ನವದೆಹಲಿ: ಬೆಂಗಳೂರು ಜೈಲು ಭಯೋತ್ಪಾದನೆ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ (LET) ನೊಂದಿಗೆ ಸಂಪರ್ಕ ಹೊಂದಿರುವ ಮೋಸ್ಟ್ ವಾಂಟೆಡ್ ಉಗ್ರನನ್ನು (Lashkar terrorist) ರುವಾಂಡಾದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಉಗ್ರನನ್ನು ಸಲ್ಮಾನ್ ರೆಹಮಾನ್ ಖಾನ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.
ಕೇಂದ್ರೀಯ ತನಿಖಾ ದಳ (CBI) ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಹಯೋಗದೊಂದಿಗೆ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ, ಮೂಲಕ ರುವಾಂಡಾದಿಂದ ವಾಂಟೆಡ್ ಲಷ್ಕರ್-ಎ-ತೈಬಾ ಕಾರ್ಯಕರ್ತ ಸಲ್ಮಾನ್ ರೆಹಮಾನ್ ಖಾನ್‌ನನ್ನು ಭಾರತಕ್ಕೆ ಕರೆತರಲಾಗಿದೆ. ಆತ ನವೆಂಬರ್ 27 ರಂದು ರುವಾಂಡಾದ ಕಿಗಾಲಿಯಲ್ಲಿ ಸಲ್ಮಾನ್ ಬಂಧಿತನಾಗಿದ್ದ.
CBI बैंगलुरु धमाके के आरोपी सलमान रहमान खान को रवांडा से भारत डिपोर्ट कर लायी। आरोपी सलमान लश्कर ए तैयबा का आतंकी है और बैंगलुरु जेल में आतंकियों की भर्ती मामले में शामिल था ताकी आतंकी वारदात की जा सके। NIA ने सलमान समेत आठ आरोपियों के खिलाफ जनवरी 2024 में चार्जशीट भी दाखिल की… pic.twitter.com/TznS9Hmi0n
— Jitender Sharma (@capt_ivane) November 28, 2024
ಬೆಂಗಳೂರಿನಲ್ಲಿ ದಾಖಲಾದ ಪ್ರಕರಣ
ಹೈ ಪ್ರೊಫೈಲ್ ಪ್ರಕರಣವೊಂದರಲ್ಲಿ ಬೇಕಾಗಿದ್ದ ಸಲ್ಮಾನ್ ರೆಹಮಾನ್ ಖಾನ್ ಮತ್ತು ಅವರ ಸಹಚರ ಜುನೈದ್ ಅಹ್ಮದ್ ತಲೆಮರೆಸಿಕೊಂಡಿದ್ದರು. ಕ್ರಿಮಿನಲ್ ಪಿತೂರಿ, ಭಯೋತ್ಪಾದಕ ಸಂಘಟನೆಯ ಸದಸ್ಯ, ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವುದು ಮತ್ತು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗೆ ಸಂಬಂಧಿಸಿದ ಇತರ ಅಪರಾಧಗಳಂತಹ ಅಪರಾಧಗಳಲ್ಲಿ ಖಾನ್ ಆರೋಪಿಯಾಗಿದ್ದಾನೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೂರೈಸಿದ್ದಕ್ಕಾಗಿ ಖಾನ್ ವಿರುದ್ಧ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಖಾನ್ ಮೇಲೆ ಪ್ರಕರಣ ದಾಖಲಾಗಿದೆ.
ಸಿಬಿಐನ ಕೋರಿಕೆಯ ಮೇರೆಗೆ, NIA ಆಗಸ್ಟ್ 2 ರಂದು ಖಾನ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (RCN) ಅನ್ನು ಜಾರಿಗೊಳಿಸಿದ ನಂತರ ಪ್ರಕರಣ ವೇಗ ಪಡೆದುಕೊಂಡಿತು. ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧಾರವಾಗಿಸಿಕೊಂಡು ರುವಾಂಡದಲ್ಲಿ ಆತನ್ನು ಪತ್ತೆ ಮಾಡಲಾಗಿದೆ. ರುವಾಂಡಾ ಇನ್ವೆಸ್ಟಿಗೇಶನ್ ಬ್ಯೂರೋ ಆತನ್ನು ಹಸ್ತಾಂತರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
In the framework of international cooperation in fighting cross-border crime, today, 27th Nov 2024, Rwanda has extradited Mr. Salman KHAN alias Salma (30 years) wanted by the Government of India for his association with a Terrorist group operating on its territory.
— Rwanda Investigation Bureau (@RIB_Rw) November 27, 2024
The suspect… pic.twitter.com/9WYbVtUMMR
ಇದನ್ನೂ ಓದಿ : Manipur Violence: ಮಣಿಪುರ ಅಪಹರಣ-ಹತ್ಯೆ ಪ್ರಕರಣ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಯ್ತು ಕುಕಿ ಉಗ್ರರ ಅಟ್ಟಹಾಸ