Tuesday, 26th November 2024

Bengaluru Power Cut: ನ.27, 28ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru power cut

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಲೀಲಾ ವೆಂಚ್ಯೂರ್ ಸ್ಟೇಷನ್‌ನ ಹಲವೆಡೆ ನ.27 ಮತ್ತು 28 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಏರ್ಪೋರ್ಟ್ ರಸ್ತೆ, ಕೋಡಿಹಳ್ಳಿ, 16 ಮತ್ತು 19ನೇ ಮುಖ್ಯ ರಸ್ತೆ, ಎಚ್ಎಎಲ್ 2ನೇ ಹಂತ, ಕಾಲ್ಪನ್ ಟವರ್ಸ್, ಎನ್ಎಎಲ್ ಕಾಂಪೌಂಡ್, ಕೋಡಿಹಳ್ಳಿ, ರಾಮಟೆಂಪಲ್ ರಸ್ತೆ, ವೆಂಕಟೇಶ್ವರ ಕಾಲೋನಿ, ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮ, 17,18 ನೇ ಮತ್ತು 19ನೇ ಅಡಿ ಮುಖ್ಯ ರಸ್ತೆ, ಸರ್ವೀಸ್ ರಸ್ತೆ 100, 13ನೇ ಎಸ್, 12ನೇ ಮುಖ್ಯ, ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೈನ್ಸ್ ಕಾಲೋನಿ, 80 ಅಡಿ ರಸ್ತೆ, 11ಮುಖ್ಯ ರಸ್ತೆ, ಹಳೆ ತಪ್ಪಸಂದ್ರ, ಹೊಸ ತಪ್ಪಸಂದ್ರ, ಎಂ.ಜಿ.ರಸ್ತೆ, ಚರ್ಚ್‌ ರಸ್ತೆ, ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರ್ಬಾ ರಸ್ತೆ, ವಾಲ್ಪನ್ ರಸ್ತೆ, ಡಿಕನ್ಸನ್ ರಸ್ತೆ, ಆಶೋಕ ನಗರ, ಪ್ರೈಮ್ ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರನಿಟಿ ಸರ್ಕಲ್, ಹಲಸೂರು ರಸ್ತೆ, ಮರ್ಫಿ ಪಟ್ಟಣ, ಹಲಸೂರು ಗೀತಾಂಜಲಿ ಲೇಔಟ್, ಎಚ್ಎಎಲ್ 3ನೇ ಹಂತ, ಹೊಸ ತಪ್ಪಸಂದ್ರ ಮುಖ್ಯ ರಸ್ತೆ, ಸೀತಪನಹಳ್ಳಿ ಕಾಲೋನಿ, ಎಡಿಇ ಕಾಂಪೌಂಡ್, ಬಿಇಎಂಎಲ್, ಗಣೇಶ ದೇವಸ್ಥಾನ, ಪ್ರಿಸ್ಟಿನ್ ಪಾರ್ಕ್, ಎಚ್‌ಎಎಲ್ 2ನೇ ಹಂತ, ಡಿಫೈನ್ಸ್ ಕಾಲೋನಿ, ಮೊಟ್ಟಪನಪಾಳ್ಯ, ಟಪ್ಪಾರೆಡ್ಡಿ ಪಾಳ್ಯ ಕ್ವಾರ್ಟರ್ಸ್, ಇಎಸ್ಐ ಆಸ್ಪತ್ರೆ , ದೂರವಾಣಿ ಎಕ್ಸ್‌ಚೇಂಜ್ ಪ್ರದೇಶ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಪೂಜಾ ಅಪಾರ್ಟ್‌ಮೆಂಟ್ ಹಳೆ ತಪ್ಪಸಂದ್ರ, 6ನೇ ಮುಖ್ಯ, ಹುಲ್ಲೇರಿ, ಜಿ.ಜಿ. ರಸ್ತೆ 9ನೇ ಮತ್ತು 4ನೇ ಮುಖ್ಯ ಎಚ್ಎಎಲ್ 3ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Haridasara Dinachari Movie: ʼಹರಿದಾಸರ ದಿನಚರಿʼ ಚಿತ್ರಕ್ಕೆ ಸೆನ್ಸಾರ್ ಯು ಸರ್ಟಿಫಿಕೇಟ್

ಕೆಪಿಟಿಸಿಎಲ್ ವತಿಯಿಂದ ಸೌತ್ ಸಿ.ಟಿ ವಿ.ವಿ. ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಎಚ್ಎಸ್‌ಆರ್‌ ಬಡಾವಣೆಯ ಹಲವೆಡೆ ನ.27 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | KPSC Recruitment 2024: 750 ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC; ಹೀಗೆ ಅಪ್ಲೈ ಮಾಡಿ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಲಕ್ಷ್ಮಿ ಲೇಔಟ್, ಸೌತ್ ಸಿಟಿ ಅಪಾರ್ಟ್‌ಮೆಂಟ್, ಕಮ್ಮನಹಳ್ಳಿ, ಶಾಂತಿನಿಕೇತನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.