ನವದೆಹಲಿ: ಕ್ರಿಕೆಟ್ ಪಂದ್ಯದಲ್ಲಿ ತಲೆಗೆ ಚೆಂಡು ಬಡಿದು ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್ ಹ್ಯೂಸ್ (Phillip Hughes) ಅಗಲಿದ್ದ ಘಟನೆಗೆ ಇದೀಗ 10 ವರ್ಷಗಳು ತುಂಬಿವೆ. ಈ ಶಾಕಿಂಗ್ ಘಟನೆಯಿಂದ ಇಡೀ ಕ್ರಿಕೆಟ್ ಜಗತ್ತು ಅಂದು ಕಂಬನಿ ಮಿಡಿದಿತ್ತು. ಕ್ರಿಕೆಟ್ ಇತಿಹಾಸದಲ್ಲಿಯೇ ಮರೆಯಾಗದ ಅತ್ಯಂತ ದುಖಃಕರ ಘಟನೆ ಇದಾಗಿದೆ. ನವೆಂಬರ್ 27 ರಂದು ಫಿಲ್ ಹ್ಯೂಸ್ ಅವರ 10 ವರ್ಷಗಳ ಪುಣ್ಯ ಸ್ಮರಣೆಯಾಗಿದ್ದು ಕ್ರಿಕೆಟ್ ಆಸ್ಟ್ರೇಲಿಯಾ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಗೌರವ ಸಲ್ಲಿಸಿದ್ದಾರೆ.
2024ರ ನವೆಂಬರ್ 25 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಶೆಫಿಲ್ಡ್ ಶೀಲ್ಡ್ ಪಂದ್ಯದಲ್ಲಿ ಸೌಥ್ ವೇಲ್ಸ್ ಪರ ಫಿಲ್ ಹ್ಯೂಸ್ ಅದ್ಬುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಅಜೇಯ 63 ರನ್‌ಗಳನ್ನು ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದರು. ಈ ವೇಳೆ ನ್ಯೂ ಸೌಥ್ ವೇಲ್ಸ್ ತಂಡದ ವೇಗಿ ಶಾನ್ ಎಬಾಟ್ ಎಸೆದಿದ್ದ ಶಾರ್ಟ್ ಬಾಲ್ ಅನ್ನು ತಪ್ಪಿಸಿಕೊಳ್ಳಲು ಫಿಲಿಪ್ ಹ್ಯೂಸ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೂ ಚೆಂಡು ಫಿಲ್ ಹ್ಯೂಸ್ ಅವರ ಕುತ್ತಿಗೆ ಭಾಗಕ್ಕೆ ಬಲವಾಗಿ ತಗುಲಿತ್ತು ಹಾಗೂ ಅವರು ತನ್ನ ನೋವು ತಾಳಲಾರದೆ ತಕ್ಷಣ ಪಿಚ್ ಮೇಲೆಯೇ ಹುರುಳಿದ್ದರು.
Australian Umpire: ಚೆಂಡು ಬಡಿದು ಗಂಭೀರ ಗಾಯಗೊಂಡ ಆಸ್ಟ್ರೇಲಿಯನ್ ಅಂಪೈರ್
ಚೆಂಡು ಕುತ್ತಿಗೆ ಭಾಗದಲ್ಲಿ ಬಲವಾಗಿ ತಗುಲಿದ್ದ ಕಾರಣ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು ಹಾಗೂ ತುರ್ತು ಶಸ್ತ್ರ ಚಿಕಿತ್ಸೆಗಾಗಿ ಅವರನ್ನು ತಕ್ಷಣ ಸೇಂಟ್ ವಿನ್ಸೆಂಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಎಷ್ಟೇ ಪ್ರಯತ್ನ ನಡೆಸಿದ್ದರೂ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಫಿಲ್ ಹ್ಯೂಸ್ ನವೆಂಬರ್ 27 ರಂದು ಕೊನೆಯುಸಿರೆಳೆದಿದ್ದರು. ಈ ಘಟನೆಯಿಂದ ಇಡೀ ಕ್ರಿಕೆಟ್ ಜಗತ್ತು ಆಘಾತಕ್ಕೀಡಾಗಿತ್ತು. ಜಗತ್ತಿನಾದ್ಯಂತ ಕ್ರಿಕೆಟಿಗರು, ಅಭಿಮಾನಿಗಳು ಫಿಲ್ ಹ್ಯೂಸ್‌ಗಾಗಿ ಕಂಬನಿ ಮಿಡಿದ್ದರು.
Forever 63 not out. Forever in our hearts.
— Cricket Australia (@CricketAus) November 26, 2024
10 years on, we remember Phillip Hughes. pic.twitter.com/TxN1TWwXxM
ಫಿಲಿಪ್ ಹ್ಯೂಸ್ ಮರಣದ ಬಳಿಕ ಹೆಲ್ಮೆಟ್‌ನಲ್ಲಿ ಬದಲಾವಣೆ
ಫಿಲಿಪ್ ಹ್ಯೂಸ್ ಅವರ ಮರಣದ ಬಳಿಕ ಕ್ರಿಕೆಟ್‌ನಲ್ಲಿ ಆಟಗಾರರು ಬಳಸುವ ಸಲಕರಣೆಗಳ ಸಂರಕ್ಷಣೆಯನ್ನು ಹೆಚ್ಚಿಸಲಾಯಿತು. ವಿಶೇಷವಾಗಿ ಹೆಲ್ಮೆಟ್‌ನ ಹಿಂಭಾಗದಲ್ಲಿ ಕುತ್ತಿಗೆ ಭಾಗಕ್ಕೂ ಸಂರಕ್ಷಣೆಯನ್ನು ನೀಡುವ ಪರಿಕರಣವನ್ನು ಜೋಡಿಸಲಾಯಿತು. ಆ ಮೂಲಕ ಭವಿಷ್ಯದಲ್ಲಿ ಈ ರೀತಿಯ ಅವಗಢಗಳು ಸಂಭವಿಸದಂತೆ ಹೆಚ್ಚಿನ ಕಾಳಜಿಯನ್ನು ವಹಿಸಲಾಯಿತು.
27 Nov the Black day in cricket history..
— SK Thakur (@SKThakurTweet) November 27, 2024
Phillip Hughes Never forget — 63 not out 🤍 pic.twitter.com/4JxqInALdQ
ಹ್ಯೂಸ್ ಸಾವಿನ ನಂತರದ ಘಟನೆಗಳು ಕ್ರಿಕೆಟ್‌ನಲ್ಲಿ ಏಕತೆಯ ಮನೋಭಾವವನ್ನು ಎತ್ತಿ ತೋರಿಸಿದೆ. ನ್ಯೂ ಸೌಥ್ ವೇಲ್ಸ್‌ನ ಮ್ಯಾಕ್ಸ್‌ವಿಲ್ಲೆಯಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಕ್ರಿಕೆಟಿಗರು, ಅಭಿಮಾನಿಗಳು ಮತ್ತು ಗಣ್ಯರು ಭಾಗವಹಿಸಿ ಗೌರವ ಸಲ್ಲಿಸಿದ್ದರು. ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಕ್ರಿಕೆಟ್ ರಾಷ್ಟ್ರಗಳಲ್ಲಿ ಆಟಗಾರರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುವ ಮೂಲಕ ಆಸೀಸ್ ಕ್ರಿಕೆಟಿಗನಿಗೆ ಅಂತಿಮ ನಮನ ಸಲ್ಲಿಸಿದ್ದರು.
Phillip Joel Hughes was laid to rest in his beloved Macksville today http://t.co/7n7R1uX4wa #63notout pic.twitter.com/kgx8h7VFTa
— ICC (@ICC) December 3, 2014
ಫಿಲ್ ಹ್ಯೂಸ್‌ಗೆ ಗೌರವ ಸಲ್ಲಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
ಫಿಲಿಪ್ ಹ್ಯೂಸ್ ಅವರ 10 ವರ್ಷಗಳ ಪುಣ್ಯ ಸ್ಮರಣೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಗೌರವ ಸಲ್ಲಿಸಿದೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ “ಅಜೇಯ 63 ರನ್‌ಗಳು ಎಂದೆಂದಿಗೂ ಅಮರ. 10 ವರ್ಷಗಳ ಫಿಲಿಪ್ ಹ್ಯೂಸ್ ಅವರ ಪುಣ್ಯ ಸ್ಮರಣೆ,” ಎಂದು ಆಸೀಸ್ ಆಟಗಾರನ ಫೋಟೋಗೆ ಕ್ರಿಕೆಟ್ ಆಸ್ಟ್ರೇಲಿಯಾ ಈ ರೀತಿಯ ಶೀರ್ಷಿಕೆಯನ್ನು ನೀಡಿದೆ.