ಲಖನೌ: ಜನರು ಕೆಲವೊಮ್ಮೆ ಸಂಭ್ರಮಕ್ಕಾಗಿ ಮಾಡುವಂತಹ ಕೆಲಸಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಉತ್ತರ ಪ್ರದೇಶದ ಸಹರಾನ್ಪುರ ಪ್ರದೇಶದಲ್ಲಿ ನಡೆದ ಈ ಘಟನೆ. ಮದುವೆಯ ಮೆರವಣಿಗೆಯ ವೇಳೆ ಯುವಕರಿಬ್ಬರು ಕಾರಿನ ಸನ್ ರೂಫ್ ಮೂಲಕ ಪಟಾಕಿಗಳನ್ನು ಸಿಡಿಸಿದ್ದರಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಮದುವೆಯ ಮೆರವಣಿಗೆ ಸಂದರ್ಭದಲ್ಲಿ ಇಬ್ಬರು ಯುವಕರು ತಮ್ಮ ಕಾರಿನ ಸನ್ರೂಫ್ನಿಂದ ಪಟಾಕಿಗಳನ್ನು ಸಿಡಿಸಿದ್ದಾರೆ. ಪಟಾಕಿಗಳಿಂದ ಬಂದ ಕಿಡಿಗಳು ವಾಹನದ ಮೇಲೆ ಬಿದ್ದು, ಒಳಗಿದ್ದ ಪಟಾಕಿಗಳ ಪೆಟ್ಟಿಗೆಗೆ ತಗುಲಿ ನಂತರ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
#BreakingNews #सहारनपुर: फतेहपुर के गंदेवद में शादी समारोह के दौरान सनरूफ से आतिशबाजी कर रहे युवक की कार में लगी आग। यह घटना कैमरे में कैद हुई, वीडियो वायरल।#FireAccident #ViralVideo #WeddingMishap pic.twitter.com/gw3tGX6VG0
— Pawan Sharma (Saraswat) (@Pwnkusharma) November 27, 2024
ಘಟನೆಯ ಆಘಾತಕಾರಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಯುವಕರು ಕಾರಿನ ಸನ್ರೂಫ್ ಅಲ್ಲಿ ನಿಂತು ಪಟಾಕಿ ಸಿಡಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ ಕಿಡಿ ಕಾರಿನ ಒಳಗೆ ಬಿದ್ದು ಕಾರಿಗೆ ಬೆಂಕಿ ಹತ್ತಿಕೊಂಡಿತ್ತು.
ವರದಿ ಪ್ರಕಾರ, ರಾಜ್ಯದ ಗಂಡ್ವೇಡಾ ಗ್ರಾಮದ ನಿವಾಸಿಯೊಬ್ಬರ ಮದುವೆ ಮೆರವಣಿಗೆಯ ವೇಳೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ವರನ ಮೆರವಣಿಗೆ ರಾತ್ರಿ ಡೆಹ್ರಾಡೂನ್ಗೆ ಹೊರಡುತ್ತಿದ್ದಾಗ ಆಚರಣೆ ಸಮಯದಲ್ಲಿ ಈ ಅಪಾಯ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರಿಬ್ಬರನ್ನು ವರನ ಸಹೋದರ ಜಾವೇದ್ ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಕಾರಿನಲ್ಲಿ ಪಟಾಕಿ ಸಿಡಿಸಿ ಗಾಯಗೊಂಡ ಇಬ್ಬರೂ ಯುವಕರನ್ನು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿ ಹೇಳಿದ ಸುಳ್ಳಿನಿಂದಾಗಿ ಶಿಕ್ಷಕನ ಶಿರಚ್ಛೇದ; ವಿಚಾರಣೆ ವೇಳೆ ಶಾಕಿಂಗ್ ಸಂಗತಿ ಬಯಲು
ಇತ್ತೀಚೆಗೆ ಮಹಾರಾಷ್ಟ್ರದ ಜಲ್ಗಾಂವ್ನ ಜಿಲ್ಲೆಯ ದಾದಾವಾಡಿ ಪ್ರದೇಶದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬ್ಯುಲೆನ್ಸ್ಗೆ ಬೆಂಕಿ ತಗುಲಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಸ್ಫೋಟಗೊಂಡಿದ್ದು, ಅದರಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬ ಭಾರೀ ದುರಂತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಸ್ಫೋಟದ ಪರಿಣಾಮದಿಂದಾಗಿ ಹತ್ತಿರದ ಮನೆಗಳ ಕಿಟಕಿಗಳು ಸಹ ಛಿದ್ರಗೊಂಡಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಸ್ಫೋಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.