ಲಖನೌ: ಕೋಚಿಂಗ್ ಕ್ಲಾಸ್ನ ಶಿಕ್ಷಕನು 2 ನೇ ತರಗತಿಯ ಬಾಲಕಿಯ ಕೂದಲು ಎಳೆದು, ಕಾಲು ಹಿಡಿದುಕೊಂಡು ಥಳಿಸಿದ ಘಟನೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಘಟನೆಯನ್ನು ನೋಡುಗರೊಬ್ಬರು ರೆಕಾರ್ಡ್ ಮಾಡಿದ್ದಾರೆ. ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದ್ದು, ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆಯಂತೆ.
ವಿಡಿಯೊದಲ್ಲಿ ಬಾಲಕಿ ಶಿಕ್ಷಕನ ಏಟಿಗೆ ಹೆದರಿ ಮೇಜಿನ ಕೆಳಗೆ , ಕುರ್ಚಿಯ ಹಿಂದೆ ಅಡಗಿ ಕುಳಿತುಕೊಂಡಿದ್ದಳು. ಶಿಕ್ಷಕನು ಬಾಲಕಿಯ ಕೂದಲನ್ನು ಹಿಡಿದುಕೊಂಡು ಎಳೆದು ಕೈಯಿಂದ ಹಾಗೂ ಕೋಲಿನಿಂದ ಹೊಡೆದಿದ್ದಾನೆ. ಶಿಕ್ಷಕನ ಹೊಡೆತ ತಾಳಲಾರದೇ ಬಾಲಕಿ ನೋವಿನಿಂದ ಕಿರುಚಿದರೂ ಬಿಡದೆ ಯರ್ರಾಬಿರ್ರಿ ಹೊಡೆದಿದ್ದಾನೆ.
कन्नौज : कोचिंग टीचर द्वारा मासूम बच्ची को तालिबानी सजा
— भारत समाचार | Bharat Samachar (@bstvlive) November 26, 2024
➡मासूम को बाल पकड़ कर खींचने के बाद ,डंडे से पीटा
➡पिटाई का वीडियो सोशल मिडिया में जमकर वायरल
➡कक्षा 2 की छात्रा से पढ़ाई के दौरान नाराज टीचर ने पीटा
➡सौरिख थाना क्षेत्र के खड़िनी क्षेत्र का बताया जा रहा वीडियो.… pic.twitter.com/EEjTgUBy3i
ನಂತರ ಶಿಕ್ಷಕನು ಬಾಲಕಿಯ ಎರಡೂ ಕೈಯನ್ನು ಹಿಡಿದು ಎಳೆದುಕೊಂಡು ಬಾಗಿಲ ಬಳಿ ಕುರ್ಚಿ ಹಾಕಿಕೊಂಡು ಕುಳಿತುಕೊಂಡಿದ್ದಾನೆ. ಆಗ ಬಾಲಕಿ ಶಿಕ್ಷಕನಿಂದ ತಪ್ಪಿಸಿಕೊಂಡು ಮಂಚದ ಕೆಳಗೆ ಹೋಗಿ ಅವಿತುಕೊಂಡಿದ್ದಾಳೆ. ಆಗ ಶಿಕ್ಷಕಕನು ಇನ್ನೊಬ್ಬ ವಿದ್ಯಾರ್ಥಿಯ ಬಳಿ ಬಾಲಕಿಯನ್ನು ಎಳೆದು ತರಲು ಹೇಳಿದ್ದಾನೆ. ಆ ವಿದ್ಯಾರ್ಥಿಯು ಬಾಲಕಿಯ ಕೈ ಹಿಡಿದು ಹೊರಗೆ ಎಳೆದಿದ್ದಾನೆ. ಬಾಲಕಿ ಮತ್ತೆ ತಪ್ಪಿಸಿಕೊಂಡು ಮಂಚದ ಕೆಳಗೆ ಅವಿತುಕೊಂಡಿದ್ದಾಗ ಶಿಕ್ಷಕನು ಬಾಲಕಿಯ ಎರಡೂ ಕಾಲುಗಳನ್ನು ಹಿಡಿದು ಹೊರಗೆ ಎಳೆದಿದ್ದಾನೆ.
ಇದನ್ನೂ ಓದಿ: 14 ವರ್ಷಗಳ ಬಳಿಕ ಬೆಂಗಳೂರು ತೊರೆದ ಉದ್ಯಮಿ ಸಿಲಿಕಾನ್ ಸಿಟಿ ಬಗ್ಗೆ ಹೇಳಿದ್ದೇನು ಗೊತ್ತಾ? ಈ ಪೋಸ್ಟ್ ಭಾರೀ ವೈರಲ್
ಬಾಲಕಿಯನ್ನು ಥಳಿಸಿದ್ದಕ್ಕಾಗಿ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆಯಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ವೈರಲ್ ವೀಡಿಯೊವನ್ನು ಸಹ ಪರಿಶೀಲಿಸುತ್ತಿದ್ದಾರೆ. ವೈರಲ್ ವೀಡಿಯೊಗೆ ಉತ್ತರಿಸಿದ ಕಾನ್ಪುರ ವಲಯದ ಎಡಿಜಿ ಈ ಬಗ್ಗೆ ತನಿಖೆ ನಡೆಸುವಂತೆ ಕನೌಜ್ ಪೊಲೀಸರಿಗೆ ಆದೇಶಿಸಿದ್ದಾರೆ.