ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಸ್ಫೋಟ(Delhi Blast)ವೊಂದು ಸಂಭವಿಸಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಬಳಿ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ಗುರುವಾರ ವರದಿ ಮಾಡಿದೆ.
Delhi | "A call regarding a blast was received from the Prashant Vihar area at 11.48 AM today. Fire tenders have reached the site," says Delhi Fire Service.
— ANI (@ANI) November 28, 2024
Details awaited.
“ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಬೆಳಿಗ್ಗೆ 11:48 ಕ್ಕೆ ಸ್ಫೋಟದ ಬಗ್ಗೆ ನಮಗೆ ಕರೆ ಬಂದಿತು. ನಾವು ತಕ್ಷಣವೇ ನಾಲ್ಕು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ನಮ್ಮ ತಂಡಗಳು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಕೆಲಸ ಮಾಡುತ್ತಿವೆ” ಎಂದು ಅವರು ಹೇಳಿದ್ದಾರೆ. ವರದಿಗಳ ಪ್ರಕಾರ, ಸ್ಫೋಟದ ಬಗ್ಗೆ ಕರೆ ಸ್ವೀಕರಿಸಲಾಗಿದೆ ಮತ್ತು ಹಲವಾರು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿವೆ.
VIDEO | Explosion reported in Prashant Vihar area of #Delhi. Fire tenders reach the spot. More details awaited.
— Press Trust of India (@PTI_News) November 28, 2024
(Full video available on PTI Videos – https://t.co/n147TvrpG7) pic.twitter.com/Rchohvl1vY
ಇನ್ನು ಘಟನಾ ಸ್ಥಳದಲ್ಲಿ ಬಿಳಿಯ ಪುಡಿಯಂತಹ ವಸ್ತು ಪತ್ತೆಯಾಗದ್ದು, ಈ ಸ್ಫೋಟ ಹೇಗೆ ಸಂಭವಿಸಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ದೌಡಾಯಿಸಿ ತನಿಖೆ ಆರಂಭಿಸಿದ್ದು, ಎನ್‌ಐಎ ಕೂಡ ತನಿಖೆಗೆ ಸಹಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಚಂಡೀಗಢದ ಎರಡು ನೈಟ್‌ಕ್ಲಬ್‌ಗಳ (Night Club) ಬಳಿ ಅವಳಿ ಬಾಂಬ್ ಸ್ಫೋಟ ಸಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಸ್ಫೋಟದಿಂದಾಗಿ ಹಲವಾರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಮಂಗಳವಾರ ಮುಂಜಾನೆ 3.15 ರ ಸರಿ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನೈಟ್‌ಕ್ಲಬ್‌ಗಳ ಮೇಲೆ ಕಡಿಮೆ ತೀವ್ರತೆಯ ಬಾಂಬ್ ಎಸೆದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ. ವ್ಯಕ್ತಿಯಿಬ್ಬರು ಬಾಂಬ್ ಎಸೆದು ಓಡಿ ಹೋಗುತ್ತಿರುವ ದೃಶ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು.
ಸ್ಫೋಟಕ್ಕೆ ಒಳಗಾದ ನೈಟ್ ಕ್ಲಬ್ ಖ್ಯಾತ ರಾಪರ್ ಗಾಯಕ ಬಾದ್ ಶಾ (Badshah) ಅವರಿಗೆ ಸೇರಿದ್ದು, ಸ್ಫೋಟಗೊಂಡ ಬಾಂಬ್ ಪರಿಣಾಮವಾಗಿ ಅವರ ರೆಸ್ಟೋರೆಂಟ್ ನ ಗಾಜು ಒಡೆದು ಹೋಗಿರುವುದು ಕಂಡು ಬಂದಿದೆ.
ಸ್ಫೋಟ ಸಂಭವಿಸಿದ ವೇಳೆ ಜೋರಾದ ಶಬ್ದವನ್ನು ಕೇಳಿ ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬರು ಹೊರಗೆ ಓಡಿ ಬಂದಿದ್ದಾರೆ. “ಸ್ಫೋಟಗೊಂಡ ಸದ್ದು ಕೇಳಿದ ಕೂಡಲೇ ನಾವು ಹೊರಗಡೆಗೆ ಓಡಿ ಬಂದೆವು. ಬಾಗಿಲಿನ ಗಾಜು ಒಡೆದು ಹೋಗಿತ್ತು. ಸ್ಫೋಟ ಸಂಭವಿಸಿದ ಸಮಯದಲ್ಲಿ ರೆಸ್ಟೋರೆಂಟ್ ಒಳಗೆ 7-8 ಕಾರ್ಮಿಕರು ಇದ್ದರು. ಯಾರಿಗೂ ಹಾನಿಯಾಗಿಲ್ಲ. ಬೆಳಗಿನ ಜಾವ 3:15ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದೇವೆ” ಎಂದು ಪೂರನ್ ಎಂಬ ರೆಸ್ಟೋರೆಂಟ್ ನ ಉದ್ಯೋಗಿ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Rameshwaram Cafe blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ನ ಶಂಕಿತ ಉಗ್ರರಿಗೆ ಐಸಿಸ್ ನಂಟು; ಸ್ಫೋಟಕ ವಿಚಾರ ಬಯಲು!