ಟೋಕಿಯೊ: ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿರುವ ಜಪಾನಿನ ವ್ಯಕ್ತಿ ಕೋಕಿ ಶಿಶಿಡೋ, ಭಾರತ ದೇಶದಲ್ಲಾದ ತನ್ನ ಅನುಭವಗಳನ್ನು ಆಗಾಗ ತನ್ನ ಫಾಲೋವರ್ಸ್ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಭಾರತೀಯ ಪಾಕಶಾಸ್ತ್ರದ ಬಗ್ಗೆ ತನ್ನ ಉತ್ಸಾಹವನ್ನು ಪ್ರದರ್ಶಿಸುವ ವೈರಲ್ ರೀಲ್ಸ್‌ಗಳಿಗೆ ಹೆಸರುವಾಸಿಯಾದ ಕೋಕಿ ಇತ್ತೀಚೆಗೆ ಭಾರತದ ಹೊಸ ರುಚಿಯೊಂದರ ಬಗ್ಗೆ ಜಪಾನಿನ ಜನರಿಗೆ ತಿಳಿಸಿದ್ದಾರೆ. ಅದು ಯಾವುದೆಂದರೆ ಹೆಚ್ಚು ಜನರು ಇಷ್ಟಪಡುವಂತಹ ಭಾರತೀಯರ ಜೀರ್ಣಕಾರಿ ಟ್ಯಾಬ್ಲೆಟ್ ಹಜ್ಮೋಲಾವನ್ನು ಜಪಾನ್‍ನಲ್ಲಿರುವ ತನ್ನ ಸ್ನೇಹಿತರು ಮತ್ತು ಪರಿಚಿತರಿಗೆ ಪರಿಚಯಿಸಿದ್ದಾರೆ. ಇದರ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ಜನರ ಪ್ರಾಮಾಣಿಕ ಪ್ರತಿಕ್ರಿಯೆಗಳನ್ನು ನೋಡಲು ಹಜ್ಮೋಲಾ ಮಾತ್ರೆಯನ್ನು ಅವರಿಗೆ ನೀಡಿ ಅದನ್ನು ಪಾಪ್ ಮಾಡಲು ಹೇಳಿದ್ದಾರೆ. ಅದನ್ನು ತಿಂದ ಜನರು ಉತ್ತಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಾಗಾಗಿ ಈ ವಿಡಿಯೊ ಹೆಚ್ಚಿನ ಜನರ ಗಮನ ಸೆಳೆದು ವೈರಲ್ ಆಗಿದೆ.
ಹಜ್ಮೋಲಾ ಮಾತ್ರೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡಲು ಉಪ್ಪು ಮತ್ತು ಮಸಾಲೆಗಳ ಸಂಯೋಜನೆಯಾಗಿದೆ. ಈ ಮಾತ್ರೆಗಳನ್ನು ಭಾರತದಲ್ಲಿ ಊಟದ ನಂತರ ಸೇವಿಸುತ್ತಾರೆ. ಹಾಗಾಗಿ ಕೋಕಿ ತಮ್ಮ ಪ್ರೀತಿಪಾತ್ರರಿಗೆ ಇದನ್ನು ನೀಡಿದಾಗ ಅವರು ಅದರ ರುಚಿಗೆ ಆಶ್ಚರ್ಯಚಕಿತರಾಗಿದ್ದಾರೆ. ಅವರ ಪ್ರತಿಕ್ರಿಯೆಗಳು ಬಹಳ ತಮಾಷೆಯಿಂದ ಕೂಡಿತ್ತು.
ಹಜ್ಮೋಲಾವನ್ನು ತಿಂದ ಅವರ ಸ್ನೇಹಿತರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಾತ್ರೆಯನ್ನು ಕೋಕಿಯ ಅಜ್ಜಿಯರು ಕೂಡ ತಿಂದಿದ್ದಾರೆ. ಇಬ್ಬರು ರೆಸ್ಟೋರೆಂಟ್ ಮಾಲೀಕರು ಇದನ್ನು ಬಹಳ ಖುಷಿಯಿಂದ ತಿಂದಿದ್ದಾರೆ. ಯಾಕೆಂದರೆ ಅವರು ಈ ಟ್ಯಾಬ್ಲೆಟ್ ಬಗ್ಗೆ ಕುತೂಹಲ ಹೊಂದಿದ್ದರು.
ಇದನ್ನೂ ಓದಿ:ಮದುವೆಯ ಮೆರವಣಿಗೆ ವೇಳೆ ಕಾರಿನ ಸನ್ ರೂಫ್ ಮೂಲಕ ಪಟಾಕಿ ಸಿಡಿಸಿದ ಪುಂಡರು; ಮುಂದೇನಾಯ್ತು? ವಿಡಿಯೊ ನೋಡಿ
“ಈ ಮಸಾಲೆ ರುಚಿಯ ಹಜ್ಮೋಲಾ ರೆಸ್ಟೋರೆಂಟ್ ನಡೆಸುತ್ತಿರುವ ದಂಪತಿಗೆ ಇಷ್ಟವಾಗಿದೆ. ಹಾಗಾಗಿ ಅವರು ಹಜ್ಮೋಲಾವನ್ನು ಇಷ್ಟಪಟ್ಟಿದ್ದಾರೆ” ಎಂದು ಕೋಕಿ ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ವೀಕ್ಷಕರು ವಿಭಿನ್ನವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ನಗುವಿನ ಎಮೋಜಿಗಳು ತುಂಬಿದ್ದವು.