ನವದೆಹಲಿ: ಪರ್ತ್ ಟೆಸ್ಟ್ ಪಂದ್ಯದಲ್ಲಿ (IND vs AUS) ಭರ್ಜರಿ ಶತಕವನ್ನು ಸಿಡಿಸಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗುಣಗಾನ ಮಾಡಿದ್ದಾರೆ. ಯುವ ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ವೃತ್ತಿ ಜೀವನದಲ್ಲಿ 40 ಟೆಸ್ಟ್ ಶತಕಗಳನ್ನು ಸಿಡಿಸಲಿದ್ದಾರೆಂದು ಮ್ಯಾಕ್ಸಿ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ ಪರ್ತ್‌ನಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರು ಮನಮೋಹಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ 297 ಎಸೆತಗಳಲ್ಲಿ 161 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಭಾರತ ತಂಡದ ಭರ್ಜರಿ ಗೆಲುವು ಪಡೆದಿತ್ತು.
Yashasvi Jaiswal: ವಿಶ್ವ ದಾಖಲೆ ಸನಿಹ ಯಶಸ್ವಿ ಜೈಸ್ವಾಲ್
ಜೈಸ್ವಾಲ್ 40 ಟೆಸ್ಟ್ ಶತಕಗಳನ್ನು ಸಿಡಿಸಲಿದ್ದಾರೆ: ಮ್ಯಾಕ್ಸ್‌ವೆಲ್
“ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿ ಜೀವನದಲ್ಲಿ 40 ಕ್ಕೂ ಅತಿ ಹೆಚ್ಚು 40 ಶತಕಗಳನ್ನು ಸಿಡಿಸಲಿದ್ದಾರೆ ಹಾಗೂ ಕೆಲ ವಿಭಿನ್ನ ದಾಖಲೆಗಳನ್ನು ಕೂಡ ಅವರು ಬರೆಯಲಿದ್ದಾರೆ. ವಿಭಿನ್ನ ಕಂಡೀಷನ್ಸ್‌ಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ಜೈಸ್ವಾಲ್‌ರನ್ನು ನಿಯಂತ್ರಿಸಿಲ್ಲವಾದರೆ, ತುಂಬಾ ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ,” ಎಂದು ಪ್ಯಾಟ್ ಕಮಿನ್ಸ್ ಪಡೆಗೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಎಚ್ಚರಿಕೆ ನೀಡಿದ್ದಾರೆ.
“ಅವರು ತುಂಬಾ ಶಾಟ್‌ಗಳನ್ನು ಆಡಿದ್ದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಇದರ ಜತೆಗೆ ಚೆಂಡನ್ನು ಮುಂದಕ್ಕೆ ಬಿಡುವುದು ಹಾಗೂ ಹಿಂದಕ್ಕೆ ಬಿಡುವುದು ಸೇರಿದಂತೆ ಇವರ ಫುಟ್‌ವರ್ಕ್ ಗರಿಗರಿಯಾಗಿದೆ ಹಾಗೂ ಇದರಲ್ಲಿ ಯಾವುದೇ ದೌರ್ಬಲ್ಯ ಇದೆ ಎಂದು ಕಾಣುವುದಿಲ್ಲ. ಶಾರ್ಟ್ ಬಾಲ್‌ಗೆ ಚೆನ್ನಾಗಿ ಹೊಡೆಯುತ್ತಾರೆ, ಡ್ರೈವ್ ಕೂಡ ಚೆನ್ನಾಗಿದೆ ಹಾಗೂ ಸ್ಪಿನ್‌ಗೆ ಅಸಾಧಾರಣವಾಗಿ ಆಡುತ್ತಾರೆ. ಒತ್ತಡದ ಸನ್ನಿವೇಶ ಇರಲಿ ಅಥವಾ ಯಾವುದೇ ವಿಭಿನ್ನ ಸನ್ನಿವೇಶ ಇದ್ದರೂ ಅವರು ಆಡುತ್ತಾರೆ,” ಎಂದು ಗುಣಗಾನ ಮಾಡಿದ್ದಾರೆ ಆಸೀಸ್ ಆಲ್‌ರೌಂಡರ್.
IND vs AUS: ಪರ್ತ್‌ನಲ್ಲಿ ಆಸೀಸ್ ಪತನ; ಭಾರತಕ್ಕೆ ದಾಖಲೆಯ ಗೆಲುವು
ಯಶಸ್ವಿ ಜೈಸ್ವಾಲ್ ಟೆಸ್ಟ್ ಅಂಕಿಅಂಶಗಳು
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ 15 ಟೆಸ್ಟ್ ಪಂದ್ಯಗಳಿಂದ 58.07ರ ಸರಾಸರಿಯಲ್ಲಿ ನಾಲ್ಕು ಶತಕಗಳು ಹಾಗೂ ಎಂಟು ಅರ್ಧಶತಕಗಳ ಮೂಲಕ 1568 ರನ್‌ಗಳನ್ನು ಸಿಡಿಸಿದ್ದಾರೆ. ಇನ್ನು ಪ್ರಸಕ್ತ ವರ್ಷದಲ್ಲಿ ಜೈಸ್ವಾಲ್ ಎರಡನೇ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇವರು ಈ ವರ್ಷ ಆಡಿದ 12 ಟೆಸ್ಟ್ ಪಂದ್ಯಗಳಿಂದ 58.18ರ ಸರಾಸರಿಯಲ್ಲಿ ಮೂರು ಶತಕಗಳು ಹಾಗೂ ಏಳು ಅರ್ಧಶತಕಗಳ ಮೂಲಕ 1280 ರನ್‌ಗಳನ್ನು ಗಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇವೆ. ಆ ಮೂಲಕ ಯಶಸ್ವಿ ಜೈಸ್ವಾಲ್ಲ ಇನ್ನೂ ಎಂಟು ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಲು ಅವಕಾಶವಿದೆ. ಹಾಗಾಗಿ ಅವರು ಇದೇ ಲಯವನ್ನು ಮುಂದುವರಿಸಿದರೆ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಅಂದ ಹಾಗೆ ಮೊದಲನೇ ಟೆಸ್ಟ್ ಪಂದ್ಯದ ಗೆಲುವಿನ ಮೂಲಕ ಭಾರತ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.