ವಾಷಿಂಗ್ಟನ್: ಭಾರತದ 2ನೇ ಅತಿ ದೊಡ್ಡ ಶ್ರೀಮಂತ, ಅದಾನಿ ಗ್ರೂಪ್ (Adani Group) ಅಧ್ಯಕ್ಷ ಗೌತಮ್ ಅದಾನಿ (Gautam Adani), ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವಿನೀತ್ ಜೈನ್ ಅವರ ವಿರಿದ್ಧ ಅಮೆರಿಕದಲ್ಲಿ ಯಾವುದೇ ಲಂಚದ ಪ್ರಕರಣ ದಾಖಲಾಗಿಲ್ಲ ಎಂದು ಅದಾನಿ ಗ್ರೂಪ್ ಹೇಳಿದೆ. ಅದಾನಿ ಗ್ರೂಪ್‌ನ ಅಧೀನದಲ್ಲಿರುವ ಅದಾನಿ ಗ್ರೀನ್ ಕೂಡ ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ದ ಕೇಳಿ ಬಂದ ಲಂಚದ ಆರೋಪವನ್ನು ನಿರಾಕರಿಸಿದೆ.
ʼʼಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಅಮೆರಿಕದ ಫಾರಿನ್ ಕರಪ್ಟ್ ಪ್ರಾಕ್ಟೀಸಸ್ ಆ್ಯಕ್ಟ್ (Foreign Corrupt Practices Act-FCPA) ಉಲ್ಲಂಘನೆಯ ಆರೋಪ ಹೊರಿಸಲಾಗಿಲ್ಲ” ಎಂದು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಸ್ಪಷ್ಟನೆ ನೀಡಿದೆ.
Former Attorney General Rohatgi says no bribery charges against Gautam Adani, nephew in US indictment
— ANI Digital (@ani_digital) November 27, 2024
Read @ANI Story |https://t.co/n7yYdkayUu#Rohatgi #GautamAdani pic.twitter.com/4HMngaKmHG
ಸ್ಪಷ್ಟನೆಯಲ್ಲಿ ಏನಿದೆ?
“ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಎಫ್‌ಸಿಪಿಎ ಉಲ್ಲಂಘನೆಯ ಯಾವುದೇ ಆರೋಪವನ್ನು ಹೊರಿಸಲಾಗಿಲ್ಲ” ಎಂದು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ (Department of Justice) ದೋಷಾರೋಪಣೆ ಮತ್ತು ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಸಿವಿಲ್ ದೂರಿನಲ್ಲಿನ ಆರೋಪಗಳು ಲಂಚ ಅಥವಾ ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ. ಕೇಳಿ ಬಂದಿರುವ ಆರೋಪಗಳು ಎಫ್‌ಸಿಪಿಎಯ ಯಾವುದೇ ನಿಯಮಗಳ ಉಲ್ಲಂಘನೆಯನ್ನು ಒಳಗೊಂಡಿಲ್ಲ ಎಂದಿದೆ. ಅದಾನಿ ವಿರುದ್ಧ ಅಮೆರಿಕದ ವಿದೇಶಿ ಭ್ರಷ್ಟಾಚಾರ ಕಾಯ್ದೆಯಡಿ ಲಂಚದ ಆರೋಪ ಹೊರಿಸಲಾಗಿಲ್ಲ. ಅಮೆರಿಕದಲ್ಲಿ ಹೊರಿಸಲಾಗಿರುವ ದೋಷಾರೋಪಗಳು ಸೆಕ್ಯುರಿಟೀಸ್ ಮತ್ತು ವಂಚನೆಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದೆ.
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳನ್ನು ಎಜಿಇಎಲ್ ತಳ್ಳಿ ಹಾಕಿದೆ. ಇವು ತಪ್ಪಾದ ಮಾಹಿತಿ ಮೂಲಕ ಜನರ ದಾರಿ ತಪ್ಪಿಸುತ್ತಿವೆ ಎಂದಿದೆ. ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ ಎನ್ನುವ ಇತ್ತೀಚಿನ ವರದಿಗಳು ಕೋಲಾಹಲವನ್ನು ಉಂಟು ಮಾಡಿದ್ದವು. ಹೀಗಾಗಿ ಎಜಿಇಎಲ್ ಸ್ಪಷ್ಟೀಕರಣ ನೀಡಿದೆ. ಅಮೆರಿಕದಲ್ಲಿ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತಿರುವುದರಿಂದ ಮಾರುಕಟ್ಟೆ ವೀಕ್ಷಕರು ಈ ಪ್ರಕರಣದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Adani Group: ವಿವಾದದ ಮಧ್ಯೆ ದಾಖಲೆಯ 5 ಲಕ್ಷ ಕೋಟಿ ರೂ. ಆಸ್ತಿ ಘೋಷಿಸಿದ ಅದಾನಿ ಗ್ರೂಪ್