Thursday, 28th November 2024

Viral News: ತಿಂಗಳಿಗೆ 1.2 ಲಕ್ಷ ಸಂಬಳ ಪಡೆಯುವ ವರನನ್ನು ಮಂಟಪದಲ್ಲೇ ರಿಜೆಕ್ಟ್‌ ಮಾಡಿದ ವಧು… ಕಾರಣ ಕೇಳಿದ್ರೆ ಶಾಕ್‌ ಆಗುತ್ತೆ!

Government Job

ಲಖನೌ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವತಿಯರು ಸರ್ಕಾರಿ(Government Job) ಕೆಲಸವಿರುವ ಉದ್ಯೋಗಿಯನ್ನು ಮದುವೆಯಾಗಲು ಬಯಸುತ್ತಿದ್ದಾರೆ.ಇಂತಹ ಸರ್ಕಾರಿ ಉದ್ಯೋಗಿಯನ್ನು ಮದುವೆಯಾಗುವ ಹಂಬಲವಿರುವ ಯುವತಿಯೊಬ್ಬಳು ಇತ್ತೀಚೆಗೆ ತನ್ನ ಮದುವೆಯನ್ನು ಮುರಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವರಮಾಲಾ ಆಚರಣೆ ಮುಗಿದ ನಂತರ ವಧು, ವರನಿಗೆ ಸರ್ಕಾರಿ ಉದ್ಯೋಗವಿಲ್ಲ ಎಂದು ಗೊತ್ತಾಗಿ ತಿಂಗಳಿಗೆ 1.2 ಲಕ್ಷ ರೂ, ಸಂಬಳ ಪಡೆಯುವ ವರನ ಜೊತೆಗೆ  ಮದುವೆಯಾಗಲು ನಿರಾಕರಿಸಿದ್ದಾಳೆ(Viral News).

ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಧು ತಿರಸ್ಕರಿಸಿದ ನಂತರ ಮದುವೆ ಮೆರವಣಿಗೆ ಬರಿಗೈಯಲ್ಲಿ ಮರಳಿದೆ. ವರ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 1.2 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾಳೆ. ಛತ್ತೀಸ್‍ಗಢದ ಬಲರಾಂಪುರ ಮೂಲದವರಾದ ಅವರು ಆರು ಪ್ಲಾಟ್‍ಗಳು ಮತ್ತು 20 ಎಕರೆ ಭೂಮಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಇಷ್ಟೊಂದು ಆಸ್ತಿ-ಪಾಸ್ತಿ ಇದ್ದರೂ ವಧು ವರನಿಗೆ ಸರ್ಕಾರಿ ಉದ್ಯೋಗವಿಲ್ಲವೆಂದು ಮದುವೆಯಾಗಲು ನಿರಾಕರಿಸಿದ್ದಾಳೆ.

ವರದಿ ಪ್ರಕಾರ, ಮದುವೆಯ ರಾತ್ರಿ, ಬರಾತ್ ಅತಿಥಿ ಗೃಹವನ್ನು ತಲುಪಿತ್ತು ಮತ್ತು ದ್ವಾರಚಾರ್ ಆಚರಣೆಯನ್ನು ನಡೆಸಲಾಗಿತ್ತು. ಇದರ ನಂತರ ವರಮಾಲಾ ಆಚರಣೆ ನಡೆಯಿತು. ಆಗ ತಡರಾತ್ರಿಯಾಗಿತ್ತು. ಇದೆಲ್ಲಾ ಆದ ಬಳಿಕ ವಧುವಿಗೆ ವರನಿಗೆ ಸರ್ಕಾರಿ ಉದ್ಯೋಗವಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಅದರ ನಂತರ ಮದುವೆಯ ಆಚರಣೆಗಳನ್ನು ಮುಂದುವರಿಸಲು ಅವರು ನಿರಾಕರಿಸಿದ್ದಾಳೆ. ಎರಡೂ ಕುಟುಂಬಗಳು ವಧುವಿನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ತಮ್ಮ ನಿಲುವಿನಿಂದ ಹಿಂದೆ ಸರಿಯಲು ಅವರು ನಿರಾಕರಿಸಿದ್ದಾಳೆ. ವಧುವಿನ ಈ ನಿರ್ಧಾರ ಎರಡೂ ಕಡೆಯ ಕುಟುಂಬದವರನ್ನು ದಿಗ್ಭ್ರಮೆಗೊಳಿಸಿದೆ.

ಇದನ್ನೂ ಓದಿ:ಏಕಾಏಕಿ ಸಾಧುವಿನ ಜಡೆ ಹಿಡಿದು ಮೇಲಕ್ಕೆತ್ತಿದ ಖಲಿ! ವಿಡಿಯೊ ಫುಲ್‌ ವೈರಲ್‌

ಆದರೆ ವಧು ಮದುವೆಯಾಗಲು ಸಾಧ್ಯವಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾಳೆ.  ಹಾಗಾಗಿ  ಅಂತಿಮವಾಗಿ ಎರಡೂ ಕುಟುಂಬಗಳು ತಮ್ಮೊಳಗೆ ಚರ್ಚೆ ಮಾಡಿ ಮದುವೆಯನ್ನು ನಿಲ್ಲಿಸಿದ್ದಾರೆ. ಈ  ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.