಶ್‌ ಹಾಗೂ ಶಿಶಿರ್‌‌ ಅವರನ್ನು ಭಾವುಕರಾಗಿ ಇರಿಸಲು ಪ್ರಯತ್ನಿಸಿದ್ದಾರೆ. ಕೊನೆಯಲ್ಲಿ ಮೋಕ್ಷಿತಾ ಹಾಗೂ ಗೌತಮಿ ಅವರನ್ನೂ ಅಳಿಸಿದ್ದಾರೆ. ಆಕಾಶದಲ್ಲಿ ನೀ ದೀಪವಾದೆ ಹಾಡನ್ನ ಹಾಡುವಾಗ ಮೋಕ್ಷಿತಾ, ಗೌತಮಿ ಕಣ್ಣೀರಿಟ್ಟಿದ್ದಾರೆ. ಈ ಮೂಲಕ ತಮ್ಮ ಟಾಸ್ಕ್ ಪೂರ್ಣಗೊಳಿಸಿದ್ದಾರೆ.

BBK 11: ಬಿಗ್ ಬಾಸ್ ಸಾಮ್ರಾಜ್ಯ ಅಲ್ಲೋಲ-ಕಲ್ಲೋಲ: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್