ಮನೆಯಲ್ಲಿ ಪ್ರತಿಯೊಂದು ವಸ್ತುವನ್ನು ಇಡಲು ನಿರ್ದಿಷ್ಟ ಸ್ಥಳ ಎಂಬುದು ಇದೆ. ವಾಸ್ತು ನಿಯಮಗಳ (Vastu Tips) ಪ್ರಕಾರ ಇದನ್ನು ಪಾಲಿಸಿದರೆ ಮನೆ ಸಂತೋಷ, ಸಮೃದ್ಧಿಯ ತಾಣವಾಗುತ್ತದೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ಮೂರು ವಸ್ತುಗಳನ್ನು ಇಡುವುದು ಒಳ್ಳೆಯದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ವಾಸ್ತು ನಿಯಮ ಮತ್ತು ತತ್ತ್ವಗಳು ಬದುಕಿನ ಸಮಸ್ಯೆಗಳನ್ನು ತೊಡೆದು ಹಾಕಲು ಮತ್ತು ಸಂತೋಷದ ಜೀವನವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ತತ್ತ್ವಗಳನ್ನು ಪಾಲಿಸುವುದರಿಂದ ಮನೆಯನ್ನು ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯ ತಾಣವನ್ನಾಗಿ ಮಾಡಬಹುದು.
ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಕಾದ ವಸ್ತುಗಳು ಈ ಮೂರು. ಇದು ಮನೆಗೆ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ತರುತ್ತದೆ.
ಫೀನಿಕ್ಸ್ ಪಕ್ಷಿಯ ಚಿತ್ರ
ಮನೆಯ ದಕ್ಷಿಣ ದಿಕ್ಕಿನಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವನ್ನು ಇಡುವುದು ಮನೆಗೆ ಐಶ್ವರ್ಯ ಮತ್ತು ಸಮೃದ್ಧಿಯನ್ನು ತರುತ್ತದೆ.
ಇದು ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಸ್ವಾಗತಿಸಲು ಸಹಾಯ ಮಾಡುತ್ತದೆ. ಮಂಗಳಕರ ಫಲಿತಾಂಶಗಳಿಗಾಗಿ ಅದನ್ನು ಲಿವಿಂಗ್ ರೂಮಿನಲ್ಲಿ ಇರಿಸಬಹುದು.
ಪೊರಕೆ
ಮನೆಯ ಕಸ ತೆಗೆಯುವ ಪೊರಕೆಯನ್ನು ಯಾವತ್ತೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಇಡಬೇಕು.
ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಎಂದಿಗೂ ಪೊರಕೆಯನ್ನು ಅಗೌರವಗೊಳಿಸಬಾರದು. ಪೊರಕೆಯನ್ನು ಎಂದಿಗೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ. ಇದನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿದರೆ ಮನೆಯಲ್ಲಿ ಸಂತೋಷ ತುಂಬಿರುತ್ತದೆ.
Vastu Tips: ಮನೆ, ಕಚೇರಿಯಲ್ಲಿ ಕಾಮಧೇನು ವಿಗ್ರಹ ಇಟ್ಟರೆ ಎಲ್ಲವೂ ಸುಗಮ!
ಜೇಡ್ ಸಸ್ಯ
ಲಕ್ಕಿ ಪ್ಲಾಂಟ್ ಎಂದು ಕರೆಯಲ್ಪಡುವ ಜೇಡ್ ಸಸ್ಯವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಇದು ಆರ್ಥಿಕವಾಗಿ ಮನೆಗೆ ಲಾಭವನ್ನು ತರುತ್ತದೆ. ಹಣದ ಲಾಭಕ್ಕಾಗಿ ಮನೆಯ ಹಾಲ್ ಅಥವಾ ಡ್ರಾಯಿಂಗ್ ರೂಮ್ನ ಆಗ್ನೇಯ ದಿಕ್ಕಿನಲ್ಲಿ ಜೇಡ್ ಗಿಡವನ್ನು ಇಡುವುದು ಉತ್ತಮ.
ಈ ದಿಕ್ಕನ್ನು ಶುಕ್ರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಜೇಡ್ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಬಹುದು.