ಚಿಕ್ಕಬಳ್ಳಾಪುರ : ಭಾರತ ಸರ್ಕಾರವು ಪ್ರಧಾನಮಂತ್ರಿ ಮತ್ಸ್ಯಕಿಸಾನ್ ಸಮೃದ್ದಿ ಸಹಯೋಜನೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಮೀನುಗಾ ರಿಕೆ ವಲಯದ ಅಭಿವೃದ್ದಿ ಹಾಗೂ ಮೀನುಗಾರಿಕೆ ಕ್ಷೇತ್ರದಲ್ಲಿ ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ೨೦೨೩-೨೪ನೇ ಸಾಲಿ ನಿಂದ ೨೦೨೬-೨೭ನೇ ಸಾಲಿನವರೆಗೆ ೪ ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ೬ ಸಾವಿರ ಕೋಟಿ ರೂಪಾಯಿ ಹೂಡಿಕೆ ಯೊಂದಿಗೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಪ್ರಸ್ತುತ ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಡಿಜಟಲೀಕರಣಗೊಳಿಸಿ ಸಂಘಟಿತ ವಲಯವನ್ನಾಗಿ ಮಾಡಲು ಯೋಜನೆ ಯಡಿ ಮೀನುಗಾರರು, ಮೀನು ಕೃಷಿಕರು, ಮೀನು ಮಾರಾಟಗಾರರು ಹಾಗೂ ಮೀನುಗಾರಿಕೆ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿ ರುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ನೋಂದಾಯಿಸಲು ನ್ಯಾಷನಲ್ ಫಿಷರಿಸ್ಡಿಜಿಟಲ್ ಪ್ಲಾಟ್ ಫಾರಂ ಅನ್ನು ಸ್ಥಾಪಿಸಿದ್ದು ಈ ಮೂಲಕ ಸ್ವಯಂ ನೋಂದಣಿ ಅಥವಾ ನೋಂದಣಿ ಕೇಂದ್ರದಲ್ಲಿ ಸಹಾಯದೊಂದಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ.
ಈ ಒಂದು ವೇದಿಕೆಯ ಮೂಲಕ ಯೋಜನೆಯ ಘಟಕಗಳನ್ನು ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಸದರಿ ವೇದಿಕೆಯಲ್ಲಿ ನೋಂದಣಿಯಾದ ವ್ಯಕ್ತಿ ಸಂಸ್ಥೆಗಳ ನೈಜತೆಯನ್ನು ಪರಿಶೀಲಿಸುವ ಕ್ರಮಗಳನ್ನು ಸಹ ಅಳವಡಿಸಲಾಗಿದೆ. ಈ ವೇದಿಕೆಯ ಮೂಲಕ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬ0ಧಿಸಿದ ವಿವಿಧ ಸೇವೆಗಳನ್ನು ಒದಗಿಸುವ ಉದ್ದೇಶವು ಸಹ ಇದೆ. ಮೀನುಗಾರಿಕೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಈ ಕೆಳಗೆನ ಮೂದಿಸಿರುವ ವ್ಯಕ್ತಿ/ಸಂಸ್ಥೆಗಳು ನ್ಯಾಷನಲ್ ಫಿಷರಿಸ್ಡಿಜಿಟಲ್ ಪ್ಲಾಟ್ ಫಾರಂಅಲ್ಲಿ ನೊಂದಾಯಿಸಲು ಅರ್ಹರಿರುತ್ತಾರೆ.
೧. ಮೀನುಗಾರರು,ಮೀನುಕೃಷಿಕರು,ಮೀನು ಮಾರಾಟಗಾರರು ಹಾಗೂ ಸಹ ಕಾರ್ಮಿಕರು
೨. ಮೀನುಗಾರಿಕೆ ಮತ್ತು ಜಲಕೃಷಿ, ಸಣ್ಣ ಮತ್ತು ಅತೀಸಣ್ಣ ಉದ್ಯಮಗಳು
೩. ಮೀನುಗಾರಿಕೆ ಸಹಕಾರ ಸಂಸ್ಥೆಗಳು/ ಮೀನು ಕೃಷಿ ಉತ್ಪಾದಕ ಸಂಸ್ಥೆಗಳು ಮೀನುಗಾರಿಕೆ ಮತ್ತು ಮೀನುಕೃಷಿಯಲ್ಲಿ ತೊಡಗಿಸಿಕೊಂಡಿರುವ ಇತರೆ ಸಂಸ್ಥೆಗಳು ಮತ್ತು ಕಂಪನಿಗಳು ಇತ್ಯಾದಿ
ನೊಂದಾಯಿಸಲು ಅಗತ್ಯ ದಾಖಲೆಗಳು
೧) ವ್ಯಕ್ತಿಗತ ನೋಂದಣಿ
ಆಧಾರ್ ಕಾರ್ಡ್
ಮೊಬೈಲ್ ಸಂಖ್ಯೆ
ವಿಳಾಸಪುರಾವೆ
೨) ಸAಸ್ಥೆಗಳ ನೋಂದಾಣಿ
ಸAಸ್ಥೆಗೆ ಸಂಬAಧಪಟ್ಟ ದಾಖಲೆಗಳು
ಸಂಸ್ಥೆಯ ಪ್ರತಿನಿಧಿಯ ಡಿಜಿಟಲ್ ಸಿಗ್ನೇಚರ್ ಪ್ರಮಾಣ
೩) ಗುರುತು ಹಾಗೂ ವಿಳಾಸ ಪುರಾವೆಗಳು
ಸ್ವಯಂ ನೋಂದಾಯಿಸಿಕೊಂಡ ಪ್ರತಿಯೊಬ್ಬರಿಗೂ ರೂ.೧೦೦ ಸಂಭಾವನೆಯನ್ನು ಕೇಂದ್ರ ಸರ್ಕಾರದ ಮೀನುಗಾರಿಕೆ ಇಲಾಖೆ ಖಾತೆಯಿಂದ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.ಒಂದು ವೇಳೆ ಅSಅ ನೋಂದಣಿ ಕೇಂದ್ರಗಳಗೆ ನೋಂದಯಿಸಿಕೊAಡಲ್ಲಿ ರೂ.೮೦ ಫಲಾನುಭವಿಗೆ ಹಾಗೂ ಅSಅ ಕೇಂದ್ರಗಳಗೆ ರೂ.೨೦ ಪಾವತಿಸಲಾಗುವುದು.ಸ್ವಯಂ ನೋಂದಣಿ ಮಾಡಿಕೊಳ್ಳಲು ಅಂತರ್ಜಾಲತಾಣಕ್ಕೆ ಭೇಟಿ ನೀಡಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್(ಕೆ.ಸಿ.ಸಿ) ಯೋಜನೆ
ಅರ್ಹ ಮೀನುಗಾರರಿಗೆ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳವಸಲುವಾಗಿ ವಿವಿಧ ಬ್ಯಾಂಕ್ಗಳಿAದ ಕಡಿಮೆ ಬಡ್ಡಿದರದಲ್ಲಿ ನೀಡಲಾಗುವುದು.
ನೀಡಬೇಕಾದ ದಾಖಲೆಗಳು ಬ್ಯಾಂಕ್ ಆಕ್ಷೇಪಿಸುವ ಏಙಅ ಎಲ್ಲಾ ದಾಖಲಾತಿಗಳು ಮತ್ತು ಕೈಗೊಂಡಿರುವ ಮೀನುಗಾರಿಕೆ ಚಟುವಟಿಕೆಗಳ ವಿವರಣೆ
ಹೆಚ್ಚಿನ ವಿವರಗಳಿಗೆ ಹತ್ತಿರದ ಮೀನುಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸುವುದು ಅಥವಾ ಮೀನುಗಾರಿಕೆ ಸಹಾಯವಾಣಿ ೮೨ ೭೭ ೨೦೦೩೦೦ ನ್ನು ಸಂಪರ್ಕಿಸಬಹುದೆAದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.