ಒಂಬತ್ತನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಟಾಸ್ಕ್ನ ಕಾವು ಏರುತ್ತಿದೆ. ಕಳೆದ ವೀಕೆಂಡ್ನಲ್ಲೇ ಕಿಚ್ಚ ಸುದೀಪ್ ಅವರು ಮುಂದಿನ ವಾರದಿಂದ ಕಠಿಣ ಟಾಸ್ಕ್ಗಳು ಪ್ರಾರಂಭ ಆಗುತ್ತವೆ ಎಂದು ಹೇಳಿದ್ದರು. ಅದರಂತೆ ಸದ್ಯ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದು, ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಮೆರೆಯುತ್ತಿದ್ದಾರೆ. ಇದರ ಜೊತೆಗೆ ನಾಮಿನೇಷನ್ ಫೀವರ್ ಕೂಡ ಶುರುವಾಗಿದೆ.
ನಾಮಿನೇಷನ್ ಮಾಡುವ ಸಂದರ್ಭ ಚೈತ್ರಾ ಕುಂದಾಪುರ ಹಾಗೂ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟ ರಜತ್ ಕಿಶನ್ ನಡುವೆ ಮಾತಿನ ಸಮರ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಬಾಸ್ ಪದ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಅವರು, ‘ರಜತ್ ಪ್ರತಿ ಬಾರಿ ಬಾಸ್, ಬಾಸ್ ಅಂದಾಗ ಅದರಲ್ಲೊಂದು ವ್ಯಂಗ್ಯ ಕಾಣುತ್ತೆ. ಮನೆಯಿಂದ ಹೊರಗಡೆ ಹೋಗೋದಕ್ಕೆ ರೆಡಿ ಆಗಿದ್ದೀನಿ ಅಂತ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಚೈತ್ರಾ ಅವರ ಮಾತಿಗೆ ತಿರುಗೇಟು ಕೊಟ್ಟ ರಜತ್, ‘ಈವಾಗಲೂ ಹೇಳ್ತೀನಿ ನಮ್ಮ ಬಾಸ್ ಇವರು. ಬರೀ ಬಾಸ್ ಅಂದಿದ್ದಕ್ಕೆ ಮನೆಯಿಂದ ಆಚೆ ಕಳುಹಿಸುತ್ತಾರಂತೆ ಅದಕ್ಕೆ ನಮ್ಮ ಬಾಸ್ ಇವ್ರು. ಬಾಸ್ ನಾನು ಈಗಲೂ ಹೇಳುತ್ತೇನೆ ಕೇಳಿಸಿಕೊಳ್ಳಿ. ನಿಮ್ಮನ್ನ ಮನೆಯಿಂದ ಹೊರಗೆ ಕಳುಹಿಸೋವರೆಗೂ ನಾನು ಹೋಗಲ್ಲ ಬಾಸ್’ ಎಂದು ನೇರವಾಗಿ ಹೇಳಿದ್ದಾರೆ.
ಕಳೆದ ಶನಿವಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಮನೆಯ ಸದಸ್ಯರ ಬಗ್ಗೆ ಮಾತನಾಡುತ್ತಿದ್ದ ರಜತ್ ಅವರು, ಚೈತ್ರಾ ಅವರನ್ನು ಬಾಸ್ ಎಂದು ಸಂಭೋಧಿಸುತ್ತಿದ್ದರು. ಅದಕ್ಕೆ ಮುಂಚೆ ಅವರು ಜೈಲಿಗೆ ಹೋದಾಗಲೂ ಚೈತ್ರಾ ಅವರನ್ನು ಬಾಸ್ ಎಂದೇ ಹೇಳಿತ್ತಿದ್ದರು. ಆಗಂತೂ ಮನೆಯ ಕೆಲ ಸ್ಪರ್ಧಿಗಳಿಗೆ ರಜತ್ ಯಾವ ಬಾಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅನುಮಾನವೂ ಮೂಡಿತ್ತು.
ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಹಿಂದೆ ಆಡಿದ ಮಾತುಗಳೆಲ್ಲ ಒಂದೊಂದಾಗಿ ಹೊರಬಂದಿದೆ. ಬಿಲ್ಲು-ಬಾಣ ಕಲೆಗಾರಿಕೆ ಮೂಲಕ ನಾಮಿನೇಟ್ ಮಾಡಲು ಬಿಗ್ಬಾಸ್ ಸೂಚಿಸಿದ್ದಾರೆ. ನಾಮಿನೇಟ್ ಮಾಡುವ ಸದಸ್ಯರು, ಎದುರಾಳಿಯ ಸ್ಪರ್ಧಿಯ ಭಾವಚಿತ್ರವನ್ನು ಬಾಣಕ್ಕೆ ಚುಚ್ಚಿಕೊಳ್ಳಬೇಕು. ನಂತರ ಅದನ್ನು ಮನೆಯ ಮುಖ್ಯದ್ವಾರಕ್ಕೆ ಹೊಡೆಯಬೇಕು. ಅದು ಮನೆಯ ದ್ವಾರವನ್ನು ಛೇದಿಸಿಕೊಂಡು ಹೋಗಬೇಕಾಗಿರುತ್ತದೆ. ಈ ನಾಮಿನೇಷನ್ ಪ್ರಕ್ರಿಯೆ ವೇಳೆ ತ್ರಿವಿಕ್ರಮ್- ಮೋಕ್ಷಿತಾ ನಡುವೆ ಕೂಡ ಜಗಳ ನಡೆದಿದೆ.
BBK 11: ಅಳಿಸಬೇಕು-ನಗಿಸಬೇಕು: ಸೀಕ್ರೆಟ್ ಟಾಸ್ಕ್ನಲ್ಲಿ ಗೆದ್ದು ಬೀಗಿದ ಮಂಜಣ್ಣ