Thursday, 28th November 2024

Tumkur News: ಕನ್ನಡ ಭಾಷೆ ಉತ್ಕೃಷ್ಟ, ಸಮೃದ್ಧವಾದ ಪ್ರಾಚೀನ ಭಾಷೆಯಾಗಿದೆ; ಡಾ.ಬಿ.ಗೋವಿಂದಪ್ಪ

ಮದಲೂರು ದಾಸರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಶಿರಾ:
ಕನ್ನಡ ಭಾಷೆ ಉತ್ಕöÈಷ್ಟ, ಸಮೃದ್ಧವಾದ ಪ್ರಾಚೀನ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಆಧುನಿಕ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಕಾರ್ಯ ಮೊದಲು ನಗರವಲಯಗಳಲ್ಲಿ ಆಗಬೇಕು ಎಂದು ಶ್ರೀಪೂನಂ ಶಾಲೆಯ ಅಧ್ಶಕ್ಷರು ಹಾಗೂ ತಾಲೂಕು ಕಸಾಪ ಮಾಜಿ ಅಧ್ಶಕ್ಷರಾದ ಡಾ.ಬಿ.ಗೋವಿಂದಪ್ಪ ಹೇಳಿದರು.

ಅವರು ತಾಲೂಕಿನ ಮದಲೂರು ದಾಸರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಶೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇಂದಿನ ಯುವ ಜನತೆ ಸ್ಪಷ್ಟ ಕನ್ನಡದ ಉಚ್ಚಾರಣೆಯನ್ನು ಮಾಡಬೇಕಾಗಿದೆ. ಎಷ್ಟೋ ಮಂದಿಗೆ ಇಂದು ಕನ್ನಡ ಬರೆಯಲು ಮತ್ತು ಸ್ಪಷ್ಟವಾಗಿ ಮಾತನಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ಕೆಲಸವಾಗಬೇಕು. ಕನ್ನಡ ನಾಡು ದೇಶದ ಇತಿಹಾಸದಲ್ಲಿಯೇ ಮಹತ್ತರವಾದುದಾಗಿದೆ. ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಶದಲ್ಲಿ ಹಾದಿಬೀದಿ ಗಳಲ್ಲಿ ಮುತ್ತುರತ್ನಗಳನ್ನು ಸೇರುಗಳಲ್ಲಿ ಅಳತೆಮಾಡಿ ಮಾರುತ್ತಿದ್ದರು. ಇಂತಹ ನಾಡಿನಲ್ಲಿ ಹುಟ್ಟಿರುವ ನಾವೇ ಪುಣ್ಯವಂತರು. ಕರ್ನಾಟಕದ ಏಕೀಕರಣಕ್ಕಾಗಿ ಹಿರಿಯ ಕವಿಗಳು ಆಡಳಿತಗಾರರು ನಾಡಿನ ಪ್ರಮುಖರುಗಳ ಸೇವೆಯನ್ನು, ಕರ್ನಾಟಕದ ವೈಭವವನ್ನು ಮೆರೆಸುವ ಸಲುವಾಗಿ ರಾಜಮಹಾರಾಜರುಗಳ, ಸಾಹಿತಿಗಳ ಸೇವೆಯನ್ನು ನಾವು ಸ್ಮರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಡಿ.ವೈ.ಗೋಪಾಲ್, ಮುಖಂಡರಾದ ರಂಗನಾಥಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.