Wednesday, 27th November 2024

Viral News: ಇದು ಟ್ರೋ.. ಟ್ರೋ.. ಕಪ್ಪೆ ಪಿಜ್ಹಾ – ಚೀನಾದವರ ಈ ರೆಸಿಪಿ ನೋಡಿ ನೆಟ್ಟಿಗರಂತಿದ್ದಾರೆ ‘ನೋ..ನೋ.. ವ್ಯಾಕ್..!’

ಭಾರತೀಯರು ಪುರಾತನ ಕಾಲದಿಂದಲೂ ಆಹಾರ ಪ್ರಿಯರಾಗಿರುವ ಕಾರಣ ವೆರೈಟಿ ವೆರೈಟಿ ಫುಡ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಹಲವು ಆಹಾರಗಳನ್ನು ಸೇರಿಸಿ ಏನನ್ನಾದರೂ ಎಕ್ಸ್ ಪೆರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. ಹಾಗೆಯೇ ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಮತ್ತು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗ್ತಿರೋದು ಡೀಪ್ ಫ್ರೈಡ್ ಫ್ರಾಗ್ (ಕಪ್ಪೆ ಫ್ರೈ) ಪಿಜ್ಜಾ (Goblin Pizza).

ಫುಡ್‌ನಲ್ಲಿ ಎಕ್ಸ್‌ಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡಿ ಟ್ರೈ ಮಾಡುತ್ತಾರೆ ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ತನ್ನ ಕೆಟ್ಟ ಕಾಂಬಿನೇಶನ್‌ನಿಂದ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಕೆಲವೇ ದಿನಗಳ ಹಿಂದಷ್ಟೇ ಥಂಬ್ಸಪ್‌ ಪಾನಿಪುರಿ ಹಾಗೂ ಕ್ಯಾಡ್‌ಬರಿ ಆಮ್ಲೆಟ್ ಮಾಡುವ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹಾಗೆಯೇ ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಡೀಪ್ ಫ್ರೈಡ್ ಫ್ರಾಗ್ (ಕಪ್ಪೆ ಫ್ರೈ)  ಪಿಜ್ಜಾ.

ಹೌದು, ಚೀನಾದ ಪಿಜ್ಜಾ ಹಟ್‌ ʼಗಾಬ್ಲಿನ್‌ ಪಿಜ್ಜಾʼ ಎಂಬ ಹೆಸರಿನ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದ್ದು, ಮೊಬೈಲ್‌ ಗೇಮ್‌ ಡಂಜಿಯನ್ಸ್‌ ಮತ್ತು ಫೈಟರ್ಸ್‌ ಒರಿಜಿನ್ಸ್‌ ಬ್ರ್ಯಾಂಡ್‌ಗಳ ಸಹಯೋಗದಲ್ಲಿ ಈ ರೆಸಿಪಿಯನ್ನು ತಯಾರಿಸಲಾಗಿದೆ.

ಕೆಲವೊಬ್ಬರು ಈ ಪಿಜ್ಜಾಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇದೆಂಥಾ ವಿಚಿತ್ರ ಎಕ್ಸ್‌ಪರಿಮೆಂಟ್ (Weird food) ಎಂದು ಹೀಯಾಳಿಸಿದ್ದಾರೆ. ಮತ್ತೆ ಕೆಲವರು, ‘ಉತ್ತಮವಾದ ಆಹಾರವನ್ನು ಯಾಕೆ ಹೀಗೆ ಹಾಳು ಮಾಡುತ್ತಾರೆ..?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು, ‘ಕಪ್ಪೆ ಈರುಳ್ಳಿ ಮತ್ತು ಚೀಸ್ ಸೇರಿಸುವುದರಿಂದ  ಪಿಜ್ಜಾ ಆಗುವುದಿಲ್ಲ’ ಎಂದಿದ್ದಾರೆ. ಮತ್ತೆ ಕೆಲವರು, ‘ಬಹಳ ವರ್ಷಗಳಿಂದಲೂ ಅದೆಷ್ಟೋ ಜನರ ಫೇವರಿಟ್ ಆಗಿರುವ ಪಿಜ್ಜಾವನ್ನು ಹೀಗೆ ಅಸಹ್ಯವಾಗಿ ಬಳಸಿಕೊಳ್ಳಬೇಡಿ’ ಎಂದಿದ್ದಾರೆ. ಒಟ್ನಲ್ಲಿ ಪಿಜ್ಜಾ ಇಷ್ಟ ಅನ್ನೋರಿಗೂ ಈ ಪಿಜ್ಜಾ ಅಷ್ಟೊಂದು ಇಷ್ಟವಾಗಿಲ್ಲ ಅನ್ನೋದು ಕೂಡಾ ನಿಜ.

ಚೀನಾದ ಪಿಜ್ಜಾ ಹಟ್‌ ʼಗಾಬ್ಲಿನ್‌ ಪಿಜ್ಜಾʼ ಎಂಬ ಹೆಸರಿನ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದೆ. ಚೀನಾದ ಈ ಹೊಸ ಪಿಜ್ಜಾ ಪಾಕ ವಿಧಾನವು ಮೊಬೈಲ್‌ ಗೇಮ್‌ ಡಂಜಿಯನ್ಸ್‌ ಮತ್ತು ಫೈಟರ್ಸ್‌ ಒರಿಜಿನ್ಸ್‌ ಬ್ರ್ಯಾಂಡ್‌ಗಳ ಸಹಯೋಗದ ಭಾಗವಾಗಿದೆ. ಇದು ಪಿಜ್ಜಾ ಪ್ರಿಯರನ್ನು ಮತ್ತು ಪಾಪ್‌ ಸಂಸ್ಕೃತಿಯ ಅಭಿಮಾನಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ನವೆಂಬರ್‌ 18 ರಂದು ಈ ಪಿಜ್ಜಾವನ್ನು ಪರಿಚಯಿಸಲಾಗಿದ್ದು, ಚೀನಾದ ಮೂರು ಪಿಜ್ಜಾ ಹಟ್‌ ಔಟ್‌ಲೆಟ್‌ಗಳಲ್ಲಿ ಈ ಗಾಬ್ಲಿನ್‌ ಪಿಜ್ಜಾ ಲಭ್ಯವಿದೆ. ಇದರ ಬೆಲೆ 169 ಯುವಾನ್‌ (ಅಂದಾಜು 2,000 ರೂ.) ಆಗಿದೆ.

ಈ ಕುರಿತ ಪೋಸ್ಟ್‌ ಒಂದನ್ನು ಜೇಮ್ಸ್‌ ವಾಕರ್‌ (jwalkermobile) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚೀನಾದಲ್ಲಿ ಅಗ್ರಸ್ಥಾನದಲ್ಲಿರುವ ಈ ಕಪ್ಪೆ ಪಿಜ್ಜಾವನ್ನು ನೀವು ಪ್ರಯತ್ನಿಸುವಿರಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಫೋಟೋದಲ್ಲಿ ಪಿಜ್ಜಾದ ಮೇಲೆ ಟಾಪಿಂಗ್‌ ರೀತಿಯಲ್ಲಿ ಡೀಪ್‌ ಫ್ರೈಡ್‌ ಕಪ್ಪೆಯನ್ನು ಇಟ್ಟಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: Vastu Tips: ಮನೆ, ಕಚೇರಿಯಲ್ಲಿ ಕಾಮಧೇನು ವಿಗ್ರಹ ಇಟ್ಟರೆ ಎಲ್ಲವೂ ಸುಗಮ!

ನವೆಂಬರ್‌ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 17 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪೈನಾಪಲ್‌ ಪಿಜ್ಜಾವನ್ನು ಬೇಕಾದ್ರೆ ತಿನ್ಬೋದು, ಆದ್ರೆ ಇದನ್ನು ಮಾತ್ರ ತಿನ್ನಲಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಛೀ ಛೀ… ಇದನ್ನು ನೋಡುವಾಗಲೇ ಅಸಹ್ಯವಾಗುತ್ತಿದೆʼ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಕಪ್ಪೆ ಪಿಜ್ಜಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಟ್ರಾಶಿ ‘ನೆಗೆತ’ ಕಾಣುತ್ತಿದೆ!