Wednesday, 27th November 2024

Viral Video: ಇರಾನ್‍ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ? ಭಾರತೀಯ ಟ್ರಾವೆಲ್ ವ್ಲಾಗರ್‌ ಹೇಳಿದ್ದೇನು? ಈ ವಿಡಿಯೊ ಫುಲ್‌ ವೈರಲ್‌

Viral Video

‘ಆನ್ ರೋಡ್ ಇಂಡಿಯನ್’ ಹ್ಯಾಂಡಲ್‍ನಲ್ಲಿ ಇಂಡಿಯನ್ ಟ್ರಾವೆಲ್ ವ್ಲಾಗರ್ ಎಂದು ಕರೆಯಲ್ಪಡುವ ವ್ಯಕ್ತಿಯೊಬ್ಬರು  ಇತ್ತೀಚೆಗೆ ತಮ್ಮ ಇರಾನ್ ಪ್ರವಾಸದ ವೇಳೆ ನಡೆದ ಕುತೂಹಲಕಾರಿ ಘಟನೆಯನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವ್ಲಾಗರ್‌ ತನ್ನ ಅನುಭವವನ್ನು ಸಂಪೂರ್ಣ ವಿಡಿಯೊ ಮೂಲಕ ತಿಳಿಸಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವ್ಲಾಗರ್ ಈ ವಿಡಿಯೊವನ್ನು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ.  ಅದರಲ್ಲಿ ಅವರು ಇರಾನ್‍ ಪ್ರಯಾಣದ ವೇಳೆ ತಮಗಾದ ಅನುಭವವನ್ನು ವಿವರಿಸಿದ್ದಾರೆ. ವಿಮಾನ ನಿಲ್ದಾಣದಲ್ಲಾದ ಗೊಂದಲದಿಂದ ಶುರುವಾದ ಒಂದು ಘಟನೆ ಅನಿರೀಕ್ಷಿತ ಅತಿಥಿಯ ಪರಿಚಯಕ್ಕೆ ಕಾರಣವಾಗಿದೆ ಎಂದಿದ್ದಾರೆ. ವ್ಲಾಗರ್, ಅವರು ಇರಾನ್‍ ಪ್ರವಾಸದ ಸಮಯರ  ಇಂಟರ್ನೆಟ್ ಸಿಗದೆ ಬಹಳ ಸಮಸ್ಯೆಗೆ ಒಳಗಾಗಿದ್ದಾರಂತೆ.  ಸ್ಥಳೀಯ ಸಿಮ್ ಕಾರ್ಡ್ ಮತ್ತು ಕೆಲವು ಅಪ್ಲಿಕೇಶನ್‍ಗಳಿಗೆ ಪ್ರವೇಶವಿಲ್ಲದ ಕಾರಣ ಅವರಿಗೆ  ತಮ್ಮ ಪ್ರಯಾಣದ ಯೋಜನೆಗಳನ್ನು ಸರಿಯಾಗಿ ನಿಭಾಯಿಸಲು ಕಷ್ಟವಾಗಿದೆಯಂತೆ.

ಟೆಹ್ರಾನ್ ವಿಮಾನ ನಿಲ್ದಾಣದಲ್ಲಿ ಅವರು ಮೊದಲ ದಿನ, ಇಂಟರ್ನೆಟ್ ಸಂಪರ್ಕ, ಸಿಮ್ ಕಾರ್ಡ್‍ಗಳು ಮತ್ತು ವಿಪಿಎನ್ ಸೆಟಪ್‍ಗಳಿಲ್ಲದೇ ತೊಂದರೆಗಳನ್ನು ಎದುರಿಸಿದ್ದಾರೆ. ಆಗ ಅವರು ಇರಾನ್‍ನಲ್ಲಿ ಅಧ್ಯಯನ ಮಾಡುತ್ತಿರುವ ಪಾಕಿಸ್ತಾನಿ ವಿದ್ಯಾರ್ಥಿ ಹುಸೇನ್ ಅವರ ಪರಿಚಯವಾಗಿ ತೊಂದರೆಗಳನ್ನೆಲ್ಲಾ ನಿಭಾಯಿಸಲು ಹುಸೇನ್ ಇವರಿಗೆ ಸಹಾಯ ಮಾಡಿದ್ದ. ವಿಪಿಎನ್ ಅನ್ನು ಸರಿಪಡಿಸಲು ವ್ಲಾಗರ್‌ಗೆ  ಹೆಚ್ಚು ಸಮಯ ಬೇಕಾಗಿದ್ದರಿಂದ  ಹುಸೇನ್‌ ವ್ಲಾಗರ್‌ ಅನ್ನು ತಮ್ಮ ಮನೆಗೆ ಆಹ್ವಾನಿಸಿ,  ಅಲ್ಲಿ ಆರಾಮದಾಯಕ ಸೆಟ್ಟಿಂಗ್ ಮಾಡಲು ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮೊದಲಿಗೆ ಹಿಂಜರಿದರೂ, ಸಹಾಯದ ಅಗತ್ಯವಿರುವ ವ್ಲಾಗರ್, ಅವರೊಂದಿಗೆ ಹೋಗಲು ಒಪ್ಪಿಕೊಂಡಿದ್ದಾರಂತೆ.

ಹುಸೇನ್ ಅವರ ಮನೆಯನ್ನು ಸಮೀಪಿಸುತ್ತಿದ್ದಂತೆ, ವ್ಲಾಗರ್‌ಗೆ ಅನುಮಾನ ಶುರುವಾಗಿತ್ತಂತೆ. ಈಗಷ್ಟೇ ಭೇಟಿಯಾದ ವ್ಯಕ್ತಿಯನ್ನು ನಂಬಬಹುದೇ ಎಂದು ಗೊಂದಲಕ್ಕೊಳಗಾಗಿದ್ದರಂತೆ. ಈ ಕುರಿತು ವ್ಲಾಗರ್ ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮುಂದೆ ಏನಾಯಿತು ಎಂದು ಕೇಳಿದರೆ ನಿಮಗೆ  ಆಶ್ಚರ್ಯವಾಗುತ್ತದೆ. ಪಾಕಿಸ್ತಾನಿ ವಿದ್ಯಾರ್ಥಿ ವ್ಲಾಗರ್‌ಗೆ ಸಹಾಯ ಮಾಡಲು ಬಹಳ ಪ್ರಯತ್ನ ಮಾಡಿದ್ದಾರಂತೆ.  ಸಿಮ್ ಕಾರ್ಡ್ ಹುಡುಕಲು  ತಮ್ಮ ಇಡೀ ಮನೆಯನ್ನು ಹುಡುಕಾಡಿ ವ್ಲಾಗರ್‌ಗೆ ಸಹಾಯ ಮಾಡಿದ್ದಾರಂತೆ.

ಇದನ್ನೂ ಓದಿ: ನೋಟು ಕದ್ದ ಕಳ್ಳನನ್ನು ಹಿಡಿಯಲು ಕುದುರೆಯಿಂದ ಜಿಗಿದು ಬೆನ್ನಟ್ಟಿದ ವರ; ವಿಡಿಯೊ ನೋಡಿ!

ವ್ಲಾಗರ್ ತನ್ನ ಯೂಟ್ಯೂಬ್ ಹ್ಯಾಂಡಲ್‍ನಲ್ಲಿ ಸಂಪೂರ್ಣ ಅನುಭವವನ್ನು ಪೋಸ್ಟ್ ಮಾಡಿ, “ಇರಾನ್ ವಿಮಾನ ನಿಲ್ದಾಣದಲ್ಲಿ, ಇಂಟರ್ನೆಟ್ ಸಮಸ್ಯೆಗಳಿಂದಾಗಿ ನಾನು ಏನೂ ತೋಚದೆ  ಅಸಹಾಯಕನಾಗಿದ್ದೆ. ಈ ವ್ಯಕ್ತಿ ದೇವರಂತೆ ಕಾಣಿಸಿಕೊಂಡರು… ಆದರೆ ಅವರ ಮನೆಗೆ ತಲುಪಿದ ನಂತರ ಏನಾಯಿತು?” ಎಂದು ಶೀರ್ಷಿಕೆ ನೀಡಿದ್ದು, ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದೆ.  ವಿದೇಶದಲ್ಲಿ ವ್ಲಾಗರ್‌ಗೆ ಸಹಾಯ ಮಾಡಿದ ಪಾಕಿಸ್ತಾನಿ ವಿದ್ಯಾರ್ಥಿಯನ್ನು ಅನೇಕರು ಶ್ಲಾಘಿಸಿದ್ದಾರೆ. ಯೂಟ್ಯೂಬ್‍ನಲ್ಲಿ ಶೇರ್ ಮಾಡಲಾದ ಈ ವಿಡಿಯೊ 20,000 ವೀಕ್ಷಣೆಗಳನ್ನು ಮತ್ತು ಇನ್ಸ್ಟಾಗ್ರಾಂನಲ್ಲಿ 800 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.