ಮುಂಬೈ : ಜೈಲಿನಲ್ಲಿರುವ ಗ್ಯಾಂಗ್ಸ್ಟರ್ (Gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಅವರನ್ನು ವೈಭವೀಕರಿಸಿ ಹಾಡುಗಳನ್ನು ನಿರ್ಮಿಸಿದವರ ವಿರುದ್ಧ ಬಾಲಿವುಡ್ ನ ಪ್ರಖ್ಯಾತ ನಟಿ ಸ್ವರಾ ಭಾಸ್ಕರ್ (Swara Bhasker) ವಾಗ್ದಾಳಿ ನಡೆಸಿದ್ದಾರೆ. ಸೂಪರ್ಸ್ಟಾರ್ ಸಲ್ಮಾನ್ ಖಾನ್(Salman Khan) ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಗ್ಯಾಂಗ್ಸ್ಟರ್ ಗಳು ಆ ಹಾಡಿನಲ್ಲಿದ್ದು, ಎಕ್ಸ್ ಬಳಕೆದಾರರು ಹಾಡುಗಳ ಪೋಸ್ಟರ್ಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ವೈಭವೀಕರಿಸಿ ಹಾಡುಗಳನ್ನು ನಿರ್ಮಿಸಿದವರನ್ನು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ದರೋಡೆಕೋರರು ಹಾಡುಗಳಲ್ಲಿದ್ದು, ಆ ಸ್ಕ್ರೀನ್ಶಾಟ್ಗಳನ್ನು ಎಕ್ಸ್ ಬಳಕೆದಾರರು ಗುರುವಾರದಂದು (ನವೆಂಬರ್ 28) ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
What a dangerously idiotic people we have become!!!
— Swara Bhasker (@ReallySwara) November 28, 2024
ಹಾಡುಗಳಿಗೆ ಸಂಬಂಧಿಸಿದ ಪೋಸ್ಟರ್ಗಳಲ್ಲಿ ಬಿಷ್ಣೋಯಿ ಅವರ ಫೋಟೋಶಾಪ್ ಮಾಡಿರುವ ಚಿತ್ರಗಳಿವೆ ಎಂದು ತಿಳಿದು ಬಂದಿದೆ. ಅದರಲ್ಲಿನ ಒಂದು ಹಾಡಿಗೆ ‘ಮೇರಾ ಯಾರ್ ಲಾರೆನ್ಸ್ ಬಿಷ್ಣೋಯ್’ ಎಂಬ ಟೈಟಲ್ ನೀಡಲಾಗಿದೆ. ಮತ್ತೊಂದು ಹಾಡಿನ ಪೋಸ್ಟರ್ನಲ್ಲಿ ಸಲ್ಮಾನ್ ಖಾನ್ ಮತ್ತು ಬಿಷ್ಣೋಯ್ ಗ್ಯಾಂಗ್ನಿಂದ ಜೀವ ಬೆದರಿಕೆಗೆ ಒಳಗಾಗಿ ನಂತರ ನಟನಿಗೆ ಸಂಪೂರ್ಣವಾಗಿ ಬೆಂಬಲ ನೀಡಿದ್ದ, ಬಿಹಾರ್ ನ ಸಂಸದ ಪಪ್ಪು ಯಾದವ್ ಅವರ ಫೋಟೋಗಳಿದ್ದು,ಅದು ಈಗ ಸಾಕಷ್ಟು ವೈರಲ್ ಆಗಿದೆ.
“ಸ್ಪಾಟಿಫೈ(Spotify),ಆಪಲ್ ಮ್ಯೂಸಿಕ್(Apple Music), ಸೌಂಡ್ಕ್ಲೌಡ್(Soundcloud) ಮತ್ತು ಜಿಯೋ ಸಾವನ್ನಂತಹ(Jio Saavn) ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಲಾರೆನ್ಸ್ ಬಿಷ್ಣೋಯಿ ಅವರನ್ನು ವೈಭವೀಕರಿಸುವ ನೂರಾರು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ” ಎಂದು X ಬಳಕೆದಾರರು ಫೋಟೋಗಳೊಂದಿಗೆ ಬರೆದು ಪೋಸ್ಟ್ ಮಾಡಿದ್ದಾರೆ. ಎಲ್ಲಾ ವಯೋಮಾನದವರಿಗೂ ಇದು YouTube ನಲ್ಲಿ ಸುಲಭವಾಗಿ ಸಿಗುತ್ತದೆ ಎಂದು ಬಳಕೆದಾರರು ಹೇಳಿದ್ದಾರೆ.
ಹಾಡಿನ ವಿಚಾರದಲ್ಲಿ ಸಲ್ಮಾನ್ಗೆ ಜೀವ ಬೆದರಿಕೆ
ತಮ್ಮ ಸಿನಿಮಾದ ಹಾಡಿನಲ್ಲಿ ಬಿಷ್ಣೋಯ್ ಹೆಸರನ್ನು ಬಳಸಿದಕ್ಕಾಗಿ ನಟ ಸಲ್ಮಾನ್ ಖಾನ್ಗೆ ಈ ತಿಂಗಳ ಪ್ರಾರಂಭದಲ್ಲಿ ಮತ್ತೊಂದು ಜೀವ ಬೆದರಿಕೆ ಕರೆ ಬಂದಿತ್ತು. ನವೆಂಬರ್ 8 ರಂದು ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ನಲ್ಲಿ ಬೆದರಿಕೆಯ ಕುರಿತು ವರದಿಯಾಗಿತ್ತು. ಸಲ್ಮಾನ್ ಮತ್ತು ಬಿಷ್ಣೋಯಿ ಇಬ್ಬರ ಹೆಸರನ್ನು “ಮೈ ಹೂ ಸಿಕಂದರ್” ಎಂಬ ಹಾಡಿನಲ್ಲಿ ಉಲ್ಲೇಖಿಸಿದ್ದು, ಅದಕ್ಕಾಗಿ ಜೀವ ಬೆದರಿಕೆಯ ಸಂದೇಶವೊಂದು ಬಂದಿತ್ತು. ಸಲ್ಮಾನ್ ಖಾನ್ ಮಾತ್ರವಲ್ಲದೇ ಈ ಹಾಡಿನ ಗೀತರಚನೆಕಾರನಿಗೂ ಬೆದರಿಕೆ ಬಂದಿತ್ತು. ಬೆದರಿಕೆಯ ಕುರಿತು ವರ್ಲಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಯುತ್ತಿದೆ.
ಕೇವಲ 10 ದಿನಗಳ ಅವಧಿಯಲ್ಲಿ ಸಲ್ಮಾನ್ ಖಾನ್ ಅವರಿಗೆ ಒಟ್ಟು ನಾಲ್ಕು ಕೊಲೆ ಬೆದರಿಕೆಗಳು ಬಂದಿದ್ದು, ಇದು ಭದ್ರತಾ ಪಡೆಗೆ ಬಹುದೊಡ್ಡ ಸವಾಲಾಗಿದೆ. ಇನ್ನು ನಟ ಶಾರುಖ್ ಖಾನ್ ಅವರಿಗೂ ತಮ್ಮ 59 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕೊಲೆ ಬೆದರಿಕೆಯ ಕರೆ ಬಂದಿತ್ತು.
ಸಲ್ಮಾನ್ ಮತ್ತು ಬಿಷ್ಣೋಯ್ ಗ್ಯಾಂಗ್ನ ನಡುವಿನ ವೈಷಮ್ಯವು ಇಂದು ನಿನ್ನೆಯದ್ದಲ್ಲ.1998 ರಲ್ಲಿ “ಹಮ್ ಸಾಥ್ ಸಾಥ್ ಹೇ” ಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಟ ಬೇಟೆಯಾಡಲು ಹೋಗಿ ಕೃಷ್ಣಮೃಗವನ್ನು ಬೇಟೆಯಾಡಿದ್ದು ವರದಿಯಾಗಿತ್ತು. ಕೃಷ್ಣಮೃಗವನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಭಾವಿಸಿದ್ದು, ಸಲ್ಮಾನ್ ತಾನು ಮಾಡಿದ ಕೃತ್ಯಕ್ಕೆ ಕ್ಷಮೆ ಯಾಚಿಸಬೇಕು ಇಲ್ಲವಾದರೆ ಅವರನ್ನು ಕೊಲ್ಲುತ್ತೇನೆಂದು ಸಾರ್ವಜನಿಕವಾಗಿ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದ.
ಈ ಸುದ್ದಿಯನ್ನೂ ಓದಿ: Baba Siddique: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದಾಗಲೇ ನಡೆದಿತ್ತಾ ಸಿದ್ದಿಕಿ ಹತ್ಯೆ ಪ್ಲಾನ್ ?