ಬೀಜಿಂಗ್: ನಾವು ಮನುಷ್ಯದ ದೇಹದೊಳಗೆ ಕೀಟಗಳು, ಹುಳುಗಳು ಸೇರಿಕೊಳ್ಳುವುದನ್ನು ನೋಡಿದ್ದೇವೆ. ಕೆಲವು ಬಾರಿ ಕಿವಿಯೊಳಗೆ ಕೀಟಗಳು ಹೋಗುವುದು, ಜೇಡ ಬಲೆ ಹಣೆಯುವುದು ಹೀಗೆ ಹತ್ತಾರು ಪ್ರಕರಣಗಳ ನೋಡಿದ್ದೇವೆ. ಇನ್ನು ಕೆಲವು ಬಾರಿ ಎಂತಹ ವಿಚಿತ್ರ ಘಟನೆ ನಡೆಯುತ್ತದೆ ಎಂದರೆ ಮೂಗಿನೊಳಗೆ ದೊಡ್ಡ ಕೀಟ ಸೇರುವುದು, ಕಿವಿಯೊಳಗೆ ಸೇರಿಕೊಂಡು ಶಸ್ತ್ರಚಿಕಿತ್ಸೆ ನಡೆಸಬೇಕಾದಂತಹ ಚಿತ್ರ ವಿಚಿತ್ರ(bizzare) ಘಟನೆಗಳನ್ನು ನೋಡಿದ್ದೇವೆ(Viral News).
ಆದರೆ ನೀವೆಂದಾದರು ವ್ಯಕ್ಯಿಯ ಮೂಗಿನೊಳಗೆ 2 ಸೆಂ.ಮೀ ಉದ್ದದ ಡೈಸ್(dice) ಇದ್ದ ಘಟನೆ ಕೇಳಿದ್ದೀರ. ಹೌದು ಇಲ್ಲೊಬ್ಬ ವ್ಯಕ್ತಿಯ ಮೂಗಿನಿಂದ ವೈದ್ಯರು 2 ಸೆಂ.ಮೀ ಉದ್ದದ ಡೈಸ್ ಅನ್ನು ಹೊರತೆಗೆದಿದ್ದಾರೆ. ಉತ್ತರ ಚೀನಾದ(Northern China) ಶಾಂಕ್ಸಿ ಪ್ರದೇಶದ(Shanxi region) ಕ್ಸಿಯಾನ್ನ 23 ವರ್ಷದ ವ್ಯಕ್ತಿಗೆ ನಿರಂತರವಾಗಿ ಸೀನ್ ಬರುತ್ತಿದ್ದ ಕಾರಣ ಆತ ವೈದ್ಯರ ಬಳಿ ಹೋದಾಗ ವೈದ್ಯರೇ ಶಾಕ್ ಆಗಿದ್ದಾರೆ. ಬಳಿಕ ಒಂದು ಡೈಸ್ ಹೊರತೆಗೆದಿದ್ದಾರೆ.
ಅಚ್ಚರಿಯ ವಿಚಾರವೆಂದರೆ ಜಾಕ್ಸನ್ಗೆ ಮೂಗಿನೊಳಗೆ ಅಷ್ಟೊಂದು ಉದ್ದದ ಡೈಸ್ ಇದೆ ಎಂಬುದೇ ತಿಳಿದಿರಲಿಲ್ಲವಂತೆ. ಆದರೆ ಕೆಲ ತಿಂಗಳಿಂದ ಮೂಗಿನಲ್ಲಿ ನೋವು ಕಾಣಿಸಿಕೊಂಡಿತ್ತು. ಇಷ್ಟಾದರೂ ಆತ ವೈದ್ಯರ ಬಳಿ ಹೋಗಿರಲಿಲ್ಲ. ಆದರೆ ಮೂಗು ಊದಿಕೊಂಡು ಬಳಿಕ ನಿರಂತರ ಸೀನುವಿಕೆ ಮತ್ತು ಸ್ರವಿಸುವ ಆರಂಭಿಸಿದಾಗ ಆತ ವೈದ್ಯರ ಬಳಿ ತೆರಳಿದ್ದ.
ಮೂಗು, ಬಾಯಿ ಊದಿಕೊಂಡಾಗ ವೈದ್ಯರ ಬಳಿ ಬಂದಾಗ, ಅವರು ಮೊದಲು ಸಣ್ಣ ಕ್ಯಾಮರಾವನ್ನು ಬಳಸಿ ಮೂಗಿನಲ್ಲಿ ಏನಾಗಿದೆ ಎಂದು ಅರಿಯಲು ಮುಂದಾದರು. ಈ ವೇಳೆ ಅವರಿಗೆ ಒಳಗೆ ಡೈಸ್ ಇರುವುದು ತಿಳಿದುಬಂದಿದೆ. ಹೀಗಾಗಿ ಅವರು ಸಣ್ಣ ಇಕ್ಕಳ ಬಳಸಿ ಡೈಸ್ ಹೊರತೆಗೆಯಲು ಮುಂದಾದರು.
ಅಲ್ಲಿನ ಸ್ಥಳೀಯ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಹಂಚಿಕೊಂಡ ಮಾಹಿತಿ ಪ್ರಕಾರ, ಜಾಕ್ಸನ್ಗೆ ನೋವು ಕಾಣಿಸಿಕೊಂಡ ಪ್ರಾರಂಭದಲ್ಲಿ ಮನೆಯಲ್ಲೇ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು, ಅದು ವಾಸಿಯಾಗದಿದ್ದಾಗ ವೈದ್ಯರ ಬಳಿ ಹೋದರು. ಸಮಸ್ಯೆಯನ್ನು ಕ್ಸಿಯಾನ್ನ ಗಾಕ್ಸಿನ್ ಆಸ್ಪತ್ರೆಯ ವೈದ್ಯರಿಗೆ ತಿಳಿಸಿದರು. ಯಾವುದೋ ಅಲರ್ಜಿಯಾಗಿರಬಹುದು ಎಂದು ವೈದ್ಯರು ಅಂದುಕೊಂಡರು. ಆದರೆ, ಮೂಗಿನ ಎಂಡೋಸ್ಕೋಪಿ ಮಾಡಿಸಿದಾಗ ಅದರಲ್ಲಿ ಏನೋ ಇರುವುದು ಡೈಸ್ ಕಂಡುಬಂದಿದೆ.
ಇನ್ನು ಜಾಕ್ಸನ್ಗೆ ಸುಮಾರು ಮೂರು-ನಾಲ್ಕು ವರ್ಷವಿರುವಾಗಲೇ, ಆಕಸ್ಮಿಕವಾಗಿ ಆತನ ಮೂಗಿನೊಳಗೆ ಡೈಸ್ ಹೋಗಿತ್ತು ಎಂಬುದನ್ನು ಆತ ತಿಳಿಸಿದ್ದು, ಈ ಡೈಸ್ ಸುಮಾರು 20 ವರ್ಷಗಳವರೆಗೆ ಅವರ ಮೂಗಿನೊಳಗೆ ಇತ್ತು. ಅದೃಷ್ಟದ ಸಂಗತಿಯೆಂದರೆ 20 ವರ್ಷಗಳಿಂದ ಮೂಗಿನಲ್ಲಿ ಹುಣ್ಣು ಇದ್ದರೂ ಯಾವುದೇ ಗಂಭೀರ ಕಾಯಿಲೆಗೆ ತುತ್ತಾಗಿರಲಿಲ್ಲ.
ಮಹಿಳೆ ಕಿವಿಯೊಳಗಿತ್ತು ಜೀವಂತ ಜೇಡ
ಕಳೆದ ವರ್ಷ ಮಾರ್ಚ್ನಲ್ಲಿ ಇಂತಹದ್ದೆ ಇನ್ನೊಂದು ಘಟನೆ ವರದಿಯಾಗಿದ್ದನ್ನು ನಾವಿಲ್ಲಿ ನೆನಯಬಹದು. ಮಹಿಳೆಯೊಬ್ಬರ ಕಿವಿಯಲ್ಲಿ ಜೀವಂತ ಜೇಡವೊಂದು ಗೂಡುಕಟ್ಟಿತ್ತು. ಆಕೆ ಕಿವಿನೋವು ಎಂದು ವೈದ್ಯರ ಬಳಿ ತೆರಳಿದಾಗ ಕಿವಿಯಲ್ಲಿ ಜೇಡಿ ಗೂಡು ಕಟ್ಟಿರುವುದು ಬೆಳಕಿಗೆ ಬಂದಿತ್ತು. ಅಚ್ಚರಿ ಎಂದರೆ ಆಕೆಗೆ ಕಿವಿ ನೋವು ಆರಂಭವಾಗಿ ಒಂದು ತಿಂಗಳು ಕಳೆದಿತ್ತು.
ಒಂದು ತಿಂಗಳಿಂದ ಜೇಡ ಕಿವಿಯಲ್ಲೇ ಇತ್ತು. ಬಳಿಕ ವೈದ್ಯರು ಆಕೆಯ ಕಿವಿಯೊಳಗೆ ಔಷಧಿಯ ಡ್ರಾಪ್ಸ್ ಹಾಕುವ ಮೂಲಕ ಜೇಡ ಹೊರಬರುವಂತೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಭಾರೀ ಸದ್ದು ಮಾಡಿತ್ತು. ಇನ್ನೊಂದು ಪ್ರಕರಣದಲ್ಲಿ ರೋಗಿಯ ಒಳಕಿವಿಯಲ್ಲಿ ಕೀಟವೊಂದು ಪತ್ತೆಯಾಗಿತ್ತು. ಇದು ಎಕ್ಸ್ ರೇ ಮಾಡಿದ ಬಳಿಕ ಕಂಡುಬಂದಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಘಟನೆ ನಡೆದಿತ್ತು. ಅಚ್ಚರಿ ಎಂದರೆ ಆ ಕೀಟ ಆತನ ದೇಹದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಮಾಡಿತ್ತು. ಎಕ್ಸ್ರೆಯಲ್ಲಿ ಅದೊಂದು ಸಣ್ಣ ಜಿರಳೆ ಆಕಾರದಲ್ಲಿ ಕಂಡು ಬಂದಿತ್ತು. ಬಳಿಕ ಆತನಿಗೆ ಶಸ್ತ್ರಚಿಕಿತ್ಸೆ ನೆರವೇರಿಸಬೇಕಾಗಿ ಬಂದಿತ್ತು.
ಈ ಸುದ್ದಿಯನ್ನೂ ಓದಿ: Crime News: ಆಸ್ಪತ್ರೆಯ ಟಾಯ್ಲೆಟ್ನಲ್ಲಿ ನವಜಾತ ಶಿಶು ಹಾಕಿ ಫ್ಲಶ್ ಮಾಡಿದ ಕ್ರೂರಿ ತಾಯಿ!