ನವದೆಹಲಿ: ಮಹಿಳೆಯರಿಬ್ಬರು ನೃತ್ಯ ಮಾಡುತ್ತಾ ರೀಲ್ಸ್ ಮಾಡುತ್ತಿದ್ದರೆ, ಹಿಂದಿನಿಂದ ಆನೆಯೊಂದು ನೃತ್ಯ ಮಾಡುತ್ತಿರುವಂತೆ ಭಾಸವಾಗುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಕೆಲವು ದಿನಗಳ ಹಿಂದೆ ಭಾರೀ ವೈರಲ್ ಆಗಿತ್ತು. ಇದನ್ನು ನೋಡಿರುವ ಐಎಫ್‌ಎಸ್ ಅಧಿಕಾರಿಯೊಬ್ಬರು ಈ ವಿಡಿಯೊದ ಅಸಲಿಯತ್ತು ಏನೆಂಬುದನ್ನು ತಿಳಿಸಿದ್ದಾರೆ.
ಮಹಿಳೆಯರಿಬ್ಬರು ಆನೆಯ ಎದುರು ಭರತನಾಟ್ಯದ ಹೆಜ್ಜೆ ಹಾಕುತ್ತಿದ್ದರೆ ಹಿಂದಿನಿಂದ ಆನೆಯೊಂದು ನೃತ್ಯ ಮಾಡುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆದರೆ ತಜ್ಞರ ಪ್ರಕಾರ ಆನೆ ನೃತ್ಯ ಮಾಡುತ್ತಿಲ್ಲ. ಅದು ಒತ್ತಡದಿಂದ ಹಾಗೆ ಮಾಡುತ್ತಿದೆ ಎಂದಿದ್ದಾರೆ. ಮಹಿಳೆಯರೊಂದಿಗೆ ಆನೆ ನೃತ್ಯದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಲಕ್ಷಾಂತರ ಮಂದಿ ಇದನ್ನು ಮೆಚ್ಚಿದ್ದಾರೆ.
ಆದರೆ ಇಬ್ಬರು ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳು ಆನೆ ನೃತ್ಯ ಮಾಡುತ್ತಿಲ್ಲ. ಆನೆಯು ಒತ್ತಡಕ್ಕೆ ಒಳಗಾಗಿ ಹಾಗೆ ಮಾಡುತ್ತಿರಬಹುದು ಎಂದು ಹೇಳಿದ್ದಾರೆ.
— Bhoomika Maheshwari (@sankii_memer) November 26, 2024
ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಬಯಲಿನಲ್ಲಿ ಭರತನಾಟ್ಯ ಪ್ರದರ್ಶಿಸುತ್ತಿದ್ದು, ಒಂದು ಆನೆಯನ್ನು ಅವರ ಹಿಂದೆ ಒಂದು ಕಂಬಕ್ಕೆ ಕಟ್ಟಲಾಗಿದೆ. ಮಹಿಳೆಯರು ನೃತ್ಯ ಮಾಡುತ್ತಿರುವಾಗ ಆನೆ ಕೂಡ ಹೆಜ್ಜೆ ಹಾಕಿದಂತೆ ಭಾಸವಾಗುತ್ತಿದೆ. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಆನೆಯ ನೃತ್ಯವನ್ನು ನೋಡಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂರಾರು ಕಾಮೆಂಟ್‌ಗಳ ಜೊತೆಗೆ ಎಕ್ಸ್ ನಲ್ಲಿ ಈ ವಿಡಿಯೋ ಸುಮಾರು 7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋ ಸಂತೋಷ ಕೊಡುವಂತಲ್ಲ ಎಂದಿರುವ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಆನೆಯು ಒತ್ತಡಕ್ಕೊಳಗಾಗಿರಬಹುದು. ಎಲ್ಲರೂ ಭಾವಿಸಿದಂತೆ ಆನೆ ಸಂತೋಷದಲ್ಲಿ ನೃತ್ಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಆ ಆನೆ ಒತ್ತಡಕ್ಕೊಳಗಾಗಿದೆ. ಇದು ನೃತ್ಯದ ಸಂಕೇತವಲ್ಲ ಆದರೆ ಒತ್ತಡ ಎಂದು ಕಸ್ವಾನ್ ಅವರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ.
ಆನೆಗಳನ್ನು ಚಿಕ್ಕ ಆವರಣದಲ್ಲಿ ಸರಪಳಿಗಳಿಂದ ಬಂಧಿಸುವುದರಿಂದ ಅವುಗಳು ಒತ್ತಡ, ಬೇಸರಕ್ಕೆ ಒಳಗಾಗುತ್ತವೆ. ಹೀಗಾಗಿ ಅವುಗಳು ಹಿಂದೆ, ಮುಂದೆ ಚಲಿಸುತ್ತಾ, ತಲೆಯನ್ನು ಅಲ್ಲಾಡಿಸುತ್ತವೆ. ಇದನ್ನು ಸ್ಟೀರಿಯೊಟೈಪಿಕ್ ಬಿಹೇವಿಯರ್ ಎಂದು ಕರೆಯಲಾಗುತ್ತದೆ. ಈ ನಡವಳಿಕೆ ಸಾಮಾನ್ಯವಾಗಿ ಸೆರೆಯಲ್ಲಿರುವ ಆನೆಗಳಲ್ಲಿ ಹೆಚ್ಚಾಗಿ ಗಮನಿಸಬಹುದು.